ದೇಶಾದ್ಯಂತ ನಡೆಯಲಿರುವ ಮುಂದಿನ ಜನಗಣತಿಯಲ್ಲಿ ಜಾತಿಗಣತಿಯು ಭಾಗವಾಗಿರಲಿದೆ. ಜನಗಣತಿಯಲ್ಲಿ ಕೇಳುವ ಪ್ರಶ್ನೆಗಳಲ್ಲಿ ಜಾತಿಯ ಪ್ರಶ್ನೆಯೂ ಸೇರ್ಪಡೆಗೊಂಡಿರುತ್ತದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಪ್ರಧಾನಿ ಮೋದಿ ಕೇಂದ್ರ ಸಂಪುಟ ಸಭೆಯಲ್ಲಿ ಜಾತಿ ಗಣತಿ ನಡೆಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ.
ಜಾತಿಗಣತಿ ನಡೆಸುವುದಾಗಿ ಕೇಂದ್ರ ಸರ್ಕಾರ ಘೋಷಿಸುತ್ತಿದ್ದಂತೆಯೇ, ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿಗರನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಜೊತೆಗೆ, ಜಾತಿಗಣತಿಗೆ ಕೇಂದ್ರವು ಸಮ್ಮತಿಸುವಲ್ಲಿ ಲೋಕಸಭಾ ವಿಪಕ್ಷ ರಾಹುಲ್ ಗಾಂಧಿ ಅವರ ಹೋರಾಟದ ಪಾತ್ರ ಪ್ರಮುಖವಾದದ್ದು. ಇದರ ಶ್ರೇಯಸ್ಸು ರಾಹುಲ್ ಗಾಂಧಿ ಅವರಿಗೆ ಸಲ್ಲುತ್ತದೆ ಎಂದು ನೆಟ್ಟಿಗರು ಹೇಳಿದ್ದಾರೆ.
ರಾಹುಲ್ ಗಾಂಧಿ ಅವರು ಜಾತಿಗಣತಿಯ ಬಗ್ಗೆ ನಿರಂತರವಾಗಿ ಮಾತನಾಡುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಭರವಸೆಗಳಲ್ಲಿ ಜಾತಿಗಣತಿ ಪ್ರಮುಖವಾಗಿತ್ತು. ಅದಾದ ನಂತರವೂ, ಜಾತಿಗಣತಿ ನಡೆಸಬೇಕೆಂದು ಕೇಂದ್ರ ಸರ್ಕಾರವನ್ನು ರಾಹುಲ್ ಗಾಂಧಿ ನಿರಂತರವಾಗಿ ಒತ್ತಾಯಿಸಿದ್ದರು. ಕಳೆದ ಬಜೆಟ್ ಅಧಿವೇಶನದಲ್ಲಿಯೂ ಜಾತಿಗಣತಿ ಬಗ್ಗೆ ಮಾತನಾಡಿದ್ದ ರಾಹುಲ್, “ನೀವು (ಬಿಜೆಪಿ) ನನ್ನನ್ನು ಎಷ್ಟೇ ಟ್ರೋಲ್ ಮಾಡಬಹುದು. ಆದರೆ, ಜಾತಿಗಣತಿ ನಡೆಯುವುದನ್ನು ನಾನು ಖಚಿತಪಡಿಸಿಕೊಳ್ಳುತ್ತೇನೆ” ಎಂದು ಹೇಳಿದ್ದರು.
ಇದೀಗ, ಕೇಂದ್ರ ಸರ್ಕಾರವು ಜನಗಣತಿಯೊಂದಿಗೆ ಜಾತಿಗಣತಿಯನ್ನೂ ನಡೆಸುವುದಾಗಿ ಹೇಳಿದೆ. ಕೇಂದ್ರ ಸರ್ಕಾರದ ಘೋಷಣೆಯ ಬೆನ್ನಲ್ಲೇ, ಈ ಹಿಂದೆ ಜಾತಿಗಣತಿಯ ಬಗ್ಗೆ ರಾಹುಲ್ ಗಾಂಧಿ ಮಾತನಾಡಿದ್ದ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುವ ನೆಟ್ಟಿಗರು, ಇದು ರಾಹುಲ್ ಅವರ ಹೋರಾಟ ಫಲ ಎಂದು ಬಣ್ಣಿಸಿದ್ದಾರೆ.
“ಜಾತಿ ಗಣತಿ ಮಾಡಿದ್ರೆ, ಸಮಾಜ ಒಡೆದು ಹೋಗುತ್ತೆ, ಅಲ್ಲೋಲ ಕಲ್ಲೋಲ ಎಂದ ನಾಲಾಯಕ್ ನಾಯಕರು ಈಗ ಎಲ್ಲಿದ್ದಾರೆ?ಕೊನೆಗೆ ಕೇಂದ್ರ ಸರ್ಕಾರವೇ ಜಾತಿಗಣತಿ ಮಾಡಲು ಒಪ್ಪಿದೆ. ಸಿದ್ದರಾಮಯ್ಯ-ರಾಹುಲ್ ಗಾಂಧಿ ಜಾತಿಗಣತಿ ಎಂದರೆ ಹೌಹಾರುತ್ತಿದ್ದ ಜಾತಿವಾದಿಗಳು ಈಗೇನು ಹೇಳುತ್ತಾರೆ?” ಎಂದು ನೆಟ್ಟಿಗ ರಘು ಕೇಳಿದ್ದಾರೆ.
“ರಾಷ್ಟ್ರೀಯ ಮಟ್ಟದಲ್ಲಿ ಜಾತಿ ಜನಗಣತಿ ನಡೆಸಲು ಮೋದಿ ಸರ್ಕಾರ ಅನುಮೋದನೆ ನೀಡಿದೆ. ಇದು ಬಿಜೆಪಿಯನ್ನು ಮಂಡಿಯೂರಿಸಿದ ರಾಹುಲ್ ಗಾಂಧಿಯವರ ವೈಯಕ್ತಿಕ ಗೆಲುವು” ಎಂದು ಮತ್ತೊಬ್ಬ ನೆಟ್ಟಿಗ ಅಮೋಕ್ ಹೇಳಿದ್ದಾರೆ.
BIGGEST BREAKING 🚨
— Amock_ (@Amockx2022) April 30, 2025
Moye Moye for sanghi trolls 😂
Modi govt has approved to conduct Caste Census at national level
This is the personal victory of Rahul Gandhi who has brought BJP on knees 🔥🔥pic.twitter.com/tEwjHoMtc0
“ರಾಹುಲ್ ಗಾಂಧಿ ಲೋಕಸಭೆಯಲ್ಲಿ ಜಾತಿ ಜನಗಣತಿಗೆ ಒತ್ತಾಯಿಸುತ್ತಿದ್ದಾಗ ನಿರ್ಮಲಾ ಸೀತಾರಾಮನ್ ನಗುತ್ತಿರುವುದು ಕಂಡುಬಂದಿತು. ಇಂದು, ರಾಹುಲ್ ಗಾಂಧಿ ಅವರು ನಗುತ್ತಿರುತ್ತಾರೆ. ಕಾಲ ಹೇಗೆ ಬದಲಾಗುತ್ತದೆ” ಎಂದು ಆಝಿ ಎಂಬವರು ಟ್ವೀಟ್ ಮಾಡಿದ್ದಾರೆ.
“ಜುಲೈ 2024ರಲ್ಲಿ ರಾಹುಲ್ ಗಾಂಧಿ: ‘ಭೂಮಿಯ ಮೇಲಿನ ಯಾವುದೇ ಶಕ್ತಿಯು ಜಾತಿಗಣತಿ ನಡೆಸುವುದನ್ನು ತಡೆಯಲು ಸಾಧ್ಯವಿಲ್ಲ. ಇದು ನನ್ನ ಸವಾಲು’ ಎಂದಿದ್ದರು. ಈಗ, 2025 ಏಪ್ರಿಲ್ 30: ರಾಹುಲ್ ಗಾಂಧಿ ಅವರು ಮೋದಿ ಸರ್ಕಾರವನ್ನು ಮೊಣಕಾಲೂರುವಂತೆ ಮಾಡಿದ್ದು, ಜಾತಿ ಜನಗಣತಿಗೆ ಕೇಂದ್ರ ಒಪ್ಪಿದೆ. ಸರ್ಕಾರ ಮೋದಿಯದ್ದು, ವ್ಯವಸ್ಥೆ ರಾಹುಲ್ ಗಾಂಧಿಯದ್ದು” ಎಂದು ಅಂಕಿತ್ ಮಯಾಂಕ್ ಎಂಬವರು ಬಿಜೆಪಿಯ ಕಾಲೆಳೆದಿದ್ದಾರೆ.
Rahul Gandhi in July, 2024 :
— Ankit Mayank (@mr_mayank) April 30, 2025
“No power on Earth can stop us from conducting #CastCensus
THIS IS MY CHALLENGE” 🗿
30th April, 2025 :
RaGa brought Modi Govt on knees & forced to pass Caste Census 👏
Sarkar Modi Ki, System RaGa Ka 🔥pic.twitter.com/o6pVFYbbTV
“ಮೋದಿ ಸರ್ಕಾರ ಜಾತಿ ಜನಗಣತಿ ನಡೆಸಲಿದೆ. ಇದರ ಎಲ್ಲ ಶ್ರೇಯಸ್ಸು ಅವರಿಗೆ (ರಾಹುಲ್), ರಾಹುಲ್ ಗಾಂಧಿ ಅವರಿಗೆ ಮಾತ್ರ ಹೋಗುತ್ತದೆ. ಅವರು ಇಡೀ ಸಮಸ್ಯೆಯನ್ನು ಒಂದು ಅಭಿಯಾನದ ರೂಪದಲ್ಲಿ ಕೈಗೆತ್ತಿಕೊಂಡರು. ಸರ್ಕಾರವು ಅದನ್ನು ಪಾಲಿಸುವಂತೆ ಒತ್ತಾಯಿಸಿದರು. ಈ ದೇಶದ ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗದ ಜನರು ತಮ್ಮ ಹಕ್ಕುಗಳನ್ನು ಪಡೆಯಲು ಇದು ಅತ್ಯಂತ ನಿರ್ಣಾಯಕ ಹೆಜ್ಜೆಯಾಗಿದೆ” ಎಂದು ಸುಪ್ರಿಯಾ ಶ್ರಿನಾಟೆ ಹೇಳಿದ್ದಾರೆ.