ಭಾರತದ ಭೂಮಿಯನ್ನು ಚೀನಾ ವಶಪಡಿಸಿಕೊಂಡಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಲಡಾಖ್‌ನ ಕಾರ್ಗಿಲ್‌ನಲ್ಲಿ ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, “ಲಡಾಖ್‌ನ ಒಂದು ಇಂಚಿನಷ್ಟು ಚೀನಾ ವಶಪಡಿಸಿಕೊಂಡಿಲ್ಲ ಎಂದು ವಿರೋಧ ಪಕ್ಷದ ಸಭೆಯಲ್ಲಿ ಪ್ರಧಾನಿ ಹೇಳಿರುವುದು ದುಃಖಕರ ಸಂಗತಿ. ಇದು ಸಂಪೂರ್ಣ ಸುಳ್ಳು. ಇದು ನಮ್ಮ ಭೂಮಿಯ ವಿಷಯ. ಅವರು ನಮ್ಮ ಭೂಮಿಯನ್ನು ಕಸಿದುಕೊಳ್ಳಲು ಬಯಸಿದ್ದಾರೆ. ದೇಶದ ಗಡಿ ಪ್ರದೇಶವನ್ನು ಚೀನಾ ವಶಪಡಿಸಿಕೊಂಡಿದೆ ಎಂಬುದು ಇಲ್ಲಿರುವ ಪ್ರತಿಯೊಬ್ಬ ನಾಗರಿಕರಿಗೂ ತಿಳಿದಿರುವ ವಿಷಯ” ಎಂದು ಆರೋಪಿಸಿದರು.
ತಮ್ಮ ರ‍್ಯಾಲಿಯಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಮ್ಮಿಕೊಳ್ಳಲಾದ ಭಾರತ್ ಜೋಡೋ ಯಾತ್ರೆಯ ಕುರಿತು ಮಾತನಾಡಿದರು. ಇದು ದೇಶದಲ್ಲಿ ಬಿಜೆಪಿ-ಆರ್‌ಎಸ್‌ಎಸ್ ಹರಡುವ ದ್ವೇಷ ಮತ್ತು ಹಿಂಸಾಚಾರದ ವಿರುದ್ಧ ನಿಲ್ಲುವ ಗುರಿಯಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ಎನ್‌ಸಿಪಿಯಲ್ಲಿ ಯಾವುದೇ ಒಡಕಿಲ್ಲ, ಅಜಿತ್ ಪವಾರ್ ಈಗಲು ಎನ್‌ಸಿಪಿ ನಾಯಕ ಎಂದ ಶರದ್ ಪವಾರ್
“ನಾನು ಯಾತ್ರೆಯಿಂದ ಕಂಡುಕೊಂಡ ಸಂದೇಶವೆಂದರೆ ‘ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯಲು ಹೊರಟಿದ್ದೇವೆ ಎಂಬುದು’. ಕಳೆದ ಕೆಲವು ದಿನಗಳಲ್ಲಿ, ನಾನು ಇದನ್ನು ಸ್ವತಃ ನೋಡಿದೆ. ಯಾತ್ರೆಯ ಸಮಯದಲ್ಲಿ, ಚಳಿಗಾಲದಲ್ಲಿ ಹಿಮದ ಕಾರಣ ನಾನು ಲಡಾಖ್‌ಗೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಲಡಾಖ್‌ನಲ್ಲಿ ಯಾತ್ರೆಯನ್ನು ನಡೆಸುವುದು ನನ್ನ ಹೃದಯದಲ್ಲಿತ್ತು ಮತ್ತು ನಾನು ಅದನ್ನು ಈ ಬಾರಿ ಮೋಟಾರ್‌ಬೈಕ್‌ನಲ್ಲಿ ಮುನ್ನಡೆಸಿದೆ” ಎಂದು ರಾಹುಲ್ ಗಾಂಧಿ ತಿಳಿಸಿದರು.
“ನಿಮ್ಮ ಕಷ್ಟದಲ್ಲಿ ಕಾಂಗ್ರೆಸ್ ಪಕ್ಷ ಸದಾ ನಿಮ್ಮೊಂದಿಗೆ ಇರಲಿದೆ. ಅದು ರಕ್ಷಣೆಯ ಅಥವಾ ಉದ್ಯೋಗಕ್ಕೆ ಸಂಬಂಧಿಸಿದ್ದ ವಿಷಯಗಳಾಗಿರಬಹುದು. ಲಡಾಖ್ ನೈಸರ್ಗಿಕ ಸಂಪನ್ಮೂಲದಿಂದ ಸಮೃದ್ದವಾಗಿದೆ. 21ನೇ ಶತಮಾನವು ಸೌರಶಕ್ತಿಯಿಂದ ಕೂಡಿದ್ದು, ಲಡಾಖ್‌ಗೆ ಯಾವುದೇ ಕೊರತೆ ಕಾಡುತ್ತಿಲ್ಲ” ಎಂದು ಕಾಂಗ್ರೆಸ್ ನಾಯಕ ಹೇಳಿದರು.
“ಗೌತಮ್ ಅದಾನಿಗಾಗಿ ನಿಮ್ಮ ನೆಲವನ್ನು ಸ್ವಾಧೀನಪಡಿಸಿಕೊಳ್ಳಲು ಬಿಜೆಪಿ ಬಯಸುತ್ತಿದೆ. ಆದರೆ ಯಾವುದೇ ಕಾರಣಕ್ಕೂ ನಾವು ಅದನ್ನು ಕಾರ್ಯಗತಗೊಳಿಸಲು ಬಿಡುವುದಿಲ್ಲ. ಕೆಲವರು ತಮ್ಮ ಹೃದಯದಲ್ಲಿರುವುದರ ಬಗ್ಗೆ ಮಾತನಾಡುತ್ತಾರೆ. ಆದರೆ ನಾನು ಇಲ್ಲಿ ನಿಮ್ಮ ಹೃದಯದಲ್ಲಿ ಏನಿದೆ ಎಂಬುದನ್ನು ತಿಳಿಯಲು ಬಂದಿದ್ದೇನೆ. ಗಾಂಧಿ ಮತ್ತು ಕಾಂಗ್ರೆಸ್‌ನ ಸಿದ್ಧಾಂತವು ಲಡಾಖ್ ಜನರ ರಕ್ತದಲ್ಲಿ ಮತ್ತು ಡಿಎನ್ಎಯಲ್ಲಿ ಅಡಗಿದೆ” ಎಂದು ರಾಹುಲ್ ತಿಳಿಸಿದರು.