ಹೈನುಗಾರರಿಗೆ ಏಳು ತಿಂಗಳು ಹಾಲಿನ ಪ್ರೋತ್ಸಾಹ ಧನವನ್ನೇ ನೀಡದ ಬಿಜೆಪಿ ಸರ್ಕಾರ

Date:

Advertisements
  • ರಾಜ್ಯ ಸರ್ಕಾರಕ್ಕೆ ಸ್ಥಳೀಯ ಸಂಸ್ಥೆಗಳ ಮಂಡ್ಯ ಕ್ಷೇತ್ರದ ಶಾಸಕ ದಿನೇಶ್ ಗೂಳಿಗೌಡ ಮನವಿ
  • ತುರ್ತು ಹಣ ಬಿಡುಗಡೆ ಮಾಡಿ ರೈತರಿಗೆ ಅನುಕೂಲ ಮಾಡಿಕೊಡುವಂತೆ ಶಾಸಕರ ಮನವಿ

ಜನಪರ ಯೋಜನೆಗಳನ್ನು ಜಾರಿ ಮಾಡುತ್ತಾ ಜನಮನ್ನಣೆ ಪಡೆದು ಸಾಗುತ್ತಿರುವ ಸಿದ್ದರಾಮಯ್ಯ ಸರ್ಕಾರದ ತೇಜೋವಧೆ ಮಾಡಲು ಮುಂದಾಗಿದ್ದ ವಿಪಕ್ಷ ಬಿಜೆಪಿಗೆ ಮತ್ತೊಂದು ಹಿನ್ನೆಡೆಯಾಗಿದೆ.

ಆಡಳಿತದಲ್ಲಿದ್ದ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಹೈನುಗಾರರಿಗೆ ಪ್ರೋತ್ಸಾಹ ಧನವನ್ನೇ ನೀಡದೆ ಹೋಗಿರುವ ವಿಚಾರವನ್ನು ಕಾಂಗ್ರೆಸ್ ಶಾಸಕ ದಿನೇಶ್ ಗೂಳಿಗೌಡ ದಾಖಲೆ ಸಮೇತ ಬಹಿರಂಗ ಮಾಡಿ, 40% ಸರರ್ಕಾರದ ಮತ್ತೊಂದು ಮುಖ ಬಹಿರಂಗ ಪಡಿಸಿದ್ದಾರೆ.

ಹೈನುಗಾರರಿಗೆ ಆಗಿರುವ ಸಂಕಷ್ಟದ ವಿಚಾರವನ್ನು ರಾಜ್ಯ ಸರ್ಕಾರದ ಗಮನಕ್ಕೆ ತಂದಿರುವ ಸ್ಥಳೀಯ ಸಂಸ್ಥೆಗಳ ಶಾಸಕ, ಹಿಂದಿನ ಸರ್ಕಾರದ ಅವಧಿಯಲ್ಲಿ ರೈತರಿಗೆ ಪಾವತಿಯಾಗಬೇಕಿದ್ದ ಸುಮಾರು 669.59 ಕೋಟಿ ರೂಪಾಯಿ ಹಾಲಿನ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಿಕೊಡುವಂತೆ ಕೇಳಿಕೊಂಡಿದ್ದಾರೆ.

Advertisements

ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆದಿರುವ ಅವರು, ರೈತರ ಸಂಕಷ್ಟಕ್ಕೆ ಸ್ಪಂದಿಸುವಂತೆ ಮನವಿ ಮಾಡಿದ್ದಾರೆ. ಅವರ ಪತ್ರದ ಸಾರಾಂಶ ಹೀಗಿದೆ:ದಿನೇಶ್ ಗೂಳಿಗೌಡ


ಮನವಿ ಪತ್ರದಲ್ಲೇನಿದೆ?

ರಾಜ್ಯ ಸರ್ಕಾರ ಹೈನುಗಾರರಿಗೆ ಅನುಕೂಲವಾಗಲು ರೈತರಿಗೆ ಪ್ರತಿ ಲೀಟರ್ ಹಾಲಿಗೆ 5 ರೂ. ಪ್ರೋತ್ಸಾಹಧನ ನೀಡುತ್ತಾ ಬಂದಿದೆ. ಇದರಿಂದ ಹೈನುಗಾರರು ಉತ್ಪಾದನೆ ಮಾಡಿದ ಹಾಲಿಗೆ ಲಾಭದಾಯಕ ದರ ಸಿಕ್ಕಿದಂತಾಗುತ್ತದೆ. ಅಲ್ಲದೆ, ನೇರವಾಗಿ ರೈತರ ಖಾತೆಗಳಿಗೆ ಹಣ ಜಮಾ ಆಗುವುದರಿಂದ ಮೇವು, ಪಶು ಆಹಾರ ಕೊಳ್ಳಲು ಈ ಪ್ರೋತ್ಸಾಹಧನವು ಅನುಕೂಲವಾಗುತ್ತದೆ. ಆದರೆ, ಹಿಂದಿನ ಸರ್ಕಾರ ಕಳೆದ 7 ತಿಂಗಳುಗಳಿಂದ ಹೈನುಗಾರರಿಗೆ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡಿರುವುದಿಲ್ಲ. ಇದರಿಂದಾಗಿ ಹೈನುಗಾರರಿಗೆ ತೊಂದರೆಯಾಗುತ್ತಿದೆ.

ಈಗ ಸುಮಾರು 669.59 ಕೋಟಿ ರೂ. ಪ್ರೋತ್ಸಾಹಧನವನ್ನು ಸರ್ಕಾರ ಹೈನುಗಾರರಿಗೆ ವಿತರಿಸಲು ಬಾಕಿ ಇದೆ. ಪ್ರತಿ ಹೈನುಗಾರರಿಗೆ ಕನಿಷ್ಠ 5 ಸಾವಿರದಿಂದ 30 ಸಾವಿರವರೆಗೂ ಪ್ರೋತ್ಸಾಹಧನ ಬರುವುದು ಬಾಕಿ ಉಳಿದುಕೊಂಡಿದೆ. ಪ್ರತಿ ತಿಂಗಳು ಸರ್ಕಾರ ರಾಜ್ಯದ ಎಲ್ಲ ಹೈನುಗಾರರಿಗೆ ಸುಮಾರು 109 ಕೋಟಿ ರೂ. ಹಾಲಿನ ಪ್ರೋತ್ಸಾಹ ಧನ ನೀಡಬೇಕಿದೆ.

ಹಾಲಿನ ಪ್ರೋತ್ಸಾಹ ಧನ ಬಾಕಿಸಾಮಾನ್ಯ ವರ್ಗದ ಹೈನುಗಾರರಿಗೆ 2022 ರ ನವೆಂಬರ್‌ನಲ್ಲಿ 109.90 ಕೋಟಿ ರೂ, ಡಿಸೆಂಬರ್-109.81 ಕೋಟಿ, 2023ರ ಜನವರಿಯಲ್ಲಿ 107.89 ಕೋಟಿ, ಫೆಬ್ರವರಿ-93.56, ಮಾರ್ಚ್-93.89 ಕೋಟಿ, ಏಪ್ರಿಲ್-93.67 ಕೋಟಿ ರೂಪಾಯಿಗಳನ್ನು ನೀಡುವುದು ಬಾಕಿ ಇದೆ. ಎಸ್ಸಿ ವರ್ಗಕ್ಕೆ 2023ರ ಮಾರ್ಚ್ರಲ್ಲಿ-3.08 ಕೋಟಿ ರೂ, ಏಪ್ರಿಲ್-3.17 ಕೋಟಿ ರೂ. ಸಹಾಯಧನ ವಿತರಣೆ ಬಾಕಿ ಇದೆ.

ಹಾಗೆಯೇ ಕಳೆದ ಹಿಂದಿನ ವರ್ಷಗಳ ಪೈಕಿ ಸಾಮಾನ್ಯ ವರ್ಗದವರಿಗೆ 2019-20 ನೇ ಸಾಲಿನಲ್ಲಿ 12.51 ಕೋಟಿ ರೂ, 2020-21 ನೇ ಸಾಲಿನಲ್ಲಿ 9.64 ಕೋಟಿ ರೂ. 2021-22 ನೇ ಸಾಲಿನಲ್ಲಿ-22.37 ಕೋಟಿ ರೂ. ಸೇರಿದಂತೆ ಒಟ್ಟಾರೆ ಕಳೆದ ಆರ್ಥಿಕ ವರ್ಷದಲ್ಲಿ 624.06 ಕೋಟಿ ರೂ ಹಾಗೂ ಹಿಂದಿನ ವರ್ಷಗಳ ಬಾಕಿ 45.53 ಕೋಟಿ ರೂ. ಸೇರಿ ಒಟ್ಟು 669.59 ಕೋಟಿ ರೂಪಾಯಿಯಷ್ಟು ಸರ್ಕಾರದಿಂದ ಹೈನುಗಾರರಿಗೆ ಸಂದಾಯವಾಗಬೇಕಿದೆ.ಸಿದ್ದರಾಮಯ್ಯ ಡಿಕೆ ಶಿವಕುಮಾರ್

ಈ ಸುದ್ದಿ ಓದಿದ್ದೀರಾ?:ಜಾತಿವಾರು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿ ಸ್ವೀಕಾರ: ಮುಖ್ಯಮಂತ್ರಿ ಸಿದ್ದರಾಮಯ್ಯ

ಇದರಲ್ಲಿ ಮಂಡ್ಯ ಜಿಲ್ಲೆಗೆ ಒಟ್ಟು 72.34 ಕೋಟಿ ರೂಗಳು ಹೈನುಗಾರರಿಗೆ ಸಂದಾಯವಾಗುವುದು ಬಾಕಿ ಇದೆ. 2022ರ ನವೆಂಬರ್ ನಲ್ಲಿ 12.40 ಕೋಟಿ ರೂ, ಡಿಸೆಂಬರ್-12.88 ಕೋಟಿ ರೂ, 2023 ಜನವರಿಯಲ್ಲಿ-12.68 ಕೋಟಿ ರೂ, ಫೆಬ್ರವರಿ-10.90 ಕೋಟಿ ರೂ., ಮಾರ್ಚ್-11.92 ಕೋಟಿ ರೂ., ಏಪ್ರಿಲ್-11.56 ಕೋಟಿ ರೂ. ಪ್ರೋತ್ಸಾಹಧನ ನೀಡುವುದು ಬಾಕಿ ಇದೆ ಎಂದು ತಿಳಿಸಿ ಸರ್ಕಾರ ತಕ್ಷಣ ರೈತರ ನೆರವಿಗೆ ಧಾವಿಸಿ ಪ್ರೋತ್ಸಾಹ ಧನ ನೀಡುವಂತೆ ಮನವಿ ಮಾಡಿದ್ದಾರೆ.

ಇತ್ತ ಕಾಂಗ್ರೆಸ್ ಸರ್ಕಾರದ ಮೇಲೆ ಹಾಲಿನ ಪ್ರೋತ್ಸಾಹ ಧನ ಕಡಿತ ಮಾಡಲು ಹೊರಟ ಆರೋಪ ಹೊರಿಸಿ ಪ್ರತಿಭಟನೆ ನಡೆಸಿ ಜನರ ವಿಶ್ವಾಸಗಳಿಸಲು ಮುಂದಾಗಿದ್ದ ಬಿಜೆಪಿಗೆ ಶಾಸಕ ನೀಡಿರುವ ಈ ಲೆಕ್ಕ ಬಲವಾದ ಹೊಡೆತ ನೀಡಿದೆ. ಪ್ರೋತ್ಸಾಹಧನವನ್ನೇ ನೀಡದವರು, ರಾಸುಗಳನ್ನು ಹಿಡಿದು ಪ್ರತಿಭಟನೆ ಮಾಡಿದ್ದು ಯಾವ ಸಂತಸಕ್ಕೆ ಎನ್ನುವ ಪ್ರಶ್ನೆ ನಾಗರಿಕ ವಲಯದಲ್ಲಿ ಕೇಳಿಬರತೊಡಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

Download Eedina App Android / iOS

X