ಪಕ್ಷಕ್ಕೆ ವಾಪಸ್ಸಾಗುವಂತೆ ಬಿಜೆಪಿಯಿಂದ ಕರೆ ಬಂದಿದೆ. ಆದರೆ ನಾನಿನ್ನು ನನ್ನ ಅಭಿಪ್ರಾಯ ತಿಳಿಸಿಲ್ಲ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದಿಂದ ಹೊರಬಿದ್ದರೂ ತನ್ನ ಅಸ್ತಿತ್ವಕ್ಕೇನೋ ತೊಂದರೆಯಾಗಿಲ್ಲ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ತಮ್ಮ ಸ್ನೇಹಿತರೊಬ್ಬರು ದಿಗ್ಗಜರ ನಡುವೆ ಹೋರಾಟ ನಡೆಸಿ ಗೆಲುವು ಸಾಧಿಸಿದ್ದಾರೆ ಎಂದು ಹೇಳಿದರು.
ನಗರಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವ ಅಂಶವನ್ನು ತಮ್ಮ ಕಾರ್ಯಕರ್ತರೊಂದಿಗೆ ಚರ್ಚಿಸುತ್ತೇನೆ. ಬಿಜೆಪಿಗೆ ತನ್ನ ಪ್ರಧಾನ್ಯತೆ ಎಂದು ಕೆ ಎಸ್ ಈಶ್ವರಪ್ಪ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸ್ವಾಮೀಜಿಗಳಿಗೆ ಈ ಭಂಡತನ ಬಂದದ್ದಾದರೂ ಎಲ್ಲಿಂದ?
ಮಠಾಧೀಶರಿಗೆ ದೇವರ ಸ್ಥಾನ ಕೊಟ್ಟಿದ್ದೇವೆ. ಆ ಸ್ಥಾನವನ್ನು ಸಹ ಕಾಂಗ್ರೆಸ್‌ನವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ದೇವರ ಸ್ಥಾನದಲ್ಲಿರುವ ಸ್ವಾಮೀಜಿಗಳಿಂದ ಇಂತವರಿಗೆ ಸಿಎಂ ಸ್ಥಾನ ಕೊಡಿಸಿ ಎಂದು ಹೇಳಿಸುತ್ತಿದ್ದಾರೆ. ಇಂತಹ ಹೇಳಿಕೆ ಕೊಡಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ನಿಮ್ಮ ಅಧಿಕಾರಕ್ಕೆ ಜಾತಿ ಮಧ್ಯ ತರುವುದನ್ನು ಖಂಡಿಸುತ್ತೇ ನೆ. ಇದನ್ನು ನಾಲ್ಕು ಗೋಡೆಗಳ ಮಧ್ಯೆ ಕುಳಿತು ನಿರ್ಧರಿಸಿಕೊಳ್ಳಿ. ಇದರ ಬಹಿರಂಗ ಚರ್ಚೆ, ಹೇಳಿಕೆ ಬೇಡ. ಸ್ವಾಮೀಜಿಗಳನ್ನು ನಿಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳಬೇಡಿ ಎಂದು ಕೆ ಎಸ್ ಈಶ್ವರಪ್ಪ ಹೇಳಿದರು.
2024ರ ಲೋಕಸಭಾ ಚುನಾವಣೆಯಲ್ಲಿ ಕೆ ಎಸ್ ಈಶ್ವರಪ್ಪ ಬಿಜೆಪಿ ವಿರುದ್ಧ ಬಂಡಾಯದ್ದು ಬಿ ವೈ ರಾಘವೇಂದ್ರ ವಿರುದ್ಧ ಪಕ್ಷೇತರನಾಗಿ ಸ್ಪರ್ಧಿಸಿದ ನಂತರ ಪಕ್ಷ ಅವರನ್ನು 6 ವರ್ಷ ಅವಧಿಗೆ ಉಚ್ಚಾಟಿಸಿತ್ತು.

ರಾಜಕಾರಣಿಗಳಿಗೆ ವಯಸ್ಸಾದಂತೆ ಅಧಿಕಾರ ಹಣದ ದಾಹ ಏರಿಕೆ ಆದಂತೆ ನಾಚಿಕೆ ಸ್ವಾಭಿಮಾನ ಕಮ್ಮಿ ಆಗುತ್ತಾ ಹೋಗುತ್ತದೆ,, ಉತ್ತಮ ಉದಾಹರಣೆ ಇವರು