ಹಾವೇರಿ | ಅತೀ ಹೆಚ್ಚು ಉದ್ಯೋಗ ಒದಗಿಸುವ ಕೃಷಿ ಕ್ಷೇತ್ರದ ಕಂಪನಿಕರಣಕ್ಕೆ ಮುಂದಾಗುತ್ತಿರುವುದು ಅಪಾಯಕಾರಿ: ಚಂಸು ಪಾಟೀಲ

Date:

“ದೇಶದಲ್ಲಿ ಅತ್ಯಂತ ಹೆಚ್ಚು ಉದ್ಯೋಗ ಒದಗಿಸಲು ಅವಕಾಶ ಇರುವುದು ಕೃಷಿ ಕ್ಷೇತ್ರದಲ್ಲಿ ಮಾತ್ರ. ಆದರೆ ಪ್ರಭುತ್ವದ ಚುಕ್ಕಾಣಿ ಹಿಡಿದವರು ಕೃಷಿ ಕ್ಷೇತ್ರದ ಕಂಪೆನಿಕರಣಕ್ಕೆ ಮುಂದಾಗಿ ಜನತೆ ಕೃಷಿಯಿಂದ ವಿಮುಖರಾಗುವಂತೆ ಮಾಡುತ್ತಿರುವುದು ಅಪಾಯಕಾರಿಯಾಗಿ ಪರಿಣಮಿಸಲಿದೆ” ಎಂದು ಪ್ರಗತಿಪರ ಸಾಹಿತಿ ಚಂಸು ಪಾಟೀಲ ಅಭಿಪ್ರಾಯಪಟ್ಟರು.

- Advertisement -

ಹಾವೇರಿ ಪಟ್ಟಣದಲ್ಲಿ ಇಂದು ಭಗತ್ ಸಿಂಗ್ ಪಿ.ಯು ಕಾಲೇಜಿನಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಜಿಲ್ಲಾ ಸಮಿತಿ ವತಿಯಿಂದ ನಿರುದ್ಯೋಗದ ವಿರುದ್ಧ ಉದ್ಯೋಗದ ಹಕ್ಕಿಗಾಗಿ ಯುವಜನರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಟಾಟಾ ಸನ್ಸ್ ಬೋರ್ಡ್ ರೂಮ್ ಕಲಹದ ಆಳ ಅಗಲವೇನು...

ಭಾರತದ ಭಾರೀ ಉದ್ಯಮ ಬ್ರ್ಯಾಂಡ್‌ಗಳಲ್ಲಿ ಒಂದು ಟಾಟಾ. ಉಪ್ಪಿನಿಂದ ಹಿಡಿದು ಉಕ್ಕು, ಕಾರು, ಐಟಿ, ಹೋಟೆಲ್, ವಿಮಾನಯಾನ, ಎಲೆಕ್ಟ್ರಿಕ್ ವಾಹನ, ಈಗ ಸೆಮಿಕಂಡಕ್ಟರ್‌ವರೆಗೆ ಟಾಟಾ ಸಾಮ್ರಾಜ್ಯ ವ್ಯಾಪಿಸಿದೆ. ಆದರೆ, ಈಗ ಇದೇ ಟಾಟಾ ಸಾಮ್ರಾಜ್ಯದ...

ESA ತೂಗುಗತ್ತಿ: ಕಸ್ತೂರಿ ರಂಗನ್ ವರದಿ ಕುರಿತು ಅರಣ್ಯ...

“ಗ್ರಾಮದ ಕನಿಷ್ಠ 20 ಪ್ರತಿಶತದಷ್ಟು ಪ್ರದೇಶವು ‘ಪರಿಸರ ಸೂಕ್ಷ್ಮ ಪ್ರದೇಶ’ (ESA) ಎಂದು ಕಂಡುಬಂದರೆ, ಉಳಿದ 80% ಪ್ರದೇಶ ನಗರೀಕರಣಗೊಂಡಿದ್ದರೂ ಇಡೀ ಗ್ರಾಮವನ್ನು ESA ಎಂದು ಪರಿಗಣಿಸುವ ನೀತಿಯನ್ನು ಕಸ್ತೂರಿ ರಂಗನ್ ವರದಿ...

ರಾಮದುರ್ಗ, ಸವದತ್ತಿ ಬರ ಘೋಷಣೆಗೆ ರೈತರ ಆಗ್ರಹ: 10...

"ಬರಪೀಡಿತ ತಾಲೂಕು ಘೋಷಣೆಯಾಗುತ್ತದೆಂಬ ವಿಶ್ವಾಸದಲ್ಲಿ ಗ್ರೌಂಡ್ ಟ್ರೂಥಿಂಗ್ ಮಾಡಲು ಸಿದ್ಧರಾಗಿದ್ದೆವು. ಆದರೆ ಅದು ಆಗಿಲ್ಲ. ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಲು ಇನ್ನೂ ಅವಕಾಶವಿದೆ" ಎಂದು ಕೃಷಿ ಅಧಿಕಾರಿಗಳು ಹೇಳಿದರು. ಮುಂಗಾರು ಆರಂಭದಲ್ಲಿ ಉತ್ತಮ...

“ಕೃಷಿ ಕ್ಷೇತ್ರವನ್ನು ಸುಸ್ಥಿರವಾಗಿ ಅಭಿವೃದ್ಧಿಪಡಿಸಿದರೆ ಸಾಕಷ್ಟು ಯುವಜನರಿಗೆ ಉದ್ಯೋಗ ದೊರೆತು ಅವರು ಬದುಕು ಕಟ್ಟಿಕೊಳ್ಳುವ ಅವಕಾಶವಿದೆ. ಆ ಮೂಲಕ ಯುವ ಜನರು ನಿರುದ್ಯೋಗಿಗಳಾಗದಂತೆ ತಡೆಯಲು ಸಾಧ್ಯವಿದೆ. ಇದಕ್ಕಾಗಿ ಸೂಕ್ತ ಕಾರ್ಯ ಯೋಜನೆ ರೂಪಿಸಿ ಪ್ರಾಮಾಣಿಕ ಬದ್ಧತೆ ಹಾಗೂ ಇಚ್ಛಾಶಕ್ತಿಯಿಂದ ಆಳುವ ಸರಕಾರಗಳು ಜಾರಿಗೊಳಿಸಬೇಕು. ಯುವಜನತೆ ಈ ನಿಟ್ಟಿನಲ್ಲಿ ಪ್ರಬಲವಾಗಿ ಧ್ವನಿ ಎತ್ತಬೇಕು” ಎಂದರು.

ಮುಖ್ಯ ಅತಿಥಿಗಳು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, “ಕೇಂದ್ರ ಮತ್ತು ರಾಜ್ಯ ಸರಕಾರಗಳು ಖಾಲಿ ಇರುವ ಹುದ್ದೆಗಳನ್ನು ಭರ್ತಿಗೊಳಿಸಲು ಹಾಗೂ ನಿರುದ್ಯೋಗ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಕೆಲಸ ಮಾಡುತ್ತಿಲ್ಲ. ಉದ್ಯೋಗ ಸೃಷ್ಠಿಸುತ್ತೆವೆಂಬ ಹುಸಿ ಭರವಸೆ ನೀಡುತ್ತಾ ವಂಚಿಸುತ್ತಿರುವ ಹುನ್ನಾರದ ವಿರುದ್ಧ ಯುವ ಜನರು ಪ್ರಬಲ ಆಂದೋಲನಕ್ಕೆ ಮುಂದಾಗಬೇಕು” ಎಂದು ಕರೆ ನೀಡಿದರು.

“ಕೃಷಿ ಪ್ರಧಾನ ಹಾವೇರಿ ಜಿಲ್ಲೆಯಲ್ಲಿ ಕೃಷಿಯಾಧಾರಿತ ಕೈಗಾರಿಕೆಗಳನ್ನು ಆರಂಭಿಸಿ ಜಿಲ್ಲೆಯ ಯುವಜನರಿಗೆ ಉದ್ಯೋಗ ಒದಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಜಿಲ್ಲೆಯ ಜನಪ್ರತಿನಿಧಿಗಳು ಮಾಡಬೇಕಿತ್ತು. ಆದರೆ ಜನರಿಂದ ಅಧಿಕಾರ ಹಿಡಿದವರು ತಮ್ಮನ್ನು ಆಯ್ಕೆ ಮಾಡಿದ ಶಿಕ್ಷಣ, ಉದ್ಯೋಗ ಹಾಗೂ ಆರೋಗ್ಯ ವ್ಯವಸ್ಥೆಯನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ” ಎಂದರು.

“ಉದ್ಯೋಗದ ಹಕ್ಕು ಮೂಲಭೂತ ಹಕ್ಕು’ ಆದರೆ ಆ ಹಕ್ಕು ಯುವಜನರಿಗೆ ದೊರೆಯುತ್ತಿಲ್ಲ. ಈಗಾಗಲೇ ಕಳೆದ ಐದು ವರ್ಷಗಳಿಂದ ನೇಮಕಾತಿ ಮಾಡದಿರುವುದರಿಂದ ಅರ್ಹ ಉದ್ಯೋಗಾಂಕ್ಷಿಗಳ ವಯೋಮಿತಿ ಮೀರುತ್ತಿದೆ. ಸರಕಾರ ವಯೋಮಿತಿ ಕನಿಷ್ಠ ಐದು ವರ್ಷ ವಯೋಮಿತಿ ಹೆಚ್ಚಳಗೊಳಿಸಬೇಕು. ಖಾಲಿಯಿರುವ ಹುದ್ದೆಗಳನ್ನು ಭರ್ತಿಗೊಳಿಸಬೇಕು” ಎಂದು ಆಗ್ರಹಿಸಿದರು.

ಸತೀಶ ಎಂ.ಬಿ ಮಾತನಾಡಿ, “ವಿದ್ಯಾರ್ಥಿ ಯುವಜನತೆ ಕಷ್ಟಪಟ್ಟು ಅಧ್ಯಯನ ಮಾಡಿ ಬದುಕು ಕಟ್ಟಿಕೊಳ್ಳಬೇಕು. ಉದ್ಯೋಗದ ಅವಕಾಶಗಳಿಗಾಗಿ ಐಕ್ಯತೆಯಿಂದ ಧ್ವನಿ ಎತ್ತಬೇಕು” ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ನಾರಾಯಣ ಕಾಳೆ ಮಾತನಾಡಿ, “ಜಿಲ್ಲೆಯಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳ ಭರ್ತಿಗೆ ಜನಪ್ರತಿನಿಧಿಗಳು ಮುಂದಾಗಬೇಕು. ಯುವಜನರು ಸ್ವಾವಲಂಬಿಯಾಗಿ ಜೀವನ ಕಟ್ಟಿಕೊಳ್ಳಲು ಅಗತ್ಯ ಕಾರ್ಯಯೋಜನೆ ರೂಪಿಸಿ ಜಾರಿಗೊಳಿಸಬೇಕು” ಎಂದರು.

ವೇದಿಕೆ ಮೇಲೆ ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್, ಡಿವೈಎಫ್ಐ ಜಿಲ್ಲಾ ಮುಖಂಡರಾದ ಪ್ರಿಯಾ ಗಡ್ಡಿಯವರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಡಿವೈಎಫ್ಐ ಮುಖಂಡರು ಹಬೀಬ್ ಮುಲ್ಲಾ, ಮೌಲಾಲಿ ನವಲಗುಂದ, ಮಂಜುಳಾ ಹಾನಗಲ್, ವೀರಣ್ಣ ಗಡ್ಡಿಯವರ, ಮೇಘನಾ ಕಹಾರ, ಅಭಿಷೇಕ ಎಸ್.ಕೆ, ನಿಂಗರಾಜ ಪೂಜಾರ ಸೇರಿದಂತೆ ವಿವಿಧ ಘಟಕಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು. ವಿಶಾಲಾ ಬಿ ಮುಳಗುಂದ ಸ್ವಾಗತಿಸಿ, ನಿರ್ವಹಿಸಿದರು. ರೇಣುಕಾ ಕಹಾರ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಡಿಜೆ ಸೌಂಡ್‌ನಿಂದ ಮಗಳು ಅಸ್ವಸ್ಥ ಆರೋಪ: ಡಿಸಿ ನಿವಾಸದ ಮುಂದೆ ಪ್ರತಿಭಟನೆ

ಡಿಜೆ ಸೌಂಡ್‌ನಿಂದ ಮಗಳು ಅಸ್ವಸ್ಥಗೊಂಡಿದ್ದಾಳೆ ಎಂದು ಆರೋಪಿಸಿ ಕುಟುಂಬಸ್ಥರು ಜಿಲ್ಲಾಧಿಕಾರಿ ನಿವಾಸದ...

ರಾಯಚೂರು | ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಟ್ರ್ಯಾಕ್ಟರ್ ಹರಿದು: ಇಬ್ಬರು ಸಾವು

ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಟ್ರ್ಯಾಕ್ಟರ್ ಹರಿದು ಇಬ್ಬರು ಬಾಲಕರು ಮೃತಪಟ್ಟಿದ್ದು,...

ಹಾವೇರಿ | ರದ್ದು ಪಡಿಸಿದ ಎಂಟು ಕೊರ್ಸಗಳನ್ನು  ಮುಂದುವರೆಸುವಂತೆ ಅತಿಥಿ ಉಪನ್ಯಾಸಕರ ಧರಣಿಗೆ ಡಿವೈಎಫ್ಐ-ಎಸ್ಎಫ್ಐ ಬೆಂಬಲಿಸಿ ಪ್ರತಿಭಟನೆ

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ರದ್ದುಪಡಿಸಿದ ಎಂಟು ಕೋರ್ಸ್ ಗಳು ಮುಚ್ಚದೇ ಮುಂದುವರೆಸುವಂತೆ...

ಯಾದಗಿರಿ | ಎರಡು ವರ್ಷವಾದರೂ ಪೂರ್ಣಗೊಳ್ಳದ ರಸ್ತೆ ಕಾಮಗಾರಿ: ರೈತ ಸಂಘ ಆಕ್ರೋಶ

ಸುರಪುರ ತಾಲೂಕಿನ ರುಕ್ಕಾಪೂರದಿಂದ ಬೇವಿನಾಳ ಎಸ್.ಎಚ್. ಗ್ರಾಮದವರೆಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ...