ಬಿಜೆಪಿ ಸರ್ಕಾರದಲ್ಲಿ ಒಂದು ಬಗೆಯ ಲೂಟಿ, ಪಕ್ಷದಲ್ಲಿ ಮತ್ತೊಂದು ಬಗೆಯ ಲೂಟಿ, ಲೂಟಿಯೇ ಬಿಜೆಪಿಯ ಮನೆದೇವರು! ಟಿಕೆಟ್ ಹೆಸರಲ್ಲಿ ಕಲೆಕ್ಷನ್ ಮಾಡಿರುವುದು ಅಮಿತ್ ಶಾ ನಿರ್ದೇಶನದಿಂದಲೋ, ಮೋದಿ ನಿರ್ದೇಶನದಿಂದಲೋ? ಎಂದು ಕಾಂಗ್ರೆಸ್ ಕುಟುಕಿದೆ.
ಈ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್, “ಬಿಜೆಪಿ ಅಂದರೆ ‘ಭ್ರಷ್ಟ ಜನರ ಪಕ್ಷ’ ಎಂಬುದನ್ನು ಪದೇ ಪದೇ ಸಾಬೀತು ಮಾಡುತ್ತಿದ್ದಾರೆ. ಬಿಜೆಪಿ ಟಿಕೆಟ್ ವಂಚನೆಯಲ್ಲಿ ಮತ್ತೊಂದು ದೂರು ಕೇಳಿಬಂದಿದೆ, ಸ್ವತಃ ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ಹೆಸರು ಈ ವಂಚನೆಯಲ್ಲಿ ಕೇಳಿಬಂದಿದೆ” ಎಂದು ಆರೋಪಿಸಿದೆ.
“ದಿನದಿನವೂ ಹೊಸ ಹೊಸ ಬಿಜೆಪಿಯ ಟಿಕೆಟ್ ವಂಚನೆ ಪ್ರಕರಣಗಳು ಹೊರಬರುತ್ತಿವೆ, ಕಲೆಕ್ಷನ್ ಮಾಸ್ಟರ್ ಅಮಿತ್ ಶಾ ಅವರ ಅಣತಿಯಂತೆ ಬಿಜೆಪಿಯ ಕಲೆಕ್ಷನ್ ಏಜೆಂಟ್ ಗಳು ವ್ಯಾಪಕವಾಗಿ “ಟೋಪಿ ವ್ಯಾಪಾರ” ಮಾಡಿದ್ದಾರೆ! ಸೋಲಿನ ಮುನ್ಸೂಚನೆ ಸಿಕ್ಕಿದ್ದೇ ತಡ, ಅಮಾಯಕ ಆಕಾಂಕ್ಷಿಗಳಲ್ಲಿ ಬಿಜೆಪಿ ಆಮಿಷ ತೋರಿಸಿ ವಂಚನೆ ಮಾಡಿದೆ. ಈ ಎಲ್ಲ ವಂಚನೆಗಳು ಬಿಜೆಪಿ ಕಚೇರಿಯಿಂದಲೇ ನಿಯಂತ್ರಣವಾದಂತಿದೆ” ಎಂದು ದೂರಿದೆ.
ಬಿಜೆಪಿ ಅಂದರೆ “ಭ್ರಷ್ಟ ಜನರ ಪಕ್ಷ“ ಎಂಬುದನ್ನು ಪದೇ ಪದೇ ಸಬೀತು ಮಾಡುತ್ತಿದ್ದಾರೆ.
ಬಿಜೆಪಿ ಟಿಕೆಟ್ ವಂಚನೆಯಲ್ಲಿ ಮತ್ತೊಂದು ದೂರು ಕೇಳಿಬಂದಿದೆ, ಸ್ವತಃ ಪಕ್ಷದ ಅಧ್ಯಕ್ಷ @nalinkateel ಅವರ ಹೆಸರು ಈ ವಂಚನೆಯಲ್ಲಿ ಕೇಳಿಬಂದಿದೆ.
ಸರ್ಕಾರದಲ್ಲಿ ಒಂದು ಬಗೆಯ ಲೂಟಿ, ಪಕ್ಷದಲ್ಲಿ ಮತ್ತೊಂದು ಬಗೆಯ ಲೂಟಿ, ಲೂಟಿಯೇ ಬಿಜೆಪಿಯ ಮನೆದೇವರು!…
— Karnataka Congress (@INCKarnataka) October 24, 2023