ಚಂಡೀಗಢ ಮೇಯರ್ ಚುನಾವಣೆಯಲ್ಲಿ ಅಕ್ರಮ ಎಸಗಲಾಗಿದೆ ಎಂಬ ವಿಚಾರದಲ್ಲಿ ಆಮ್ ಆದ್ಮಿ ಪಕ್ಷ ಹಾಗೂ ಬಿಜೆಪಿ ನಡುವಿನ ತಿಕ್ಕಾಟ ರಾಷ್ಟ್ರ ರಾಜಧಾನಿಗೆ ತಲುಪಿದೆ.
ಬಿಜೆಪಿ ಮತ್ತು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ 200ಕ್ಕೂ ಹೆಚ್ಚು ಕಾರ್ಯಕರ್ತರನ್ನು ಶುಕ್ರವಾರ ಮಧ್ಯ ದೆಹಲಿಯ ದೀನ್ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿ ಪರಸ್ಪರರ ಕಚೇರಿಗಳ ಕಡೆಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದಾಗ ಬಂಧಿಸಲಾಗಿದೆ ಎಂದು ವರದಿಯಾಗಿದೆ.
“ಕಾರ್ಯಕರ್ತರು ಪಕ್ಷದ ಕಚೇರಿಗಳನ್ನು ತಲುಪುವುದನ್ನು ತಡೆಯಲು ಸೂಕ್ತ ಭದ್ರತೆ ಮಾಡಲಾಗಿದೆ. ಈವರೆಗೆ ಎಎಪಿಯ ಸುಮಾರು 150 ಮತ್ತು ಬಿಜೆಪಿಯ 60 ಕಾರ್ಯಕರ್ತರನ್ನು ಬಂಧಿಸಿ ಬಸ್‌ಗಳಲ್ಲಿ ಪ್ರತ್ಯೇಕ ಪೊಲೀಸ್ ಠಾಣೆಗಳಿಗೆ ಕರೆದೊಯ್ಯಲಾಗಿದೆ” ಎಂದು ದೆಹಲಿ ಪೊಲೀಸ್ ಅಧಿಕಾರಿಯೋರ್ವರ ಹೇಳಿಕೆಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
Modi की Police का दोगला रवैया –
BJP के गुंडों को खुलेआम गुंडागर्दी करने की दी इजाज़त
शांतिपूर्ण प्रदर्शन करने वाले AAP विधायकों,नेताओं और कार्यकर्ताओं को किया गिरफ़्तार#VoteChorBJP pic.twitter.com/2abbi4ZrAM
— AAP (@AamAadmiParty) February 2, 2024
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಜೊತೆಗೂಡಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ದೆಹಲಿಯ ಪಕ್ಷದ ಕಚೇರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಕೇಜ್ರಿವಾಲ್, “ಬಿಜೆಪಿಯವರು ಚಂಡೀಗಢ ಮೇಯರ್ ಚುನಾವಣೆಯಲ್ಲಿ ಬಹಿರಂಗವಾಗಿಯೇ ಅಕ್ರಮ ಮಾಡಿದ್ದಾರೆ. ಇದು ಹೀಗೇ ಮುಂದುವರಿದರೆ ಮುಂದೆ ಅದು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳ ಹಂತಕ್ಕೂ ಹೋಗಬಹುದು” ಎಂದು ಹೇಳಿದ್ದಾರೆ.
ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿರುವ ಎಎಪಿ ಕಚೇರಿಯಿಂದ ಕೆಲವೇ ದೂರದಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯ ಮುಂದೆ ಪ್ರತಿಭಟನೆಯನ್ನು ಆಯೋಜಿಸಿತ್ತು. ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಭ್ರಷ್ಟ ಸರ್ಕಾರ, ಕೂಡಲೇ ಕೇಜ್ರಿವಾಲ್ ರಾಜೀನಾಮೆ ನೀಡಬೇಕೆಂದು ಬಿಜೆಪಿ ಧರಣಿ ನಡೆಸಿತು.
कायर तानाशाह मोदी और #VoteChorBJP के ख़िलाफ़ लोकतंत्र बचाने की लड़ाई
लड़ेंगे और जीतेंगे! 💪 pic.twitter.com/JyAljG8SoQ
— AAP (@AamAadmiParty) February 2, 2024
ಬಿಜೆಪಿ ಹಾಗೂ ಆಪ್ ಕಚೇರಿಯ ಸುತ್ತಲೂ 1,000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಇದಲ್ಲದೆ, ಪ್ರತಿಭಟನೆಯನ್ನು ನಿಯಂತ್ರಿಸಲು ಅರೆಸೇನಾ ಪಡೆಗಳ ಎರಡು ತುಕಡಿಗಳು ಮತ್ತು ದೆಹಲಿ ಪೊಲೀಸರ ಸಶಸ್ತ್ರ ಘಟಕದ ಸಿಬ್ಬಂದಿಯನ್ನು ಕೂಡ ನಿಯೋಜಿಸಲಾಗಿತ್ತು.
ಎರಡೂ ಪಕ್ಷಗಳ ಪ್ರತಿಭಟನೆಯಿಂದಾಗಿ ದೆಹಲಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಟ್ರಾಫಿಕ್‌ನಲ್ಲಿ ಸಿಲುಕಿಕೊಂಡ ಸಾರ್ವಜನಿಕರು, ತಮ್ಮ ತಮ್ಮ ಸ್ಥಳಗಳಿಗೆ ತೆರಳಲು ಪರದಾಡಿದರು. ಆ ಬಳಿಕ ಪೊಲೀಸರು, ಪರ್ಯಾಯ ಮಾರ್ಗದ ವ್ಯವಸ್ಥೆ ಕಲ್ಪಿಸಿದರು.
दिल्ली जल बोर्ड में हजारों करोड़ रुपए के घोटाले के कारण मुख्यमंत्री अरविंद केजरीवाल के त्यागपत्र की मांग को लेकर दिल्ली प्रदेश भाजपा अध्यक्ष श्री वीरेंद्र सचदेवा जी के नेतृत्व में हजारों भाजपा कार्यकर्ताओं ने आम आदमी पार्टी के कार्यालय के सामने किया जोरदार प्रदर्शन।… pic.twitter.com/qCJr38z9Kx
— Ramvir Singh Bidhuri (@RamvirBidhuri) February 2, 2024
ಬಿಜೆಪಿ ಮತ್ತು ಆಮ್ ಆದ್ಮಿಯು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ (ಡಿಡಿಯು) ಮಾರ್ಗದಲ್ಲಿ ತಮ್ಮ ಕೇಂದ್ರ ಕಚೇರಿಯನ್ನು ಹೊಂದಿದ್ದು, ಅವುಗಳ ನಡುವಿನ ಅಂತರವು 800 ಮೀಟರ್‌ಗಳಿಗಿಂತ ಕಡಿಮೆಯಿದೆ.
ಗೃಹ ಬಂಧನ: ಆಪ್ ಆರೋಪ
ಭಾರತೀಯ ಜನತಾ ಪಕ್ಷದ ಕೇಂದ್ರ ಕಚೇರಿ ಹೊರಗೆ ಪ್ರತಿಭಟನೆ ನಡೆಸಲು ಮುಂದಾಗಿದ್ದ ಆಮ್ ಆದ್ಮಿ ಪಕ್ಷದ ಶಾಸಕರು ಹಾಗೂ ಕೌನ್ಸಿಲರ್‌ಗಳನ್ನು ವಶಕ್ಕೆ ಪಡೆದು ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ಆಪ್ ಆರೋಪಿಸಿದೆ.
ಮೋದಿಯವರಿಗೆ ಭಯ ಎಂದ ಆಪ್
ಮೋದಿಯವರಿಗೆ ವಿರೋಧ ಪಕ್ಷದವರನ್ನು ಕಂಡರೆ ಭಯ. ಹಾಗಾಗಿ, ಯಾವಾಗೆಲ್ಲ ಅವರು ಹೆದರುತ್ತಾರೋ ಆಗ ಪೊಲೀಸರನ್ನು ಛೂ ಬಿಡುವ ಮೂಲಕ ಬೆದರಿಸಲು ಯತ್ನಿಸುತ್ತಿದೆ ಎಂದು ಆಮ್ ಆದ್ಮಿ ಆರೋಪಿಸಿದೆ. ‘ಗಲೀ ಗಲೀ ಮೇ ಶೋರ್ ಹೇ, ಭಾಜಪ ವೋಟ್ ಚೋರ್ ಹೈ’ ಎಂದು ಆಪ್ ಪ್ರತಿಭಟನೆಯಲ್ಲಿ ಕೇಳಿಬಂತು.