ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗಾಗಿ ಭಾರತೀಯ ಜನತಾ ಪಾರ್ಟಿ(ಬಿಜೆಪಿ), ತನ್ನ ಐದನೇ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ. ಇದರಲ್ಲಿ 92 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ.
ಪಟ್ಟಿ ಬಿಡುಗಡೆಯಾದ ನಂತರ ಬಿಜೆಪಿಯೊಳಗಿನ ಆಂತರಿಕ ಕಚ್ಚಾಟ ಕೂಡ ಬಯಲಾಗಿದ್ದು, ಜಬಲ್‌ಪುರ ಉತ್ತರ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಅಭಿಲಾಷ್ ಪಾಂಡೆ ನಾಮಪತ್ರ ಸಲ್ಲಿಸಿದ್ದರಿಂದ ಆಕ್ರೋಶಗೊಂಡ ನೂರಾರು ಬಿಜೆಪಿ ಕಾರ್ಯಕರ್ತರು ಬೀದಿಗಿಳಿದಿದ್ದಾರೆ.
ಇದೇ ವೇಳೆ ಜಬಲ್‌ಪುರದ ರನಿತಾಲ್‌ನಲ್ಲಿರುವ ಬಿಜೆಪಿಯ ವಿಭಾಗೀಯ ಕಚೇರಿಗೆ ನುಗ್ಗಿದ ನೂರಾರು ಬಿಜೆಪಿ ಕಾರ್ಯಕರ್ತರು, ಘೋಷಣೆಗಳನ್ನು ಕೂಗುತ್ತಾ ಒಳಗೆ ಪ್ರವೇಶಿಸಿದರು.
ಮಧ್ಯಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತರಿಂದ CT ರವಿ ಮೇಲೆ ಹಲ್ಲೆ ಹಾಗೂ ಬೆದರಿಕೆ.
ಬೇಕಿತ್ತಾ ಇದು OT ಅಣ್ಣ ನಿಗೆ? pic.twitter.com/h3W7hrQtGY
— 👑Che_ಕೃಷ್ಣ🇮🇳💛❤️ (@ChekrishnaCk) October 22, 2023
ಕೇಂದ್ರ ಸಚಿವ ಮತ್ತು ರಾಜ್ಯ ಚುನಾವಣಾ ಉಸ್ತುವಾರಿ ಭೂಪೇಂದ್ರ ಯಾದವ್ ಹಾಗೂ ಕರ್ನಾಟಕದ ಬಿಜೆಪಿ ಮುಖಂಡ ಸಿ ಟಿ ರವಿ ಅವರ ಮುಂದೆ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು, ರಾಜ್ಯ ಬಿಜೆಪಿ ಅಧ್ಯಕ್ಷ ವಿಡಿ ಶರ್ಮಾ ರಾಜೀನಾಮೆಗೆ ಒತ್ತಾಯಿಸಿ ಅಲ್ಲಿಯೇ ಧರಣಿ ಕುಳಿತರು. ಇದಾದ ನಂತರ ಕಾರ್ಯಕರ್ತರು ಬಹಳ ಹೊತ್ತು ಘೋಷಣೆಗಳನ್ನು ಕೂಗಿದರು. ಸಿಟ್ಟಿಗೆದ್ದ ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಮುಖಂಡರು ಹರಸಾಹಸ ಪಟ್ಟರೂ ಯಾರ ಮಾತನ್ನೂ ಕೇಳಲು ಸಿದ್ಧರಿರಲಿಲ್ಲ.
VIDEO | Visuals of agitated BJP workers (with ticket distribution) in Jabalpur ahead of the Madhya Pradesh Assembly elections.#MadhyaPradeshElections2023 pic.twitter.com/TCCAPrbdoE
— Press Trust of India (@PTI_News) October 21, 2023
ತಳಮಟ್ಟದ ನಾಯಕರನ್ನು ಕಡೆಗಣಿಸಲಾಗಿದೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ. ಅಭಿಲಾಷ್ ಪಾಂಡೆ ಪಶ್ಚಿಮ ವಿಧಾನಸಭಾ ಕ್ಷೇತ್ರದ ನಿವಾಸಿ, ಆದರೆ ಪಕ್ಷವು ಜಬಲ್‌ಪುರ ಉತ್ತರ ಕ್ಷೇತ್ರದಿಂದ ಟಿಕೆಟ್ ನೀಡಿದೆ. ಧೀರಜ್ ಪಟೇರಿಯಾ ಇಲ್ಲಿ ನಿರಂತರವಾಗಿ ಪಕ್ಷದ ಬಗ್ಗೆ ಮುತುವರ್ಜಿ ವಹಿಸಿ ಕೆಲಸ ಮಾಡುತ್ತಿದ್ದರೂ, ಅವರನ್ನು ಕಡೆಗಣಿಸಲಾಗಿದೆ ಎಂದು ಕಾರ್ಯಕರ್ತರು ಗದ್ದಲ ಸೃಷ್ಟಿಸಿದರು. ಈ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
केंद्रीय मंत्री भूपेंद्र यादव को भाजपा नेताओं ने घेरा, MP में कमलनाथ आ रहे हैं, लगातार भाजपा आपस में लड़ रही है। यह मोदी लहर का अंत है। pic.twitter.com/xr6saES9T3
— Sandeep Singh (@ActivistSandeep) October 21, 2023
ಅಭ್ಯರ್ಥಿ ಆಯ್ಕೆಯಿಂದ ಕೆರಳಿದ ಕಾರ್ಯಕರ್ತರು ಕೇಂದ್ರ ಸಚಿವ ಹಾಗೂ ರಾಜ್ಯ ಚುನಾವಣಾ ಉಸ್ತುವಾರಿ ಭೂಪೇಂದ್ರ ಯಾದವ್ ಹಾಗೂ ಸಿ ಟಿ ರವಿ ಅವರನ್ನು ಸುತ್ತುವರಿದು ಘೋಷಣೆಗಳನ್ನು ಕೂಗಲು ಆರಂಭಿಸಿದರು. ಈ ವೇಳೆ ಸಚಿವರ ಭದ್ರತಾ ಸಿಬ್ಬಂದಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದವೂ ನಡೆದು, ಆತನ ಮೇಲೆ ಹಲ್ಲೆಯೂ ನಡೆಸಲಾಗಿದೆ. ಇದೇ ವೇಳೆ ಭದ್ರತಾ ಸಿಬ್ಬಂದಿ ತನ್ನ ಸೊಂಟದಲ್ಲಿದ್ದ ಪಿಸ್ತೂಲ್ ಅನ್ನು ತೆಗೆಯಲು ಯತ್ನಿಸಿದಾಗ, ಕೆಲವರು ತಡೆದ ದೃಶ್ಯವೂ ಮೊಬೈಲ್‌ಗಳಲ್ಲಿ ಸೆರೆಯಾಗಿದೆ.
This is the situation of BJP in Madhya Pradesh! And a few days ago it was said that Congress is losing !
Congress winning Madhya Pradesh 🔥 pic.twitter.com/YsGwULvmBB
— Ashish Singh (@AshishSinghKiJi) October 22, 2023
ಘಟನೆಯ ವೇಳೆ ಬಿಜೆಪಿ ಮುಖಂಡ ಸಿ ಟಿ ರವಿ ಅವರನ್ನು ಮಾಧ್ಯಮ ಪ್ರತಿನಿಧಿಗಳು ಮಾತನಾಡಿಸಲು ಹೊರಟರು. ಈ ವೇಳೆ ಮಾಧ್ಯಮಗಳ ವಿರುದ್ಧವೇ ಕಿಡಿಕಾರಿದ ಅವರು, ‘ಇದು ಪಕ್ಷದ ಒಳಗಿನ ವಿಚಾರ. ನಾವು ಇದನ್ನು ಪರಿಹರಿಸಿಕೊಳ್ಳುತ್ತೇವೆ. ನೀವು ಇಲ್ಲಿಂದ ಹೊರಡಿ’ ಎಂದು ತಿಳಿಸಿದ್ದಾರೆ. ಸದ್ಯ ಈ ಎಲ್ಲ ಬೆಳವಣಿಗೆಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲಾಗಿದೆ.
मध्य प्रदेश में चुनाव से पहले ही BJP हार गई है।
BJP के कार्यकर्ता और नेता आपस में भिड़ रहे हैं।
कहीं केंद्रीय मंत्री के साथ खींचतान हो रही तो कहीं प्रदेश अध्यक्ष के खिलाफ नारेबाजी।
संकेत साफ है- BJP की अंदरूनी कलह भारी पड़ने वाली है। शिवराज की भ्रष्ट सरकार का अंत तय है। pic.twitter.com/PmmD39pt4k
— Congress (@INCIndia) October 22, 2023
ಮುಂದಿನ ನವೆಂಬರ್ 17ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ಇದುವರೆಗೆ 230 ಅಭ್ಯರ್ಥಿಗಳ ಪೈಕಿ 228 ಅಭ್ಯರ್ಥಿಗಳನ್ನು ಹೆಸರನ್ನು ಘೋಷಿಸಿದೆ. ಗುಣ ಮತ್ತು ವಿಧಿಶಾ ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಇನ್ನೂ ಪ್ರಕಟಿಸಿಲ್ಲ.