ಮತದಾನ ಮಾಡದ, ಚುನಾವಣಾ ಪ್ರಚಾರದಲ್ಲಿ ಭಾಗಿಯಾಗದ ಮಾಜಿ ಕೇಂದ್ರ ಸಚಿವ ಹಾಗೂ ಸಂಸದ ಜಯಂತ್ ಸಿನ್ಹಾಗೆ ಬಿಜೆಪಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಜಾರ್ಖಂಡ್‌ನ ಹಜಾರಿಬಾಗ್ ಕ್ಷೇತ್ರದಿಂದ ಮನೀಶ್ ಜೈಸ್ವಾಲ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದ ಬಳಿಕ ಸಿನ್ಹಾ ಬಿಜೆಪಿಯ ಸಂಘಟನಾ ಕಾರ್ಯದಿಂದ ಭಾಗಿಯಾಗುತ್ತಿಲ್ಲ.
ಜಾರ್ಖಂಡ್‌ನ ಹಜಾರಿಬಾಗ್ ಕ್ಷೇತ್ರದಿಂದ ಮನೀಶ್ ಜೈಸ್ವಾಲ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದಾಗಿನಿಂದ 61 ವರ್ಷದ ಜಯಂತ್ ಸಿನ್ಹಾ ಸಂಘಟನಾ ಕೆಲಸ ಮತ್ತು ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸಿನ್ಹಾಗೆ ಶೋಕಾಸ್ ನೋಟಿಸ್ ನೀಡಿದೆ. ಮಾರ್ಚ್‌ನಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಇಚ್ಛೆ ವ್ಯಕ್ತಪಡಿಸಿದ ಸಿನ್ಹಾ ಹಾಲಿ ಸಂಸದರಾಗಿದ್ದಾರೆ.
Jharkhand | BJP has issued a show-cause notice to former Union Minister and MP Jayant Sinha and asked him to reply within 2 days
“You are not taking any interest in organisational work and election campaigning ever since the party declared Manish Jaiswal as the candidate from… pic.twitter.com/sYkoELZo2g
— ANI (@ANI) May 21, 2024
“ಹಜಾರಿಬಾಗ್ ಲೋಕಸಭಾ ಕ್ಷೇತ್ರದಿಂದ ಮನೀಶ್ ಜೈಸ್ವಾಲ್ ಅವರನ್ನು ಅಭ್ಯರ್ಥಿಯನ್ನಾಗಿ ಪಕ್ಷ ಘೋಷಿಸಿದಾಗಿನಿಂದಲೂ ನೀವು ಸಂಘಟನಾ ಕಾರ್ಯ ಮತ್ತು ಚುನಾವಣಾ ಪ್ರಚಾರದಲ್ಲಿ ಆಸಕ್ತಿ ವಹಿಸುತ್ತಿಲ್ಲ. ನಿಮ್ಮ ಮತ ಚಲಾಯಿಸುವ ಹಕ್ಕನ್ನೂ ನೀವು ಚಲಾಯಿಸಿಲ್ಲ. ನಿಮ್ಮ ನಡವಳಿಕೆಯಿಂದಾಗಿ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟಾಗಿದೆ” ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆದಿತ್ಯ ಸಾಹು ನೋಟಿಸ್‌ನಲ್ಲಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮಣಿಪುರ | ಪ್ರತ್ಯೇಕ ಆಡಳಿತ ಕೋರಿದ್ದ 10 ಶಾಸಕರಿಗೆ ಶೋಕಾಸ್ ನೋಟಿಸ್
ಹಾಗೆಯೇ ಎರಡು ದಿನಗಳಲ್ಲಿ ನಿಲುವನ್ನು ವಿವರಿಸುವಂತೆ ಸಿನ್ಹಾ ಅವರಿಗೆ ಬಿಜೆಪಿ ತಿಳಿಸಿದೆ. ಆದರೆ ಜಯಂತ್ ಸಿನ್ಹಾ ಅವರು ಈವರೆಗೂ ನೋಟಿಸ್‌ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇನ್ನು ಮಾರ್ಚ್ 2 ರಂದು ಎಕ್ಸ್ ಪೋಸ್ಟ್ ಮಾಡಿದ್ದ ಸಿನ್ಹಾ ಅವರು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರಲ್ಲಿ ತಮ್ಮನ್ನು ನೇರ ಚುನಾವಣಾ ಕರ್ತವ್ಯಗಳಿಂದ ಮುಕ್ತಗೊಳಿಸುವಂತೆ ವಿನಂತಿಸಿದ್ದಾರೆ. ಇದಾದ ಗಂಟೆಗಳ ಬಳಿಕ ಬಿಜೆಪಿಯು ಜಾರ್ಖಂಡ್‌ನ ನಗರ ಕ್ಷೇತ್ರದಿಂದ ಜೈಸ್ವಾಲ್ ಅವರನ್ನು ತನ್ನ ಅಭ್ಯರ್ಥಿ ಎಂದು ಘೋಷಿಸಿದೆ. ಈ ಕ್ಷೇತ್ರವನ್ನು ಈ ಹಿಂದೆ ಯಶವಂತ್ ಸಿನ್ಹಾ ಮತ್ತು ಅವರ ಪುತ್ರ ಜಯಂತ್ ಸಿನ್ಹಾ ಪ್ರತಿನಿಧಿಸಿದ್ದರು.
ಇದನ್ನು ಓದಿದ್ದೀರಾ? ಮಮತಾ ಬ್ಯಾನರ್ಜಿ ಬಗ್ಗೆ ಅಶ್ಲೀಲ ಹೇಳಿಕೆ: ಬಿಜೆಪಿಯ ಅಭಿಜಿತ್ ಗಂಗೋಪಾಧ್ಯಾಯಗೆ ನೋಟಿಸ್
ಜಯಂತ್ ಸಿನ್ಹಾ ಅವರು 2019 ರಲ್ಲಿ ಕಾಂಗ್ರೆಸ್‌ನ ಗೋಪಾಲ್ ಸಾಹು ಅವರನ್ನು ಸೋಲಿಸಿ 4.79 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇನ್ನು ಜಾರ್ಖಂಡ್‌ನ ಎರಡನೇ ಸುತ್ತಿನ ಲೋಕಸಭಾ ಕ್ಷೇತ್ರಗಳ ಮೂರು ಕ್ಷೇತ್ರಗಳಲ್ಲಿ ಮೇ 20ರಂದುಸ ಮತದಾನ ನಡೆದಿದೆ.