ಮಹದಾಯಿ ಯೋಜನೆ ಜಾರಿಗೆ ಬಿಎಸ್‌ವೈ ಪ್ರಾಮಾಣಿಕವಾಗಿ ಪ್ರಯತ್ನಿಸಿಲ್ಲ: ಸಿದ್ದರಾಮಯ್ಯ

Date:

Advertisements

ಯಡಿಯೂರಪ್ಪನವರು ಮಹದಾಯಿ ಯೋಜನೆ ಅನುಷ್ಠಾನ ಮಾಡುವುದಾಗಿ ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಅವರಿಂದ ಯೋಜನೆ ಅನುಷ್ಠಾನಗೊಳ್ಳಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ವಿಧಾನ ಪರಿಷತ್‌ನಲ್ಲಿ ರಾಜ್ಯಪಾಲರ ಬಜೆಟ್‌ ಭಾಷಣದ ಮೇಲೆ ವಂದನಾ ನಿರ್ಣಯ ಮಂಡಿಸಿ ಸುದೀರ್ಘವಾಗಿ ಮಾತನಾಡಿದರು.

“ಮನಮೋಹನ್ ಸಿಂಗ್ ಅವಧಿಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಿದ್ದರೂ ಡೀಸೆಲ್-ಪೆಟ್ರೋಲ್ ಬೆಲೆ ಕಡಿಮೆ ಇತ್ತು. ಈಗ ಕಚ್ಚಾ ತೈಲ ಬೆಲೆ ಕಡಿಮೆ ಇದ್ದರೂ ಮೋದಿ ಡೀಸೆಲ್-ಪೆಟ್ರೋಲ್ ಬೆಲೆ ವಿಪರೀತ ಹೆಚ್ಚಿಸಿದ್ದಾರೆ” ಎಂದು ಕಿಡಿಕಾರಿದರು.

Advertisements

“ಗೃಹಲಕ್ಷ್ಮಿ ಹಣ ಆರು ತಿಂಗಳಿಂದ ಬಾಕಿ ಇದೆ ಎಂದು ವಿರೋಧಪಕ್ಷದ ನಾಯಕರು ತಿಳಿಸಿದ್ದಾರೆ. ಇದು ಅಪ್ಪಟ ಸುಳ್ಳು. ಆದರೆ ಗೃಹಲಕ್ಷ್ಮಿ ಬಾಕಿ ಕೇವಲ ಜನವರಿಯಿಂದ ಉಳಿದಿದ್ದು, ಅದನ್ನೂ ಪಾವತಿಸಲಾಗುವುದು” ಎಂದು ಭರವಸೆ ನೀಡಿದರು.

“ಶಿಕ್ಷಣ ಇಲಾಖೆಯಡಿ 11400 ಶಿಕ್ಷಕರ ಕೊರತೆ ಇದೆ. 6400 ಶಾಲೆಗಳಲ್ಲಿ ಏಕ ಶಿಕ್ಷಕರು ಇದ್ದಾರೆ. ಬಿಜೆಪಿಯು 4 ವರ್ಷದಲ್ಲಿ ಎಷ್ಟು ಜನ ಶಿಕ್ಷಕರ ನೇಮಕಾತಿ ಮಾಡಿದ್ದಾರೆಂದು ತಿಳಿಸಲಿ” ಎಂದು ಸವಾಲು ಹಾಕಿದರು.

“ಎಲ್ಲ ದುರ್ಬಲವರ್ಗದವರನ್ನೂ ನಾನು ಪ್ರೀತಿಸುತ್ತೇನೆ. ವಿಶ್ವವಿದ್ಯಾಲಯಗಳನ್ನು ಮುಚ್ಚುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಆದರೆ ವಿವಿಗಳನ್ನು ಮುಚ್ಚುವುದಿಲ್ಲ. ಸಚಿವ ಸಂಪುಟ ಉಪಸಮಿತಿಯ ವರದಿ ಬಂದ ನಂತರ ವಿವಿಗಳನ್ನು ಮುಂದುವರೆಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ರೈತರ ಆತ್ಮಹತ್ಯೆಗಳು ಹೆಚ್ಚಿರುವ ಬಗ್ಗೆ ಕೇಳಲಾಗಿದೆ. ಆದರೆ ವಾಸ್ತವಿಕವಾಗಿ 40% ವರೆಗೆ ಆತ್ಮಹತ್ಯೆಗಳು ಕಡಿಮೆಯಾಗಿದೆ. ಫೆಬ್ರವರಿ ಅಂತ್ಯದವರಗೆ 644 ಆಗಿವೆ. ಆತ್ಮಹತ್ಯೆಗಳು ಇಳಿಮುಖವಾಗಿದೆ” ಎಂದು ತಿಳಿಸಿದರು.

“ಬೆಲೆ ಏರಿಕೆಯನ್ನು ಪ್ರಶ್ನಿಸಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಕಚ್ಚಾ ತೈಲದ ಬೆಲೆ 108-125 ಡಾಲರ್ ಇತ್ತು, ಆಗ ಡೀಸೆಲ್ ಬೆಲೆ 46.59 ಇತ್ತು, ಮೋದಿಯವರ ಕಾಲದಲ್ಲಿ ಕಚ್ಚಾ ತೈಲದ ಬೆಲೆ 73-76 ಡಾಲರ್ ಇದೆ, ಆದರೆ ಡೀಸೆಲ್ ಬೆಲೆ 90 ರೂ. ಆಗಿದೆ. ಅರ್ಧದಷ್ಟು ಬೆಲೆ ಹೆಚ್ಚಾಗಿದೆ. ನಾವು ಎಲ್ಲಾ ಬಾಬ್ತುಗಳಿಂದ 7 ರಿಂದ 8 ಸಾವಿರ ರೂ. ಹೆಚ್ಚಿಸಿದ್ದೇವೆ” ಎಂದರು.

“ಗ್ಯಾರಂಟಿಗಳಿಗೆ 51 ಸಾವಿರ ಕೋಟಿ ರೂ. ನೀಡಿದ್ದೇವೆ, ನೀರಾವರಿಗೆ ಈ ಬಾರಿ ಸಣ್ಣ ನೀರಾವರಿಗೆ 1000 ಕೋಟಿ ರೂ. ಹೆಚ್ಚಿಸಲಾಗಿದೆ. ಯಡಿಯೂರಪ್ಪನವರು ಮಹದಾಯಿ ಯೋಜನೆ ಅನುಷ್ಠಾನ ಮಾಡುವುದಾಗಿ ರಕ್ತದಲ್ಲಿ ಬರೆದುಕೊಡುತ್ತೇನೆ ಎಂದಿದ್ದರು. ಆದರೆ ಅವರಿಂದ ಯೋಜನೆ ಅನುಷ್ಠಾನಗೊಳಿಸಲು ಸಾಧ್ಯವಾಗಲಿಲ್ಲ” ಎಂದು ಮತ್ತೆ ಉಚ್ಚರಿಸಿದರು.

“ಹಿಂದೆ 2013ರಲ್ಲಿ ಕೂಡಲಸಂಗಮದಲ್ಲಿ ಪ್ರತಿ ವರ್ಷ 10 ಸಾವಿರ ಕೋಟಿಗಳನ್ನು ನೀರಾವರಿಗೆ ಇಡುತ್ತೇವೆ, 56000 ಕೋಟಿ ರೂ.ಗಳನ್ನು ನೀರಾವರಿಗೆ ಖರ್ಚು ಮಾಡಿದ್ದೇವೆ. ಪ್ರತಿ ವರ್ಷ 1.50 ಲಕ್ಷ ಕೋಟಿ ಖರ್ಚು ಮಾಡುತ್ತೇವೆ ಎಂದಿದ್ದ ಬಿಜೆಪಿಯವರು ನಾಲ್ಕು ವರ್ಷವೂ ಪ್ರತಿ ವರ್ಷ ಕೇವಲ ಸರಾಸರಿ 16 ಸಾವಿರ ಕೋಟಿ ಖರ್ಚು ಮಾಡಿದ್ದೀರಿ. ಮಹದಾಯಿ ಯೋಜನೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಿಲ್ಲ” ಎಂದು ವಾಗ್ದಾಳಿ ನಡೆಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಬರೀ ಇದೇ‌ ಆಯ್ತು…
    ನಿನ್ನ ಕೈಲಿ ಆಗುತ್ತೋ ಇಲ್ವೋ ಅದು ಹೇಳು
    ನೀನೇನು ಕಿಸಿದಿಯಾ ಅದನ್ನು ಬೊಗಳು ಮೊದಲು.
    ದಿನ ಬೆಳಗಾದರೆ ಬರೀ ಮೋದಿನ ಜರಿಯೋದು .
    ನಿನಗೆ ಅಧಿಕಾರದಲ್ಲಿ ಕೂರಿಸಿರೋದು ಕತ್ತೆ ಕಾಯಕಲ್ಲಾ
    ಕೇಂದ್ರ ಸರ್ಕಾರದ ವಿರುದ್ಧ ಬರೀ ಬೈಯೋದು ಬಿಟ್ಟು ಕೆಲಸ ಮಾಡಯ್ಯ ಸಾಕು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X