ಜಾರ್ಖಂಡ್‌ನಲ್ಲಿ ಇಂದು ನಡೆದ ವಿಶ್ವಾಸಮತ ಯಾಚನೆಯಲ್ಲಿ ನೂತನ ಸಿಎಂ ಚಂಪೈ ಸೊರೇನ್ ಅವರು ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಸರ್ಕಾರ ಸುಭದ್ರವಾಗಿರುವುದನ್ನು ಸಾಬೀತುಪಡಿಸಿದ್ದಾರೆ.
#WATCH | CM Champai Soren led Jharkhand government wins floor test after 47 MLAs support him
29 MLAs in Opposition. pic.twitter.com/OEFS6DPecK
— ANI (@ANI) February 5, 2024
ಸಿಎಂ ಚಂಪೈ ಸೊರೆನ್ ಅವರ ನೇತೃತ್ವದ ಜಾರ್ಖಂಡ್ ಸರ್ಕಾರಕ್ಕೆ 47 ಶಾಸಕರು ಬಹುಮತದ ಬೆಂಬಲ ಸೂಚಿಸಿದರೆ, 29 ಶಾಸಕರು ವಿಪಕ್ಷ ಸದಸ್ಯರ ಬೆಂಬಲದಲ್ಲಿದ್ದರು.
ಒಟ್ಟು 81 ಸದಸ್ಯರ ಜಾರ್ಖಂಡ್ ವಿಧಾನಸಭೆಯಲ್ಲಿ ಜೆಎಂಎಂ 29 ಶಾಸಕರನ್ನು ಹೊಂದಿದ್ದು ಮಿತ್ರ ಪಕ್ಷ ಕಾಂಗ್ರೆಸ್ 17 ಶಾಸಕರನ್ನು ಹೊಂದಿದೆ. ಆರ್‌ಜೆಡಿ ಮತ್ತು ಸಿಪಿಐ (ಎಂಎಲ್) ಪಕ್ಷದಿಂದ ತಲಾ ಒಬ್ಬ ಶಾಸಕರಿದ್ದಾರೆ. ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು 41 ಶಾಸಕರ ಬೆಂಬಲದ ಅಗತ್ಯವಿತ್ತು.
ಬಿಜೆಪಿಯವರು ಶಾಸಕರನ್ನು ಖರೀದಿಸಬಹುದು ಎಂಬ ಆತಂಕದಿಂದ ಫೆಬ್ರವರಿ 2ರಂದು ಹೈದರಾಬಾದ್‌ಗೆ ತೆರಳಿದ್ದ ಜೆಎಂಎಂ ನೇತೃತ್ವದ ಮೈತ್ರಿಕೂಟದ 40 ಶಾಸಕರು, ಸೋಮವಾರ ವಿಶ್ವಾಸಮತ ಯಾಚನೆ ಕಾರಣ ಭಾನುವಾರ ರಾಂಚಿಗೆ ಬಂದಿಳಿದಿದ್ದರು. ಎಲ್ಲ ಶಾಸಕರು ಮೂರು ದಿನಗಳಿಂದ ಹೈದರಾಬಾದ್‌ನ ಹೊರವಲಯದ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದರು.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೇನ್ ಅವರನ್ನು ಬಂಧಿಸುವುದಕ್ಕೂ ಮುನ್ನ ಮುಖ್ಯಮಂತ್ರಿ ಹುದ್ದೆಗೆ ಜನವರಿ 31ರಂದು ರಾಜೀನಾಮೆ ನೀಡಿದ್ದರು.
ಫೆಬ್ರವರಿ 2ರಂದು ಚಂಪೈ ಸೊರೇನ್ ಅವರು ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅಂದು ಜಾರ್ಖಂಡ್ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರು ಚಂಪೈ ಸೊರೇನ್ ಅವರಿಗೆ ಮುಂದಿನ 10 ದಿನಗಳಲ್ಲಿ ವಿಧಾನಸಭೆಯಲ್ಲಿ ತಮ್ಮ ಬಹುಮತವನ್ನು ಪ್ರದರ್ಶಿಸುವಂತೆ ಸೂಚಿಸಿದ್ದರು.
ಇದನ್ನು ಓದಿದ್ದೀರಾ? ಜಾರ್ಖಂಡ್ | ವಿಶ್ವಾಸ ಮತಯಾಚನೆಗೆ ವಿಧಾನಸಭೆಗೆ ಹೇಮಂತ್ ಸೊರೇನ್ ಆಗಮನ; ರಾಜ ಭವನದ ಮೇಲೆ ಆರೋಪ
ಚಂಪೈ ಸೊರೇನ್ ಅವರೊಂದಿಗೆ ಆರ್‌ಜೆಡಿಯ ಸತ್ಯಾನಂದ್ ಭೋಕ್ತಾ ಮತ್ತು ಕಾಂಗ್ರೆಸ್‌ನ ಅಲಂಗೀರ್ ಆಲಂ ಸೇರಿದಂತೆ ಇಬ್ಬರು ನಾಯಕರು ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಪ್ರಮಾಣ ವಚನ ಸ್ವೀಕರಿಸಿದ ನಂತರ ನಡೆಸಲಾಗಿದ್ದ ಮೊದಲ ಸಂಪುಟ ಸಭೆಯಲ್ಲಿ ಫೆ. 5ರಂದು ವಿಶ್ವಾಸಮತ ಯಾಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು.
ಸದ್ಯ ನ್ಯಾಯಾಂಗ ವಶದಲ್ಲಿರುವ ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೇನ್ವಿ ಕೂಡ ವಿಶ್ವಾಸಮತ ಯಾಚನೆಯ ಹಿನ್ನೆಲೆಯಲ್ಲಿ ವಿಧಾನಸಭೆಗೆ ಆಗಮಿಸಿದ್ದರು. ಜಾರ್ಖಂಡ್ ವಿಧಾನಸಭೆಗೆ ಹಾಜರಾಗಲು ಪಿಎಂಎಲ್‌ಎ ನ್ಯಾಯಾಲಯ ಅನುಮತಿ ನೀಡಿತ್ತು.