ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸೋಲದೇವನಹಳ್ಳಿಯಲ್ಲಿರುವ ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಶ್ರೀಮತಿ ಲೀಲಾವತಿ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೆಲಮಂಗಲದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದಕ್ಕೆ ಬಂದಿದ್ದೆ. ಹಾಗೆಯೇ, ಲೀಲಾವತಿ ಅವರ ಆರೋಗ್ಯ ವಿಚಾರಿಸಲು ಬಂದೆ. ಲೀಲಾವತಿ ಅವರ ಜಮೀನಿಗೆ ಸಂಬಂಧಪಟ್ಟ ಕೆಲವು ಸಮಸ್ಯೆಗಳಿದ್ದವು. ಅವರು ಅವರು ಆರೋಗ್ಯವಾಗಿದ್ದಾಗ ಅವರ ಮಗ ವಿನೋದ್ ರಾಜ್ ಅವರನ್ನು ಕರೆದುಕೊಂಡು ನನ್ನ ಬಳಿ ಬಂದು ಭೇಟಿ ಮಾಡುತ್ತಿದ್ದರು. ಈಗ ವಯಸ್ಸಾದ ಕಾರಣದಿಂದ ಹಾಸಿಗೆ ಹಿಡಿದಿದ್ದಾರೆ. ಅವರನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡುವುದಾದರೆ ಸರ್ಕಾರದಿಂದ ಸಕಲ ನೆರವು ನೀಡುವುದಾಗಿ ಸಿಎಂ ಭರವಸೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸೋಲದೇವನಹಳ್ಳಿಯಲ್ಲಿರುವ ಕನ್ನಡ ಚಲನಚಿತ್ರ ಹಿರಿಯ ನಟಿ ಶ್ರೀಮತಿ ಲೀಲಾವತಿ ಅವರ ನಿವಾಸಕ್ಕೆ ಭೇಟಿ ನೀಡಿ, ಅವರ ಆರೋಗ್ಯ ವಿಚಾರಿಸಿದರು.#Leelavati @siddaramaiah @CMofKarnataka pic.twitter.com/c7ENbREukQ
— eedina.com (@eedinanews) December 3, 2023
ಲೀಲಾವತಿ ಅವರು ಒಳ್ಳೆಯ ನಟಿಯಾಗಿದ್ದರು. ಅವರು ನೈಜ ಕಲಾವಿದೆಯಾಗಿದ್ದರು. ಅವರ ಮಗ ವಿನೋದ್‌ರಾಜ್ ಅವರಿಗೆ ಚೆನ್ನಾಗಿ ನೋಡಿಕೊಳ್ಳಿ ಎಂದು ತಿಳಿಸಿದ್ದೇನೆ. ಏನಾದರೂ ನೆರವು ಬೇಕಿದ್ದರೆ ಸರ್ಕಾರದ ಪರವಾಗಿ ನೀಡುವುದಾಗಿ ಸಿಎಂ ಅವರು ಲೀಲಾವತಿ ಅವರ ಮಗ ವಿನೋದ್ ರಾಜ್ ಅವರಿಗೆ ತಿಳಿಸಿದರು.
ಈ ವೇಳೆ ಸಿಎಂ ಅವರಲ್ಲಿ ನಮ್ಮ ಭಾಗದ ರೈತರಿಗೆ ಅರಣ್ಯ ಇಲಾಖೆಯಿಂದ ಆಗುತ್ತಿರುವ ಸಮಸ್ಯೆಯ ಬಗ್ಗೆ ನಮ್ಮ ತಾಯಿ ತಮ್ಮ ಗಮನಕ್ಕೆ ತಂದಿದ್ದರು. ಅವರನ್ನು ಒಕ್ಕಲೆಬ್ಬಿಸಬಾರದು ಎಂದು ತಾಯಿಯವರು ಹೋರಾಟ ಮಾಡಿದ್ದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಲೀಲಾವತಿ ಮಗ ವಿನೋದ್ ರಾಜ್ ನೆನಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ರೈತರಿಗೆ ಏನೂ ತೊಂದರೆಯಾಗದಂತೆ ಹಾಗೂ ಎಲ್ಲ ರೀತಿಯ ರಕ್ಷಣೆ ನೀಡುವುದಾಗಿ ತಿಳಿಸಿದರು.