- ‘ಸಂತೋಷ ಕೂಟದ ಅಸಹನೆಯ ಮಾತುಗಳು ಸಿ ಟಿ ರವಿ ಮೂಲಕ ಬಹಿರಂಗ’
- ‘ಬಿಜೆಪಿಯೊಳಗೆ ಸಂತೋಷ ಕೂಟ ರಣವಿಳ್ಯ ನೀಡಲು ತಯಾರಾಗುತ್ತಿದೆ’
ಬಿ ವೈ ವಿಜಯೇಂದ್ರ ಕುರಿತು ಸಿ ಟಿ ರವಿಯ ಬಾಯಲ್ಲಿ ಬಂದಿದ್ದು ಕೇವಲ ಅವರೊಬ್ಬರ ಮಾತಲ್ಲ, ಇಡೀ ಸಂತೋಷ ಕೂಟದ ಅಸಹನೆಯ ಮಾತುಗಳು ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿರುವ ಕಾಂಗ್ರೆಸ್, “ಯಡಿಯೂರಪ್ಪನವರ ಪುತ್ರನ ಅಧ್ಯಕ್ಷ ಗಾದಿಯ ಪದಗ್ರಹಣ ಕಾರ್ಯಕ್ರಮಕ್ಕೆ ಹಾಜರಿರುವುದಿಲ್ಲ ಎಂದು ಮುಖಕ್ಕೆ ಹೊಡೆದಂತೆ ಸಿ ಟಿ ರವಿ ಹೇಳಿದ್ದಾರೆ. ಇದೆಲ್ಲ ಇಡೀ ಸಂತೋಷ ಕೂಟದ ಅಸಹನೆಯ ಮಾತುಗಳು” ಎಂದು ಕುಟುಕಿದೆ.
“ನಾನು ಹಿಂದೂ ಹುಲಿ ಎನ್ನುತ್ತಿದ್ದ ಬಚ್ಚಲು ಬಾಯಿಯ ಬಸನಗೌಡ ಪಾಟೀಲ್ ಯತ್ನಾಳ್
ಇಲಿಯಾಗಿ ಬಿಲ ಸೇರಿದ್ದಾರೆ. ಇತ್ತ ಸಿ ಟಿ ರವಿ ಕುದಿಯುತ್ತಿರುವ ತಾಪ 100 ಡಿಗ್ರಿ ದಾಟಿದೆ! ಅಶ್ವತ್ಥ ನಾರಾಯಣ ಹತಾಶೆ ಮುಗಿಲು ಮುಟ್ಟಿದೆ. ಹೊಸ ಅಧ್ಯಕ್ಷರ ಪದಗ್ರಹಣವು ಬಿಜೆಪಿಗೆ ʼಕೇತು ಗ್ರಹಣʼವಾಗಿ ಪರಿಣಮಿಸುವುದು ನಿಶ್ಚಿತ!” ಎಂದು ಲೇವಡಿ ಮಾಡಿದೆ.
ಈ ಸುದ್ದಿ ಓದಿದ್ದೀರಾ? ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲಿರುವ ಡಿ ಸಿ ಗೌರಿಶಂಕರ್, ದಾಸರಹಳ್ಳಿ ಮಂಜುನಾಥ್
‘ವಿಜಯೇಂದ್ರ ಒಬ್ಬನೇ ಎಲ್ಲವೂ ಅಲ್ಲ’ ಎಂದು ಈಶ್ವರಪ್ಪ ಹೇಳಿದ್ದಾರೆ. ವಿಜಯೇಂದ್ರ 3 ವರ್ಷ ಮಾತ್ರ ಅಧ್ಯಕ್ಷ – ಪೇಶ್ವೆ ಜೋಷಿಗಳು (ಕುಮಾರಸ್ವಾಮಿಯವರು ಕೊಟ್ಟ ಹೆಸರು!). ವಿಜಯೇಂದ್ರರ ಪದಗ್ರಹಣಕ್ಕೆ ನಾನು ಹೋಗುವುದಿಲ್ಲ- ಸಿ ಟಿ ರವಿ. …….. – ವಿ. ಸೋಮಣ್ಣ, ವಿಜಯೇಂದ್ರ ಬಗ್ಗೆ ನೋ ಕಾಮೆಂಟ್ಸ್ – ಬೆಲ್ಲದ್. ಬಿ ಎಲ್ ಸಂತೋಷ್ ಗಾಢ ಮೌನ. ಇಷ್ಟು ದಿನ ಒಡೆದ ಮನೆಯಾಗಿತ್ತು, ಇನ್ಮುಂದೆ ಯುದ್ಧಕಣವಾಗುವುದು ನಿಶ್ಚಿತ, ಸಂತೋಷ ಕೂಟ ರಣವಿಳ್ಯ ನೀಡಲು ತಾಯರಾಗುತ್ತಿದೆ ಎಂದು ವ್ಯಂಗ್ಯವಾಡಿದೆ.
ಯಡಿಯೂರಪ್ಪನವರ ಪುತ್ರನ ಅಧ್ಯಕ್ಷ ಗಾದಿಯ ಪದಗ್ರಹಣ ಕಾರ್ಯಕ್ರಮಕ್ಕೆ ಹಾಜರಿರುವುದಿಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ @CTRavi_BJP !
ಸಿ.ಟಿ ರವಿಯ ಬಾಯಲ್ಲಿ ಬಂದಿದ್ದು ಕೇವಲ ಅವರೊಬ್ಬರ ಮಾತಲ್ಲ, ಇಡೀ ಸಂತೋಷ ಕೂಟದ ಅಸಹನೆಯ ಮಾತುಗಳು.
ನಾನು ಹಿಂದೂ ಹುಲಿ ಎನ್ನುತ್ತಿದ್ದ ಬಚ್ಚಲು ಬಾಯಿಯ @BasanagoudaBJP ಇಲಿಯಾಗಿ ಬಿಲ…
— Karnataka Congress (@INCKarnataka) November 14, 2023