- ‘ಯತೀಂದ್ರ ಸಿದ್ದರಾಮಯ್ಯ ‘ಶ್ಯಾಡೋ ಸಿಎಂ’ ಪೋಸ್ಟರ್ ಬಿಡುಗಡೆ’
- ‘ಸರ್ಕಾರದಲ್ಲಿ ಶ್ಯಾಡೋ ಸಿಎಂ ಯತೀಂದ್ರ ಹಸ್ತಕ್ಷೇಪ ಮಿತಿ ಮೀರಿದೆ’
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಕೆಲವು ದಿನಗಳಿಂದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ವರ್ಗಾವಣೆ ದಂಧೆ ಆರೋಪ ಮಾಡುತ್ತಿದ್ದಾರೆ. ಇದರ ಬೆನ್ನೆಲೆ ಬಿಜೆಪಿ ರಾಜ್ಯದಲ್ಲಿ ಬೆಲೆ ಏರಿಕೆ ಆಗಿರುವ ತರಕಾರಿಗಳ ಜೊತೆಗೆ ವರ್ಗಾವಣೆಗೆ ಹಣ ನಿಗದಿ ಮಾಡಲಾಗಿದೆ ಎಂದು ಆರೋಪಿಸಿ ಪಟ್ಟಿ ಬಿಡುಗಡೆ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಯತೀಂದ್ರ ಸಿದ್ದರಾಮಯ್ಯ ಅವರನ್ನು ಶ್ಯಾಡೋ ಸಿಎಂ ಎಂದು ಉಲ್ಲೇಖಿಸಿದೆ. “ನಾಮ್‌ಕೆವಾಸ್ತೆ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರರನ್ನು ಶ್ಯಾಡೋ ಸಿಎಂ ಮಾಡಿ, ಅಧಿಕಾರವನ್ನು ಕಲೆಕ್ಷನ್ ಏಜೆಂಟ್ ಸುರ್ಜೇವಾಲಾರಿಗೆ ಕೊಟ್ಟಿದ್ದಾರೆ. ಪರಿಣಾಮ, ರಾಜ್ಯದಲ್ಲಿ ಸಚಿವರು, ಶಾಸಕರ ಸಂಬಂಧಿಕರ ದರ್ಬಾರ್ ಜೋರಾಗಿದೆ” ಎಂದು ಬಿಜೆಪಿ ಆರೋಪಿಸಿದೆ.
“ರಾಜ್ಯದಲ್ಲಿ ಅಗತ್ಯ ವಸ್ತುಗಳು ಹಾಗೂ ಅಗತ್ಯ ಹುದ್ದೆಗಳ ಇಂದಿನ ದರ:
ತರಕಾರಿ
ಟೊಮ್ಯಾಟೊ – ₹120-130
ಬೀನ್ಸ್ – ₹120
ಕ್ಯಾರೆಟ್ – ₹110
ಹಸಿಮೆಣಸಿನಕಾಯಿ – ₹170
ವರ್ಗಾವಣೆ ತರಹೇವಾರಿ
ಮುಖ್ಯ ಎಂಜಿನಿಯರ್: ₹5 ಕೋಟಿ
ಜಿಲ್ಲಾ ಆರೋಗ್ಯಾಧಿಕಾರಿ: ₹2 ಕೋಟಿ
ಲೆಕ್ಕಾಧಿಕಾರಿ: ₹ 2.25 ಕೋಟಿ
ತಹಶೀಲ್ದಾರ್: ₹1.25 ಕೋಟಿ
ಪೊಲೀಸ್ ಸಬ್ ಇನ್ಸ್ ಪೆಕ್ಟರ್
ಬೆಂಗಳೂರು ನಗರ – ₹1.5 ಕೋಟಿ
ಜಿಲ್ಲಾ ಕೇಂದ್ರ – ₹80 ಲಕ್ಷ
ತಾಲ್ಲೂಕು ಕೇಂದ್ರ: ₹40 ಲಕ್ಷ
ಕೇಂದ್ರದ ಸುರ್ಜೇವಾಲಾ ಕಮಿಷನ್ ಪ್ರತ್ಯೇಕ.
ಪ್ರಕಟಣೆ : ಎಟಿಎಂ ಸರ್ಕಾರದ ಪರವಾಗಿ ಶ್ಯಾಡೋ ಸಿಎಂ ಯತೀಂದ್ರ” ಎಂದು ಬಿಜೆಪಿ ದರಪಟ್ಟಿ ಬಿಡುಗಡೆ ಮಾಡಿದೆ.
ಮತ್ತೊಂದು ಟ್ವೀಟ್‌ನಲ್ಲಿ, “ರಾಜ್ಯದ ಎಟಿಎಂ ಸರ್ಕಾರದಲ್ಲಿ ವರುಣಾದ ನಿರುದ್ಯೋಗಿ ಶ್ಯಾಡೋ ಸಿಎಂ ಯತೀಂದ್ರ ಹಸ್ತಕ್ಷೇಪ ಮಿತಿ ಮೀರಿದೆ. ಒಂದೇ ಹುದ್ದೆಗೆ ಹಲವು ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಶಿಫಾರಸ್ಸು ಪತ್ರ ನೀಡುವುದು, ಕಾರ್ಯವಾದ ಬಳಿಕ ವ್ಯವಹಾರ ಕುದುರದಿದ್ದಲ್ಲಿ, ಆದೇಶವನ್ನು ಹಿಂಪಡೆಯುವುದು. ಹೀಗೆ ಹಲವಾರು ಅಕ್ರಮಗಳನ್ನು ಮುಖ್ಯಮಂತ್ರಿ ಕಚೇರಿ ಮೂಲಕ ರಾಜಾರೋಷವಾಗಿ ನಡೆಸುತ್ತಾ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಇಷ್ಟು ಸಾಲದ್ದಕ್ಕೆ, ತನಗೊಂದು ಸಾಂವಿಧಾನಿಕ ಹುದ್ದೆ ಕಬಳಿಸಿಕೊಂಡು, ತನ್ನ ಅಕ್ರಮ ದಂಧೆಗಳಿಗೆ ಸಕ್ರಮದ ಲೇಬಲ್ ಅಂಟಿಸುವ ಬಗ್ಗೆ ಗಾಢವಾಗಿ ಸ್ಕೆಚ್ ಹಾಕಿದ್ದಾರೆ” ಎಂದು ಬಿಜೆಪಿ ಆರೋಪಿಸಿದೆ.
ಈ ಸುದ್ದಿ ಓದಿದ್ದೀರಾ? ರಾಜಕೀಯ ತೆವಲಿಗೆ ಅಮಾಯಕರ ಮೇಲೆ ದೌರ್ಜನ್ಯ: ಸರ್ಕಾರದ ವಿರುದ್ಧ ಕುಮಾರಸ್ವಾಮಿ ಕಿಡಿ
Very experts in rate fixing and its updates, because nothing done bjp in last four years.
ಈ ಪಟ್ಟಿಯೆಲ ಬರೆದಿಡಿ ಮುಂದಿನ ಚುನಾವಣೆಯಲ್ಲಿ ಪ್ರಯೋಜನ ಆಗಬಹುದು.