ಅರುಣಾಚಲ ಪ್ರದೇಶ | ‘ಒಂದಿಂಚು ಭೂಮಿ ಬಿಡೆವು’ ಎಂದ ಅಮಿತ್ ಶಾ; ‘ಸಾರ್ವಭೌಮತೆಗೆ ಧಕ್ಕೆ’ ಎಂದು ಆಕ್ಷೇಪಿಸಿದ ಚೀನಾ

Date:

Advertisements

ಅಮಿತ್ ಶಾ ಅರುಣಾಚಲ ಪ್ರದೇಶ ಭೇಟಿಗೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ. ಈ ನಡುವೆ ಒಂದಿಂಚು ಭೂಮಿಯನ್ನೂ ಕೊಡೆವು ಎಂದು ಅಮಿತ್ ಶಾ ಘೋಷಿಸಿರುವುದು ಗಡಿಯಲ್ಲಿ ಮತ್ತೆ ಸಂಘರ್ಷದ ವಾತಾವರಣದ ಸೂಚನೆ ನೀಡಿದೆ

ಅರುಣಾಚಲ ಪ್ರದೇಶದ ಪ್ರಮುಖ ನಗರಗಳ ಹೆಸರುಗಳನ್ನು ಚೀನಾ ಮರುನಾಮಕರಣ ಮಾಡಿದ ನಂತರ ಕೇಂದ್ರ ಗೃಹಸಚಿವ ಅಮಿತ್ ಶಾ ಆ ರಾಜ್ಯಕ್ಕೆ ಭೇಟಿ ನೀಡಿ ಒಂದಂಚು ನೆಲವನ್ನೂ ಬಿಟ್ಟುಕೊಡುವುದಿಲ್ಲ ಎಂದು ಘೋಷಿಸಿದ್ದಾರೆ.

ಇತ್ತೀಚೆಗೆ ಅದಾನಿ ವಿಚಾರವಾಗಿಯೂ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಚೀನಾ ಮತ್ತು ಪ್ರಧಾನಿ ಮೋದಿಯ ಆಪ್ತ ಮಿತ್ರ ಉದ್ಯಮಿ ಗೌತಮ್ ಅದಾನಿ ನಡುವೆ ಸಂಬಂಧ ಪ್ರಶ್ನಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅಮಿತ್ ಶಾ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿರುವುದು ಮಹತ್ವದ ರಾಜಕೀಯ ಬೆಳವಣಿಗೆಯಾಗಿದೆ.

Advertisements

ಅರುಣಾಚಲ ಪ್ರದೇಶದ ಗಡಿಭಾಗದ ಗ್ರಾಮ ಕಿಬಿಥೂಗೆ ಅಮಿತ್ ಶಾ ಭೇಟಿ ನೀಡಿರುವುದಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ. “ಚೀನಾದ ಸಾರ್ವಭೌಮತೆಗೆ ಧಕ್ಕೆ ತರಲಾಗಿದೆ” ಎಂದು ಚೀನಾ ಅಭಿಪ್ರಾಯಪಟ್ಟಿದೆ.

ಅರುಣಾಚಲ ಪ್ರದೇಶದ ಕೆಲವು ನಗರಗಳ ಹೆಸರನ್ನು ಚೀನಾ ಬದಲಿಸಿದ ವಾರದೊಳಗೆ ಅಮಿತ್ ಶಾ ಈಗ ರಾಜ್ಯದ ಭೇಟಿಯಲ್ಲಿದ್ದಾರೆ.

ಏಪ್ರಿಲ್ 9ರಂದು ಈಶಾನ್ಯ ರಾಜ್ಯದಲ್ಲಿ ಸಭೆ ನಡೆಸಿದ ಅಮಿತ್ ಶಾ, “ನಮ್ಮ ಭೂಮಿಯ ಒಂದಿಂಚನ್ನೂ ಯಾರಿಗೂ ತೆಗೆದುಕೊಳ್ಳಲು ಬಿಡುವುದಿಲ್ಲ” ಎಂದು ಹೇಳಿದ್ದಾರೆ.

ಕಿಬಿಥೂ ನಿವಾಸಿಗಳು ಭಾರತ- ಚೀನಾ ಯುದ್ಧದ ಸಂದರ್ಭದಲ್ಲಿ ಸಂಪನ್ಮೂಲಗಳ ಹೊರತಾಗಿಯೂ ಭಾರತದ ಪರವಾಗಿ ಅತೀವ ಉತ್ಸಾಹವನ್ನು ತೋರಿಸಿರುವುದನ್ನು ನೆನಪಿಸಿಕೊಂಡ ಶಾ, 1962ರ ಯುದ್ಧದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಗೃಹಸಚಿವರ ಅರುಣಾಚಲ ಪ್ರದೇಶ ಭೇಟಿಯನ್ನು ದೃಢವಾಗಿ ಚೀನಾ ವಿರೋಧಿಸಿದೆ. “ಅರುಣಾಚಲದಲ್ಲಿ ಅಮಿತ್ ಶಾ ಚಟುವಟಿಕೆಗಳು ಚೀನಾದ ಪ್ರಾದೇಶಿಕ ಸಾರ್ವಭೌಮತ್ವಕ್ಕೆ ಅಡ್ಡಿಯಾಗಿದೆ” ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಪ್ರತಿಪಕ್ಷಗಳ ದಮನದಿಂದ ಭಾರತದ ಸಮಸ್ಯೆಗಳು ಪರಿಹಾರವಾಗದು: ಸೋನಿಯಾ ಗಾಂಧಿ

“ಝಾಂಗ್ನಾನ್ ಚೀನಾದ ಪ್ರದೇಶ. ಝಾಂಗ್ನಾನ್‌ಗೆ ಭಾರತೀಯ ಅಧಿಕಾರಿಯ ಭೇಟಿ ಚೀನಾದ ಪ್ರಾದೇಶಿಕ ಸಾರ್ವಭೌಮತ್ವಕ್ಕೆ ಧಕ್ಕೆ ತರುತ್ತದೆ. ಗಡಿ ಭಾಗದಲ್ಲಿ ಶಾಂತಿ ಮತ್ತು ಸಮಾಧಾನ ಕಾಪಾಡುವಲ್ಲಿ ಇದು ಅಡಚಣೆಯುಂಟು ಮಾಡಲಿದೆ” ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್‌ಬಿನ್ ಸೋಮವಾರ ಹೇಳಿಕೆ ನೀಡಿದ್ದಾರೆ.

ಚೀನಾದ ಕಿಬಿಥೂನಲ್ಲಿ ‘ವೈಬ್ರಂಟ್ ವಿಲೇಜಸ್‌’ ಎನ್ನುವ ಕಾರ್ಯಕ್ರಮದಲ್ಲಿ ಮಾತನಾಡಿದ ಶಾ, “ಭಾರತದ ಗಡಿಭಾಗಕ್ಕೆ ದೇಶ ಮೊದಲ ಆದ್ಯತೆ ಕೊಡಲಿದೆ. ಯಾರೇ ಬೇಕಾದರೂ ಭಾರತದ ಭೂಮಿಗೆ ಕಾಲಿಡುವ ಪ್ರಯತ್ನ ನಡೆಸುವ ಕಾಲ ಮರೆಯಾಗಿದೆ. ಒಂದು ಸೂಜಿಯಷ್ಟು ಭಾಗವನ್ನೂ ಭಾರತ ಬಿಟ್ಟುಕೊಡದು” ಎಂದು ಅವರು ಹೇಳಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಅಮೆರಿಕದ ‘ಅಕ್ಕರೆಯ ನ್ಯಾಯಾಧೀಶ’ ಫ್ರಾಂಕ್ ಕ್ಯಾಪ್ರಿಯೊ ನಿಧನ

ರೋಡ್ ಐಲ್ಯಾಂಡ್‌ನ ನಿವೃತ್ತ ಮುನಿಸಿಪಲ್ ನ್ಯಾಯಾಧೀಶರಾಗಿದ್ದ, ಸಾಮಾಜಿಕ ಜಾಲತಾಣಗಳಲ್ಲಿ 'ಅಕ್ಕರೆಯ ನ್ಯಾಯಾಧೀಶ'...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

Download Eedina App Android / iOS

X