ಶಿಕ್ಷಕರ ಮೇಲೆ ಅನಾವಶ್ಯಕ ಒತ್ತಡ ಹೇರಲಾಗುತ್ತಿದೆ, ಸಾಮಾಜಿಕ, ಶೈಕ್ಷಣಿಕ ಗಣತಿಯನ್ನು ಪ್ರಶ್ನಿಸಿ ಮಾಜಿ ಸಚಿವ ಸಿ.ಟಿ. ರವಿ ಸರ್ಕಾರಕ್ಕೆ ಬಹಿರಂಗ ಪತ್ರ ಬರೆದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಮುಖ್ಯಮಂತ್ರಿಗಳೇ, ನಿಮ್ಮ ಕನಸಿನ ಕೂಸು ಬಡವಾಗುತ್ತಿದೆ. ಶಿಕ್ಷಕರನ್ನು ಬೆದರಿಸುವ ಬದಲು ಅವರ ಕಷ್ಟವನ್ನು ಆಲಿಸಿ, ಬೆಟ್ಟಗುಡ್ಡ ಮತ್ತು ಕಾಡಂಚಿನ ಕುಗ್ರಾಮಗಳಲ್ಲಿ ಸರ್ವರ್ ಸಮಸ್ಯೆಯಿಂದ ಶಿಕ್ಷಕರು ತತ್ತರಿಸುತ್ತಿದ್ದಾರೆ. ಹಳ್ಳಿಗಳಲ್ಲಿ ಮಹಿಳಾ ಶಿಕ್ಷಕರು ಭದ್ರತೆಯ ಕೊರತೆಯಿಂದ ಆತಂಕದಲ್ಲಿದ್ದಾರೆ. ಸಮೀಕ್ಷೆಗಾಗಿ ಮನೆ ಮನೆಗೆ ತೆರಳಬೇಕಾದ ಶಿಕ್ಷಕರು ಯುಎಚ್‌ಐಡಿ ಹಾಗೂ ಓಟಿಪಿ ಸಮಸ್ಯೆಯಿಂದ ಪರದಾಡುತ್ತಿದ್ದಾರೆ. ಸಾರ್ವಜನಿಕರಿಗೆ ಸರ್ವೆ ಬಗ್ಗೆ ಸರಿಯಾದ ಮಾಹಿತಿ ನೀಡದ ಹಿನ್ನೆಲೆ ಶಿಕ್ಷಕರು ಗೇಟ್‌ಗಳ ಮುಂದೆ ಗಂಟೆಗಳ ಕಾಲ ನಿಲ್ಲಬೇಕಾದ ಸ್ಥಿತಿ ಬಂದಿದೆ. ಅತಿಯಾದ ಪ್ರಶ್ನೆಗಳ ಒತ್ತಡದಿಂದ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ ಎಂದು ಸಿ.ಟಿ. ರವಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಇದನ್ನು ಓದಿದ್ದೀರಾ?ಚಿಕ್ಕಮಗಳೂರು l ಕುಂದು, ಕೊರತೆ; ಲೋಕಾಯುಕ್ತದಲ್ಲಿ ಬಾಕಿ ಪ್ರಕರಣ: ಇಡೀ ದಿನ ವಿಚಾರಣೆ
ಹಾಗೆಯೇ, ಮೊದಲು ಶಿಕ್ಷಕರ ಸಮಸ್ಯೆ ಬಗೆಹರಿಸಿ. ನಂತರ ಸಮೀಕ್ಷೆ ಮುಂದುವರಿಸಿ, ಎಂದು 19ಕ್ಕೂ ಹೆಚ್ಚು ಗಂಭೀರ ಸಮಸ್ಯೆಗಳನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರದಲ್ಲಿ ವ್ಯಕ್ತಪಡಿಸಿದ್ದಾರೆ. ಈ ಕುರಿತು ತಕ್ಷಣ ಸ್ಪಂದಿಸುವಂತೆ ತಿಳಿಸಿದ್ದಾರೆ.