ಮುಖ್ಯಮಂತ್ರಿ ಸಿದ್ದರಾಮಯ್ಯನವರದ್ದು ಸುಳ್ಳಿನ ಆರ್ಥಿಕತೆ: ಆರ್.ಅಶೋಕ್ ಕಿಡಿ

Date:

Advertisements

ಕಾಂಗ್ರೆಸ್ ಸರ್ಕಾರವು ರಾಜ್ಯಪಾಲರ ಭಾಷಣದಲ್ಲಿ ಕೇಂದ್ರ ಸರ್ಕಾರವನ್ನು ಬಯ್ಯುವುದು ಬಿಟ್ಟರೆ ತಾವು ಮಾಡಿದ ಅಭಿವೃದ್ಧಿ ಕಾರ್ಯ ಏನೆಂದು ತಿಳಿಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರದ್ದು ಸುಳ್ಳಿನ ಆರ್ಥಿಕತೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದರು.

ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, “ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಂದಿದ್ದ ರೈತ ವಿದ್ಯಾನಿಧಿ, ಬಿ.ಎಸ್‌.ಯಡಿಯೂರಪ್ಪನವರು ತಂದಿದ್ದ ಕಿಸಾನ್‌ ಸಮ್ಮಾನ್‌ ರದ್ದು ಮಾಡಿರುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಿಲ್ಲ” ಎಂದರು.

“5 ಸಾವಿರ ರೂ. ನಿಂದ 50 ಸಾವಿರ ರೂ. ವರೆಗೆ ನೀಡುತ್ತಿದ್ದ ವಿದ್ಯಾರ್ಥಿವೇತನವನ್ನು1,200 ರೂ.ಗೆ ಇಳಿಸಲಾಗಿದೆ. ಕಳೆದ ಬಜೆಟ್‌ನಲ್ಲಿ ನೀರಾವರಿ, ಲೋಕೋಪಯೋಗಿ ಇಲಾಖೆಯಿಂದ ಹಣ ಕಡಿತಗೊಳಿಸಲಾಗಿದೆ. ಈ ಬಗ್ಗೆಯೂ ಸರ್ಕಾರ ಉತ್ತರ ನೀಡಿಲ್ಲ” ಎಂದು ಹೇಳಿದರು.

Advertisements

“ರೈತರಿಗೆ ನೀಡುವ ಸಹಾಯಧನದ ಬಗ್ಗೆಯೂ ಪ್ರತಿಕ್ರಿಯೆ ನೀಡದೆ ಕಾಗೆ ಗುಬ್ಬಕ್ಕ ಕಥೆ ಹೇಳಲಾಗುತ್ತಿದೆ. ಇದೇ ಸಿದ್ದರಾಮಯ್ಯ ಅವರ ಎಕನಾಮಿಕ್ಸ್‌, ಸುಳ್ಳು ಎಕನಾಮಿಕ್ಸ್‌ ಎಂದರೆ ಅದು ಸಿದ್ದು ಎಕನಾಮಿಕ್ಸ್‌” ಎಂದು ಟೀಕಿಸಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಆರಕ್ಷಕ ಇಲಾಖೆ ಯಾತಕ್ಕಾಗಿ, ಪೊಲೀಸರು ಇರುವುದು ಯಾರ ರಕ್ಷಣೆಗಾಗಿ?

“ಬಿಜೆಪಿ ಸರ್ಕಾರ ಇದ್ದಾಗ ಸರ್‌ಪ್ಲಸ್‌ ಬಜೆಟ್‌ ಇದ್ದರೆ, ಕಾಂಗ್ರೆಸ್‌ ಸರ್ಕಾರದಿಂದ ಅದು ಹೋಪ್‌ಲೆಸ್‌ ಬಜೆಟ್‌ ಆಗಿದೆ. 1.5 ಲಕ್ಷ ಕೋಟಿ ರೂ. ಸಾಲ ಪಡೆದಿದ್ದು, ಎಲ್ಲ ಕಡೆ ಹಣ ಶೂನ್ಯವಾಗಿದೆ. 90% ಸಾಲ ಮಾಡಿರುವುದು ಕಾಂಗ್ರೆಸ್‌ ಸರ್ಕಾರಗಳೇ. ಸಿದ್ದರಾಮಯ್ಯನವರು ಒಂದೇ ವರ್ಷದಲ್ಲಿ ಸಾಲವನ್ನು 1 ಲಕ್ಷ ಕೋಟಿ ರೂ. ದಾಟಿಸಿದ್ದಾರೆ. ನೀರಾವರಿಗೆ ಒಂದೇ ಒಂದು ಯೋಜನೆ ನೀಡಿಲ್ಲ. ಅಭಿವೃದ್ಧಿ ಕುರಿತು ಮಾತನಾಡದೆ ಕೇವಲ ಸಂತೆ ಭಾಷಣ ಮಾಡಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಬೀದಿಯಲ್ಲಿ ನಿಂತು ಸುಳ್ಳು ಟೀಕೆ ಮಾತ್ರ ಮಾಡುತ್ತಿದ್ದಾರೆ” ಎಂದರು.

“ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸಂಸತ್ತಿನಲ್ಲೇ ಇದಕ್ಕೆ ಉತ್ತರ ನೀಡಿದ್ದಾರೆ. ಅದರಲ್ಲಿ ತಪ್ಪಿದ್ದರೆ ಹಕ್ಕುಚ್ಯುತಿ ಮಂಡನೆ ಮಾಡಬೇಕಿತ್ತು. ಅದನ್ನು ಬಿಟ್ಟು ರಾಜ್ಯಪಾಲರ ಬಾಯಲ್ಲಿ ಸುಳ್ಳು ಹೇಳಿಸಿದ್ದಾರೆ. ಕೇಂದ್ರ ಸರ್ಕಾರವನ್ನು ಬಯ್ಯುವುದು ಬಿಟ್ಟರೆ ತಾವು ಅಭಿವೃದ್ಧಿ ಮಾಡಿದ್ದೇವೆಂದು ಹೇಳಿಲ್ಲ. ಉನ್ನತ ಮಟ್ಟದಲ್ಲಿದ್ದ ಆರ್ಥಿಕ ಸ್ಥಿತಿಯನ್ನು ಪಾತಾಳಕ್ಕೆ ಒಯ್ದಿದ್ದಾರೆ” ಎಂದು ಹರಿಹಾಯ್ದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ : ‘ಎಕೆ, ಎಡಿ, ಎಎ’ ಸಮಸ್ಯೆ ಜೀವಂತ ಉಳಿಸಿದ ರಾಜ್ಯ ಸರ್ಕಾರ

'ಸಿ' ಮತ್ತು 'ಡಿ' ಗ್ರೂಪ್ ನೌಕರರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಇತರೆ ಅಸ್ಪೃಶ್ಯ...

ಧರ್ಮಸ್ಥಳ ಸುತ್ತ ವ್ಯವಸ್ಥಿತ ಷಡ್ಯಂತ್ರ, ಹಿಂದಿನ ಶಕ್ತಿಗಳನ್ನು ಎಸ್‌ಐಟಿ ಪತ್ತೆ ಮಾಡಲಿ: ಸುನಿಲ್‍ ಕುಮಾರ್

ಧರ್ಮಸ್ಥಳಕ್ಕೆ ಸಂಬಂಧಿಸಿ ಎಸ್‍ಐಟಿ ತನಿಖೆಯಲ್ಲಿ ಬಿಜೆಪಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು...

ಪ್ರಧಾನಿ ಪದವೀಧರರಾಗದಿರುವುದು ಅಪರಾಧವಲ್ಲ, ಸುಳ್ಳು ಹೇಳುವುದು ಮಹಾಪರಾಧ: ಪ್ರಕಾಶ್ ರಾಜ್

ಪ್ರಧಾನಿ ಪದವೀಧರರಾಗದಿರುವುದು ಅಪರಾಧವಲ್ಲ, ಆದರೆ ಸುಳ್ಳು ಹೇಳುವುದು, ಆ ಸುಳ್ಳು ಮರೆಮಾಚಲು...

ನಾನು ದಲಿತರನ್ನು ವಿರೋಧಿಸಿಲ್ಲ, ನನ್ನಿಂದ ತಪ್ಪಾಗಿದ್ದರೆ ಕ್ಷಮೆ ಇರಲಿ: ಶಾಸಕ ಜಿ.ಟಿ.ದೇವೇಗೌಡ

ಸರ್ಕಾರದ ಪಾಲುಗಾರಿಕೆ ಇರುವ ಸಂಘಗಳಲ್ಲಿ ನಾಮನಿರ್ದೇಶಿತ ಸದಸ್ಯರನ್ನು ಸೇರಿಸಿ ಹಾಗೂ ಒಬ್ಬ...

Download Eedina App Android / iOS

X