ಕೇಂದ್ರ ಸರ್ಕಾರವು ಪಂಜಾಬ್ ಅನ್ನು ನಿರ್ಲಕ್ಷಿಸುತ್ತಿದೆ. ಪಂಜಾಬ್ ಬಗ್ಗೆ ಕೇಂದ್ರ ಸರ್ಕಾರವು ಮಲತಾಯಿ ಧೋರಣೆ ತೋರುತ್ತಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಆರೋಪಿಸಿದ್ದಾರೆ.
ಪಟಿಯಾಲಾದ ಪೋಲೋ ಮೈದಾನದಲ್ಲಿ ನಡೆದ 76 ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರೀಯ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದ ನಂತರ ಸಭೆಯನ್ನುದ್ದೇಶಿಸಿ ಪಂಜಾಬ್ ಸಿಎಂ ಮಾತನಾಡಿದರು.
ಇದನ್ನು ಓದಿದ್ದೀರಾ? ದೆಹಲಿ ಚುನಾವಣೆ | ಚೀನೀ ಸಿಸಿಟಿವಿ ಕ್ಯಾಮೆರಾ ಬಳಕೆ, ಪಂಜಾಬ್ ಆಡಳಿತ ದುರುಪಯೋಗ: ಎಎಪಿ, ಬಿಜೆಪಿ ವಾಕ್ಸಮರ
ಕೇಂದ್ರವು ರೈತರ ಬೇಡಿಕೆಗಳನ್ನು ಒಪ್ಪಿಕೊಳ್ಳಬೇಕು ಎಂದು ಮಾನ್ ಒತ್ತಾಯಿಸಿದ್ದಾರೆ. ಸರ್ಕಾರದ ನಿರಾಸಕ್ತಿ ಧೋರಣೆಯಿಂದಾಗಿ ಗಣರಾಜ್ಯೋತ್ಸವದಂದು ಕೂಡ ರೈತರು ಆಂದೋಲನ ನಡೆಸುವಂತೆ ಮಾಡಲಾಗಿದೆ ಎಂದು ದೂರಿದರು.
“ಹೊಲಗಳ ರಾಜನಾಗಿರುವ ಟ್ರ್ಯಾಕ್ಟರ್, ಕೇಂದ್ರ ಸರ್ಕಾರದ ನಿರ್ದಯ ವರ್ತನೆಯಿಂದಾಗಿ ಆಹಾರ ಧಾನ್ಯಗಳನ್ನು ಉತ್ಪಾದಿಸುವ ಬದಲು ದೆಹಲಿಯ ಕಡೆಗೆ ರಸ್ತೆಗಳಲ್ಲಿ ಓಡಾಡಬೇಕಾಗಿದೆ” ಎಂದು ತಿಳಿಸಿದರು.
“ಸ್ವಾತಂತ್ರ್ಯದ ನಂತರದ ಏಳು ದಶಕಗಳಿಗೂ ಹೆಚ್ಚು ಕಾಲ, ಪಂಜಾಬ್ ಕೇಂದ್ರ ಸರ್ಕಾರಗಳಿಂದ ಹಿಂಜರಿತ ಮತ್ತು ವಿನಾಶಕಾರಿ ನೀತಿಗಳ ರೂಪದಲ್ಲಿ ವಿವರಿಸಲಾಗದ ತಾರತಮ್ಯವನ್ನು ಅನುಭವಿಸಿದೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಕಂಗನಾ ನಟನೆಯ ‘ಎಮರ್ಜೆನ್ಸಿ’ ಸಿನಿಮಾ ಪಂಜಾಬ್‌ನಲ್ಲಿ ನಿಷೇಧಿಸಿ: ಸಿಎಂ ಮಾನ್‌ಗೆ ಎಸ್‌ಜಿಪಿಸಿ ಪತ್ರ
ಆಹಾರ ಉತ್ಪಾದನೆಯಲ್ಲಿ ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡಿದ ರೈತರು ಗಣರಾಜ್ಯೋತ್ಸವದಂದು ಕೂಡ ಆಂದೋಲನ ನಡೆಸುವಂತೆ ಮಾಡಿರುವುದು ದುರದೃಷ್ಟಕರ. ಕೇಂದ್ರ ಸರ್ಕಾರದ ನಿರಾಸಕ್ತಿ ಧೋರಣೆಯಿಂದಾಗಿ, ದೇಶಕ್ಕೆ ಆಹಾರವನ್ನು ನೀಡುವ ಕೈಗಳು ಈಗ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಉಪವಾಸ ಸತ್ಯಾಗ್ರಹ ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ತಿಳಿಸಿದರು.
ರೈತರ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಒಪ್ಪಿಕೊಳ್ಳಬೇಕು. ಇದರಿಂದ ಅವರು ದೇಶಕ್ಕೆ ಉತ್ತಮವಾಗಿ ಸೇವೆ ಸಲ್ಲಿಸಬಹುದು. ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದಾಗಿ ರೈತರ ಸ್ಥಿತಿ ಹೇಗಿದೆ ಎಂದರೆ ಸಾಂವಿಧಾನಿಕ ಮೌಲ್ಯಗಳಲ್ಲಿ ನಂಬಿಕೆ ಇರುವ ಪ್ರತಿಯೊಬ್ಬ ಭಾರತೀಯನಿಗೂ ನೋವುಂಟು ಮಾಡುತ್ತದೆ ಎಂದರು.
“ಕೇಂದ್ರ ಸರ್ಕಾರ ಪಂಜಾಬ್ ಮತ್ತು ಅದರ ಕಷ್ಟಪಟ್ಟು ದುಡಿಯುವ ಜನರ ಬಗ್ಗೆ ಮಲತಾಯಿ ಧೋರಣೆಯನ್ನು ನಿಲ್ಲಿಸಬೇಕು” ಎಂದರು. ಕೇಂದ್ರ ಸರ್ಕಾರ ಪಂಜಾಬ್ ಬಗ್ಗೆ ಅಸಡ್ಡೆ ಧೋರಣೆಯ ಮತ್ತೊಂದು ಉದಾಹರಣೆಯನ್ನು ಉಲ್ಲೇಖಿಸಿದ ಮಾನ್, “ಕೇಂದ್ರ ಸರ್ಕಾರವು ಆರ್‌ಡಿಎಫ್‌ನ ರಾಜ್ಯದ ಬಾಕಿ ಪಾಲನ್ನು ಬಿಡುಗಡೆ ಮಾಡಿಲ್ಲ. ಇದು 5,500 ಕೋಟಿ ರೂಪಾಯಿ ಮೌಲ್ಯದ್ದಾಗಿದೆ” ಎಂದು ತಿಳಿಸಿದರು.
