ಜಾತಿ ನಿಂದನೆ ಮತ್ತು ಜೀವ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಬಂಧಿತರಾಗಿರುವ ಬಿಜೆಪಿ ಶಾಸಕ ಮುನಿರತ್ನ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶಿಸಿದೆ. ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದೆ.
ಮುನಿರತ್ನ ಅವರನ್ನು ಪೊಲೀಸರು ಶನಿವಾರ ಸಂಜೆ ಸಂಬಂಧಿಸಿದ್ದರು. ಅವರನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಭಾನುವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿತ್ತು.
ಮಂಗಳವಾರಕ್ಕೆ ಪೊಲೀಸ್ ಕಸ್ಟಡಿಯ ಅವಧಿ ಮುಗಿದಿದ್ದರಿಂದ, ಅವರನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಇದೀಗ, ನ್ಯಾಯಾಲಯವು ಮುಗಿರತ್ನ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ವಿಚಾರಣೆಯನ್ನು ಬುಧವಾರಕ್ಕೆ (ಸೆ.18) ನಿಗದಿ ಮಾಡಿದೆ.
ಮುನಿರತ್ನ ಅವರು ಲಂಚಕ್ಕೆ ಬೇಡಿಕೆ ಇಟ್ಟು, ಜಾತಿ ನಿಂದನೆ ಮಾಡಿದ್ದಾರೆಂದು ಆರೋಪಿಸಿ ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಎಂಬವರು ಶುಕ್ರವಾರ ಆಡಿಯೋವೊಂದನ್ನು ಬಿಡುಗಡೆ ಮಾಡಿದ್ದರು. ಆಡಿಯೋ ಹೊರಬಂದ ಬಳಿಕ, ಜಾತಿ ನಿಂದನೆ ಆರೋಪದ ಮೇಲೆ ವೈಯ್ಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮುನಿರತ್ನ ಅವರನ್ನು ಪೊಲೀಸರು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಗ್ರಾಮದಲ್ಲಿ ಬಂಧಿಸಿದ್ದರು.
ಇದಾಗಲೇ ಬೇಕಿತ್ತು, ಬೇಜಾನ್ ದುರಂಕಾರ, ಕಾಂಗಿಯಿಂದ ಮೇಲೆ ಬಂದು, ಗೆದ್ದು, ಚಿಲ್ಲರೆ ಕಾಸಿಗೆ ದರಿದ್ರ ಬಿಜೆಪಿ ಸೆರಿದವ, ಇದು ಜಗ್ಗೆಶ್, ಸೋಮಣ್ಣಾ, ಸೋಮಶೇಕಕರ್ ಗೂ ಆಗಲೇಬೇಕು