ಹಿಂದುಗಳಂತೆ ಮುಸ್ಲಿಮರಲ್ಲಿಯೂ 93 ಜಾತಿ, ಉಪಜಾತಿಗಳು ಇವೆ ಎಂಬುದು ಜಾತಿ ಸಮೀಕ್ಷೆ ವೇಳೆ ಕಂಡುಬಂದಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ವರದಿಯಲ್ಲಿ ಮುಸ್ಲಿಮರನ್ನು ಒಂದೇ ಕಡೆ ಸೇರಿಸಿದ್ದೇವೆ. ಆದರೆ, ಅವರಲ್ಲಿಯೂ ಜಾತಿ-ಉಪ ಜಾತಿಗಳಿವೆ” ಎಂದಿದ್ದಾರೆ.
“ಮುಸ್ಲಿಮರನ್ನು ಒಂದೇ ಕಡೆ ಸೇರಿಸಿದ್ದೇವೆ. ಆದರೂ, ಕೆಲವು ಬೇರೆ ಬೇರೆಯೂ ಇವೆ. ಕೆಲವರನ್ನು ಅಲೆಮಾರಿಯಲ್ಲೂ ಸೇರಿಸಲಾಗಿದೆ. ಹಿಂದುಗಳಲ್ಲಿ ವಿವಿಧ ಜಾರಿಗಳಾಗಿ ವರ್ಗೀಕರಿಸಿ, ಬೇರೆ-ಬೇರೆಯಾಗಿ ತೋರಿಸಲಾಗಿದೆ. ಆ ಕಾರಣಕ್ಕೆ ಮುಸ್ಲಿಮರೇ ಹೆಚ್ಚಿದ್ದಾರೆಂದು ತಪ್ಪು ಮಾಹಿತಿ ಹರಡಲಾಗುತ್ತಿದೆ. ಜಾತಿ ಗಣತಿ ವರದಿಯಲ್ಲಿ ಯಾವುದೇ ತಪ್ಪುಗಳು ಇಲ್ಲ. ಕೆಲವು ಸಣ್ಣ ತಪ್ಪುಗಳಿದ್ದರೆ, ಅವುಗಳ ಬಗ್ಗೆ ಸರ್ಕಾರವು ಕ್ಯಾಬಿನೆಟ್ ನಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತದೆ” ಎಂದರು.
“ಕೆಲವರು ವರದಿಯನ್ನು ಪರಿಶೀಲಿಸದೆ, ಓದದೆ ಜಾತಿ ಗಣತಿ ವರದಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅದು ಸರಿಯಲ್ಲ” ಎಂದಿದ್ದಾರೆ.