ಬಿಜೆಪಿ ಸಂಸತ್ತಿನ ಸ್ಥಾಯಿ ಸಮಿತಿಯನ್ನು ನಿಯಂತ್ರಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಎರಡು ಸಮಿತಿಯಲ್ಲಿ ಬಿಜೆಪಿಯ ಒಟ್ಟು 26 ಸಂಸದರು ಇದ್ದಾರೆ. ಇದು ‘ಓರ್ವ ಸಂಸದ, ಒಂದು ಸ್ಥಾಯಿ ಸಮಿತಿ’ ಎಂಬ ಸಾಂಪ್ರಾದಾಯಿಕ ನಿಯಮಕ್ಕೆ ವಿರುದ್ಧವಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
ಈ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “1990ರ ನಡುವೆ ಸಂಸತ್ತಿನ ಸ್ಥಾಯಿ ಸಮಿತಿಯನ್ನು ಸ್ಥಾಪನೆ ಮಾಡಿದಾಗಿನಿಂದ ‘ಓರ್ವ ಸಂಸದ, ಒಂದು ಸ್ಥಾಯಿ ಸಮಿತಿ’ ಎಂಬ ನಿಯಮವನ್ನು ಪಾಲಿಸಲಾಗಿದೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕೇಂದ್ರ ಬಜೆಟ್ ಅಧಿವೇಶನ | ವಕ್ಫ್ ಸೇರಿ ಒಟ್ಟು 16 ಮಸೂದೆ ಮಂಡನೆ ಸಾಧ್ಯತೆ
“ಆದರೆ ಈಗ ಸುಮಾರು 26 ಬಿಜೆಪಿ ಸಂಸದರು ಎರಡೂ ಸಂಸತ್ತಿನ ಸ್ಥಾಯಿ ಸಮಿತಿಯಲ್ಲಿಯೂ ಇದ್ದಾರೆ. ಇದರಿಂದಾಗಿ ಬಿಜೆಪಿ ಹೇಗೆ ಎರಡೂ ಸ್ಥಾಯಿ ಸಮಿತಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ ಎಂಬುದು ತಿಳಿದುಬರುತ್ತಿದೆ” ಎಂದು ಕಾಂಗ್ರೆಸ್ ನಾಯಕ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕಳೆದ ಸೆಪ್ಟೆಂಬರ್‌ನಲ್ಲಿ ಎರಡು ಸ್ಥಾಯಿ ಸಮಿತಿಗಳನ್ನು ಸ್ಥಾಪಿಸಲಾಗಿದೆ. ಬಿಜೆಪಿಯ ಭರ್ತುಹರಿ ಮಹ್ತಾಬ್ ಹಣಕಾಸು ಸಮಿತಿಯ ಮುಖ್ಯಸ್ಥರಾಗಿದ್ದರೆ, ಕಾಂಗ್ರೆಸ್ ಸಂಸದ ಶಶಿ ತರೂರ್ ವಿದೇಶಾಂಗ ವಹಿವಾಟು ಸ್ಥಾಯಿ ಸಮಿತಿಯ ಮುಖ್ಯಸ್ಥರಾಗಿದ್ದಾರೆ.
Since the establishment of the Standing Committees in the mid-1990s, Parliament has followed a One MP, One Standing Committee rule. Now there are 26 BJP MPs who are members of 2 Standing Committees. This shows how the Duo are seeking to control the Standing Committees.
— Jairam Ramesh (@Jairam_Ramesh) January 30, 2025
ಸ್ಥಾಯಿ ಸಮಿತಿಯ ಒಟ್ಟು 24 ಇಲಾಖೆಗಳಿದ್ದು, ಈ ಪೈಕಿ 11ರ ಅಧ್ಯಕ್ಷತೆಯನ್ನು ಬಿಜೆಪಿ ವಹಿಸಿಕೊಂಡಿದೆ, ನಾಲ್ಕರ ಅಧ್ಯಕ್ಷತೆ ಬಿಜೆಪಿ ಮಿತ್ರ ಪಕ್ಷದ್ದಾಗಿದೆ.
ಉಳಿದ ಹತ್ತು ಇಲಾಖೆ ಅಧ್ಯಕ್ಷತೆ ವಿಪಕ್ಷ ನಾಯಕರ ಕೈಯಲ್ಲಿದೆ. ಈ ಪೈಕಿ ಕಾಂಗ್ರೆಸ್ ನಾಯಕರು ನಾಲ್ಕು, ಡಿಎಂಕೆ ಮತ್ತು ತೃಣಮೂಲ ಕಾಂಗ್ರೆಸ್ ಸಂಸದರು ತಲಾ ಎರಡು, ಮತ್ತು ಸಮಾಜವಾದಿ ಪಕ್ಷ ಒಂದು ಇಲಾಖೆಯ ಅಧ್ಯಕ್ಷತೆಯನ್ನು ಹೊಂದಿದೆ.
