ಮರಳು ಮಾಫಿಯಾ ವಿರುದ್ಧ ಟ್ವಿಟ್ಟರ್‌ನಲ್ಲಿ ಬಂದ ದೂರಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.
ಮರಳು ಮಾಫಿಯಾದ ಬಗ್ಗೆ ಕೆನಡಾದಿಂದ ದೂರು ಸಲ್ಲಿಸಿರುವ ಮಂಜು ಎಂಬವರು, ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಕುಬಟೂರು ಬಳಿಯ ಲಕ್ಕವಳ್ಳಿ ಗ್ರಾಮದಲ್ಲಿ ನಡೆದ ಘಟನೆಯ ವಿವರಗಳನ್ನು ಮುಖ್ಯಮಂತ್ರಿಗಳಿಗೆ ತಿಳಿಸಿದ್ದರು.
ನನ್ನ ತಂದೆ ದೈಹಿಕ ವಿಕಲಚೇತನರು ಹಾಗೂ ಘಟನೆಯಿಂದ ನನ್ನ ತಾಯಿ ತೀವ್ರವಾಗಿ ನೊಂದಿದ್ದಾರೆ. ಘಟನೆಯ ಬಗ್ಗೆ ನಿಮ್ಮ ತುರ್ತು ಸಹಾಯ ಕೋರಿ ತೀವ್ರ ಕಳವಳದಿಂದ ನಿಮಗೆ ಪತ್ರ ಬರೆಯುತ್ತಿದ್ದೇನೆ. ಕೆನಡಾದಲ್ಲಿರುವುದರಿಂದ ತಕ್ಷಣಕ್ಕೆ ಬರಲು ನನಗೆ ಸಾಧ್ಯವಾಗುತ್ತಿಲ್ಲ ಎಂದು ಮಂಜು ಎಂಬುವವರು ತಿಳಿಸಿದ್ದರು.
ಅವರ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ದೂರಿನ ಆಧಾರದ ಮೇಲೆ ತಕ್ಷಣವೇ ತನಿಖೆ ಆರಂಭಿಸಿ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ್ದಾರೆ.