ಚಿತ್ರದುರ್ಗ ಲೋಕಸಭಾ ಕ್ಷೇತ್ರ | ಕಾಂಗ್ರೆಸ್ ಅಭ್ಯರ್ಥಿ ಅಖಾಡಕ್ಕೆ ರೆಡಿ, ಬಿಜೆಪಿಯ ಸುಳಿವಿಲ್ಲ

Date:

Advertisements

ಲೋಕಸಭಾ ಚುನಾವಣೆಗೆ ಎಲ್ಲಾ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ. ಕ್ಷೇತ್ರದ ಅಭ್ಯರ್ಥಿ ಆಯ್ಕೆ, ಸಭೆ ಸಮಾರಂಭಗಳಲ್ಲಿ ಅಭ್ಯರ್ಥಿಗಳ ಓಡಾಟ, ಪ್ರಚಾರ ಕಾರ್ಯ ಕೂಡ ಶುರುವಾಗಿದೆ.

ಆದರೆ, ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಘೋಷಣೆಗೆ ಎಲ್ಲಾ ಪಕ್ಷಗಳು ಭಾರಿ ಕಸರತ್ತು ನಡೆಸುತ್ತಿದ್ದವು. ಜಾತಿ ಲೆಕ್ಕಾಚಾರ, ಒಳಜಾತಿ, ಈ ವರ್ಗ, ಆ ವರ್ಗ, ಹಣ ಬಲ, ಜನ ಬಲ, ತೋಳ್ಬಲ, ತಂತ್ರಗಾರಿಕೆ, ಇತ್ಯಾದಿ ಅಂಶಗಳನ್ನು ಪರಿಗಣಿಸಿ ಯಾರು ಇವುಗಳಲ್ಲಿ ಮುಂದಿದ್ದಾರೋ ಅಂತಹವರನ್ನು ಟಿಕೆಟ್ ಕೊಟ್ಟು ಚುನಾವಣೆ ರಂಗಕ್ಕೆ ಎಂಟ್ರಿ ಕೊಡಿಸುತ್ತವೆ. ಆದರೆ ಈ ವಿಷಯಗಳಲ್ಲಿ ಚಿತ್ರದುರ್ಗ ಬಹಳ ಅಭ್ಯರ್ಥಿಗಳ ಪೈಪೋಟಿಯಿಂದ ಹಿಂದೆ ಬಿದ್ದಿತ್ತು.

ರಾಜ್ಯದಲ್ಲಿ ಬಹುತೇಕ 20 ರಿಂದ 23ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪಕ್ಷಗಳ ಅಭ್ಯರ್ಥಿಗಳು ಅಕೈರಾದರೂ ಕೂಡ ಚಿತ್ರದುರ್ಗಕ್ಕೆ ಎರಡು ರಾಷ್ಟ್ರೀಯ ಪಕ್ಷಗಳಿಂದಲೂ ಯಾರು ಅಭ್ಯರ್ಥಿಯೆಂಬುದೇ ಘೋಷಣೆ ಆಗಿರಲಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳಲ್ಲೂ ಯಾರು ಅಭ್ಯರ್ಥಿಯಾಗುತ್ತಾರೆ ಎನ್ನುವುದೇ ನಿಗೂಢ ಪ್ರಶ್ನೆಯಾಗಿ ಪೈಪೋಟಿ ಏರ್ಪಟ್ಟಿತ್ತು.

Advertisements

ಚಿತ್ರದುರ್ಗವೆಂದರೆ ಹಾಗೆ 1952 ರಿಂದಲೂ ಕೂಡ ಬಹಳ ಪೈಪೋಟಿಯ ಲೋಕಸಭಾ ಕ್ಷೇತ್ರ. ಕ್ಷೇತ್ರದ ಮತದಾರ ಮತ್ತು ಮತದಾರರ ಮನಸ್ಸು ಚಿತ್ರದುರ್ಗ ಕೋಟೆಯಷ್ಟೇ ನಿಗೂಢ. ಇಲ್ಲಿ ಸ್ಥಳೀಯರು ಮತ್ತು ಹೊರಗಿನವರು ಎನ್ನುವ ಕೂಗು ಬಹಳ ಜೋರಾಗಿ ಕೇಳಿ ಬರುತ್ತದೆ. ಆದರೆ ಇದುವರೆಗೂ ಕ್ಷೇತ್ರದಲ್ಲಿ ನಡೆದಿರುವ 17 ಲೋಕಸಭಾ ಚುನಾವಣೆಗಳಲ್ಲಿ ಸಂಸದರಾಗಿ ಆಯ್ಕೆ ಆಗಿರುವವರಲ್ಲಿ ಬಹುತೇಕರು ಕ್ಷೇತ್ರ ಹೊರಗಿನವರು ಎಂಬುದು ವಿಶೇಷ.

ಹಾಗಾಗಿ ಈ ಬಾರಿ ಸ್ಥಳೀಯರಿಗೆ ಕೊಡಬೇಕೆಂಬ ಕೂಗು ಚಿತ್ರದುರ್ಗದಲ್ಲಿ ಎರಡು ಪಕ್ಷಗಳಲ್ಲಿ ಜೋರಾಗಿ ಕೇಳಿ ಬರುತ್ತಿತ್ತು. ಕೆಲ ಅಭ್ಯರ್ಥಿಗಳು ಟಿಕೆಟ್ ಗಾಗಿ ಲಾಬಿ ಕೂಡ ನೆಡೆಸಿದ್ದರು. ಆದರೂ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿ ಉಳಿದಿತ್ತು. ಆದರೆ ಅಂತಿಮವಾಗಿ ಎರಡನೇ ಪಟ್ಟಿಯಲ್ಲಿ ಕಾಂಗ್ರೆಸ್ ತನ್ನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ 2014, 2019ರಲ್ಲಿ ಎರಡು ಬಾರಿ ಸ್ಪರ್ಧಿಸಿ 2014 ರಲ್ಲಿ ಒಂದು ಬಾರಿ ಸಂಸದ ರಾಗಿ ಚಿತ್ರದುರ್ಗ ಕ್ಷೇತ್ರದಲ್ಲಿ ಆಯ್ಕೆಯಾಗಿದ್ದ ಚಿಕ್ಕಮಗಳೂರು ಜಿಲ್ಲೆಯ ಬಿಎನ್ ಚಂದ್ರಪ್ಪ ಅವರಿಗೆ ಅಂತಿಮವಾಗಿ ಟಿಕೆಟ್ ಘೋಷಿಸಿದೆ.

ಬಿ ಎನ್ ಚಂದ್ರಪ್ಪ ಕೂಡ ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಸೋತ ನಂತರ ಕ್ಷೇತ್ರದಲ್ಲಿ ಮತದಾರರ, ನಾಯಕರ ಸಂಪರ್ಕದಲ್ಲಿ ಇದ್ದುಕೊಂಡೇ ಟಿಕೆಟ್ ಗಾಗಿ ಕಸರತ್ತನ್ನು ನಡೆಸಿದರು. ಜಿಲ್ಲೆಯಲ್ಲಿ ಸ್ಥಳೀಯರಿಗೆ ಕೊಡಬೇಕೆಂಬ ಕೂಗು ಜೋರಾಗಿದ್ದರೂ ಕೂಡ ವಿನಯ್ ತಿಮ್ಮಾಪುರ, ಸ್ಥಳಿಯರಾದ ಡಾಕ್ಟರ್ ತಿಪ್ಪೇಸ್ವಾಮಿ, ನೇರ್ಲಗುಂಟೆ ರಾಮಪ್ಪ, ಮುಂತಾದವರು ಟಿಕೆಟ್ ಗಾಗಿ ಪ್ರಯತ್ನಿಸಿದರೂ ಕೂಡ ಅಂತಿಮವಾಗಿ ಹೈಕಮಾಂಡ್ ಬಿಎನ್ ಚಂದ್ರಪ್ಪ ಅವರನ್ನೇ ಮತ್ತೊಮ್ಮೆ ಕಣಕ್ಕಿಳಿಸಿದೆ. ಬಿಎನ್ ಚಂದ್ರಪ್ಪ ಕೂಡ ಮಾಜಿ ಸಮಾಜ ಕಲ್ಯಾಣ ಸಚಿವ ಹೆಚ್ ಆಂಜನೇಯ ಅವರೊಂದಿಗೆ ಬಹುದಿನದಿಂದಲೂ ಜೊತೆಗಿದ್ದು ಕ್ಷೇತ್ರದ ಸುತ್ತಾಟ ನಡೆಸಿದ್ದು ಮತದಾರರ ವಿಶ್ವಾಸ ಗಳಿಸಲು ಪ್ರಯತ್ನಿಸುತ್ತಿದ್ದಾರೆ.

ಆದರೆ ಎದುರಾಳಿ ಪಕ್ಷವಾದ ಬಿಜೆಪಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿ ಯಾರು ಎಂಬುದನ್ನು ಇದುವರೆಗೂ ಕೂಡ ಖಚಿತಪಡಿಸಿಲ್ಲ.‌ ಪಕ್ಷದ ಮೂಲಗಳು ಕೂಡ ಇಂತಹವರೇ ಅಭ್ಯರ್ಥಿಗಳ ರೇಸ್ ನಲ್ಲಿ ಇದ್ದಾರೆ ಎಂಬುದನ್ನು ತಿಳಿಸಲು ವಿಫಲವಾಗಿವೆ. ಕಾರಣ ಹಾಲಿ ಕೇಂದ್ರ ಸಬಲೀಕರಣ ಖಾತೆ ಸಚಿವ ಎ ನಾರಾಯಣಸ್ವಾಮಿ ಚಿತ್ರದುರ್ಗ ಸಂಸದರಾಗಿದ್ದು ಈ ಮುಂಚೆ ರಾಜಕೀಯ ನಿರಾಸಕ್ತಿ ತೋರಿಸಿದ್ದರು. ಸಮಾರಂಭವೊಂದರಲ್ಲಿ ಮಾತನಾಡುತ್ತಾ ಈ ರಾಜಕೀಯ ಸಾಕಾಗಿದೆ ಎನ್ನುವ ರೀತಿ ಮಾತನಾಡಿದರು. ಆನಂತರದಲ್ಲಿ ಚಿತ್ರದುರ್ಗದಲ್ಲಿ ಟಿಕೆಟ್ ಗಾಗಿ ಬಹುಜನ ಆಕಾಂಕ್ಷಿಗಳು ಹುಟ್ಟಿಕೊಂಡಿದ್ದರು. ಮಾಜಿ ಸಂಸದ ಜನಾರ್ಧನ ಸ್ವಾಮಿ, ಮಾಜಿ ಐಎಎಸ್ ಅಧಿಕಾರಿಗಳಾದ ಲಕ್ಷ್ಮೀ ನಾರಾಯಣ, ಶ್ರೀರಂಗಯ್ಯ ಹಾಗೂ ಮುಖಂಡ ಸೂರನಹಳ್ಳಿ ವಿಜಯಣ್ಣ, ರಘು ಚಂದನ್ ಹಾಗೂ ಇನ್ನಿತರರು ಟಿಕೆಟ್ ಗಾಗಿ ಲಾಬಿ ನಡೆಸಿದ್ದರು.

ಚಿತ್ರದುರ್ಗ ಲೋಕಸಭೆ ಅಭ್ಯರ್ಥಿ ಆಯ್ಕೆ ವಿಚಾರ ಬಿಜೆಪಿ ಪಾಳಯದಲ್ಲಿ ಬಿಡಿಸಲಾರದ ಬ್ರಹ್ಮಗಂಟಾಗಿದೆ. ಗುರುವಾರ ಇಡೀ ದಿನ ಚಿತ್ರದುರ್ಗ ಕ್ಷೇತ್ರದ ವಿಚಾರವಾಗಿ ಬೆಂಗಳೂರಿನಲ್ಲಿ ಹಲವು ಪ್ರಮುಖರು ಗಂಭೀರವಾಗಿ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎರಡನೇ ಪಟ್ಟಿಯಲ್ಲೂ ಚಿತ್ರದುರ್ಗದ ಅಭ್ಯರ್ಥಿ ಹೆಸರು ಅಂತಿಮಗೊಳಿಸದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಮಾಜಿ ಸಚಿವ ಗೋವಿಂದ ಕಾರಜೋಳ ಅವರ ಮನೆಯಲ್ಲಿ ಮಾದಿಗ ಸಮುದಾಯದ ಮುಖಂಡರು ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ ಎನ್ನುವ ಮಾಹಿತಿ ಹರಿದಾಡಿದೆ.

ಈ ಸಭೆಯಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳ, ಚಿತ್ರದುರ್ಗ ಸಂಸದ, ಸಚಿವ ಎ.ನಾರಾಯಣಸ್ವಾಮಿಯವರು ಕೂಡ ಭಾಗಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ. ಚಿತ್ರದುರ್ಗ ಲೋಕಸಭಾ ಟಿಕೆಟನ್ನು ಕ್ಷೇತ್ರದಲ್ಲಿ ಅತಿ ಹೆಚ್ಚು ಮತ ಹೊಂದಿರುವ ಮಾದಿಗ ಸಮುದಾಯಕ್ಕೆ ಕೊಡಬೇಕು. ಯಾವ ಕಾರಣಕ್ಕೂ ಕ್ಷೇತ್ರ ಕೈ ತಪ್ಪಬಾರದು ಎಂದು ಹಲವು ಮುಖಂಡರು ಪಟ್ಟು ಹಿಡಿದಿದ್ದಾರೆ.

ಬಹುತೇಕ ಕರ್ನಾಟಕದಲ್ಲಿ ತನ್ನ ಪಾಲಿನ 25 ಕ್ಷೇತ್ರಗಳಲ್ಲಿ 21 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಗುರುತಿಸಿರುವ ಬಿಜೆಪಿ ಚಿತ್ರದುರ್ಗ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಘೋಷಿಸಲಾಗಿಲ್ಲ. ಚಿತ್ರದುರ್ಗದಲ್ಲಿ ಸಮರ್ಥ ಅಭ್ಯರ್ಥಿ ಇಲ್ಲವೋ ಅಥವಾ ಅಭ್ಯರ್ಥಿಗಳೇ ಸಿಗಲಿಲ್ಲವೋ ಎಂಬ ಪ್ರಶ್ನೆ ಮತದಾರರಲ್ಲಿ ಕಾಡುತ್ತಿದೆ. ಅಲ್ಲಿ ಸಂಸದರಾಗಿರುವವರು ಕೂಡ ಅಭ್ಯರ್ಥಿಯಾಗಲು ಒಪ್ಪುತ್ತಿಲ್ಲವೋ? ಅದಕ್ಕೆ ಕಾರಣವೇನು ಎಂದು ಮತದಾರ ಪ್ರಶ್ನಿಸುತ್ತಿದ್ದಾನೆ?

ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷ ಮತ್ತು ಪಕ್ಷದ ಅಭ್ಯರ್ಥಿಗಳು ಕ್ರಿಯಾಶೀಲರಾಗಬೇಕಿತ್ತು. ಮತದಾರರ ಮನಸ್ಸಿಗೆ ಗೆಲ್ಲಲು ನಾನಾ ಕಸರತ್ತು, ಸಮಯ ಸಭೆ, ಸಮಾರಂಭಗಳನ್ನು ನಡೆಸಲು ತಯಾರಿ ಮಾಡಿಕೊಳ್ಳಬೇಕಿತ್ತು. ಆದರೆ ಚಿತ್ರದುರ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಅಭ್ಯರ್ಥಿಯನ್ನು ಅಣಿಗೂಳಿಸಿ ಅಖಾಡಕ್ಕೆ ಕಳುಹಿಸಿದರೂ ಬಿಜೆಪಿಯಿಂದ ಅಖಾಡಕ್ಕೆ ಯಾರು ಎಂಬುದನ್ನು ತಿಳಿಸುತ್ತಿಲ್ಲ.‌ ಇದು ಚುನಾವಣೆಗೂ ಮೊದಲೇ ಶಸ್ತ್ರತ್ಯಾಗವೇ ಎಂಬ ಪ್ರಶ್ನೆ ಕಾಡುತ್ತಿದೆ.

ಅಳೆದು ತೂಗಿ ಟಿಕೆಟ್ ಘೋಷಿಸುವ ಬಿಜೆಪಿ ಚಿತ್ರದುರ್ಗ ಕ್ಷೇತ್ರದಲ್ಲಿ ತಡವರಿಸುತ್ತಿರುವುದು ಎಲ್ಲಿ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಕ್ಷೇತ್ರದಲ್ಲಿ ಕೇಂದ್ರ ಸಚಿವ ನಾರಾಯಣಸ್ವಾಮಿ, ಗೋವಿಂದ ಕಾರಜೋಳ, ಶ್ರೀರಂಗಯ್ಯ, ರಘುಚಂದನ್ ಸೇರಿದಂತೆ ಟಿಕೆಟ್ ಗಾಗಿ ಕೆಲ ಹೆಸರು ಗಳು ಕೇಳಿ ಬರುತ್ತಿದ್ದು ಅಂತಿಮವಾಗಿ ಗೋವಿಂದ್ ಕಾರಜೋಳ ಮತ್ತು ನಾರಾಯಣಸ್ವಾಮಿ ನಡುವೆ ಪೈಪೋಟಿ ಇದೆ ಎಂದು ಗೊತ್ತಾಗಿದೆ. ನಾರಾಯಣಸ್ವಾಮಿ ಈ ಬಾರಿ ಚಿತ್ರದುರ್ಗ ಕ್ಷೇತ್ರದಲ್ಲಿ ಒಲ್ಲದ ಮನಸ್ಸಿನಿಂದಲೇ ಟಿಕೆಟ್ ಬಯಸಿದ್ದು, ಗೋವಿಂದ ಕಾರಜೋಳ ತಮಗೆ ಟಿಕೆಟ್ ಕೇಳುತ್ತಿದ್ದಾರೆ ಎನ್ನುವ ಮಾಹಿತಿ ಇದೆ.‌ ಆದರೆ ನಾರಾಯಣಸ್ವಾಮಿ ಕೂಡ ತಮಗೆ ಅಥವಾ ಗೋವಿಂದ ಕಾರಜೋಳಗೆ ಟಿಕೆಟ್ ಕೊಡಿ ಎನ್ನುವ ಸಲಹೆ ಕೊಟ್ಟಿದ್ದು ಆದರೆ ವರಿಷ್ಠರು ಮತ್ತು ರಾಷ್ಟ್ರ ನಾಯಕರು ಗೋವಿಂದ ಕಾರಜೋಳ ಹೆಸರನ್ನು ಅಕೈರುಗೊಳಿಸಲು ಒಪ್ಪುತ್ತಿಲ್ಲ. ಇತ್ತ ನಾರಾಯಣ ಸ್ವಾಮಿಯವರಿಗೆ ಚುನಾವಣೆಯಲ್ಲಿ ಅಭ್ಯರ್ಥಿಯಾಗಲು ಸಂಪೂರ್ಣ ಮನಸ್ಸಿಲ್ಲ ಎಂದು ಪಕ್ಷದ ವಲಯಗಳಲ್ಲಿ ಮಾತು ಕೇಳಿ ಬರುತ್ತಿದೆ.

ಹಾಗಾಗಿ ಕಾಂಗ್ರೆಸ್ ಅಕಾಡಕ್ಕೆ ಬಂದರೂ ಬಿಜೆಪಿಯ ಸುಳಿವೇ ಚಿತ್ರದುರ್ಗದಲ್ಲಿಲ್ಲ. ಮಾರ್ಚ್ 28 ರಿಂದ ನಾಮಪತ್ರ ಪ್ರಕ್ರಿಯೆ ಶುರುವಾಗುವ ದಿನಾಂಕಕ್ಕೆ ಕೇವಲ 5 ದಿನ ಬಾಕಿ ಇರುವಾಗಲೂ ಬಿಜೆಪಿಗೆ ಟಿಕೆಟ್ ಘೋಷಿಸಲಾಗಿಲ್ಲ. ಹಾಗಾಗಿ ಕ್ಷೇತ್ರದ ಮತದಾರ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾದರೂ, ಬಿಜೆಪಿ ಅಭ್ಯರ್ಥಿಯ ಸುಳಿವಿಲ್ಲ. ಬಿಜೆಪಿಯದು ಚುನಾವಣೆಗೆ ಮುಂಚೆ ಶಸ್ತ್ರತ್ಯಾಗವೇ ಅಥವಾ ಒಂದು ಹೆಜ್ಜೆ ಹಿಂದಿಟ್ಟು ರಭಸವಾಗಿ ಮುನ್ನುಗುವ ತಂತ್ರವೇ ಎಂದು ಯೋಚಿಸುತ್ತಿದ್ದಾನೆ. ಈ ಎಲ್ಲಾ ಪ್ರಶ್ನೆಗಳಿಗೂ ಬಿಜೆಪಿಗರೇ ಉತ್ತರ ನೀಡಬೇಕಷ್ಟೇ.

ವಿನಾಯಕ್
ವಿನಾಯಕ್ ಚಿಕ್ಕಂದವಾಡಿ
+ posts

ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ವಿನಾಯಕ್ ಚಿಕ್ಕಂದವಾಡಿ
ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

Download Eedina App Android / iOS

X