14ನೇ ಆಯವ್ಯಯ ಮಂಡಿಸುವ ಮೂಲಕ ಚರಿತ್ರಾರ್ಹ ದಾಖಲೆ ನಿರ್ಮಿಸಲಿರುವ ಸಿಎಂ ಸಿದ್ದರಾಮಯ್ಯ

Date:

Advertisements
ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ, ಹಣಕಾಸು ಸಚಿವರಾಗಿ 1995-96 ರಲ್ಲಿ ಮಂಡಿಸಿದ ಮೊದಲ ಆಯವ್ಯಯದಿಂದ ಹಿಡಿದು ಮೊದಲ ಮುಖ್ಯಮಂತ್ರಿ ಅವಧಿಯ ಕೊನೆಯ ಹಾಗೂ 2018-19ರ ತಮ್ಮ 13ನೇ ಆಯವ್ಯಯದಲ್ಲೂ ಬಸವಣ್ಣ, ಅಂಬೇಡ್ಕರ್, ಲೋಹಿಯಾ ಮತ್ತು ದೇವರಾಜ ಅರಸರ ನೆರಳು ಸ್ಪಷ್ಟವಾಗಿ ದಾಖಲಾಗಿದೆ. ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರು 14ನೇ ದಾಖಲೆಯ ಆಯವ್ಯಯ ಮಂಡಿಸುತ್ತಿರುವ ಚರಿತ್ರಾರ್ಹ ಸಂದರ್ಭದಲ್ಲಿ... ಒಂದು ಹಿನ್ನೋಟ 

2018ರ ಫೆಬ್ರುವರಿಯಲ್ಲಿ 13ನೇ ಆಯವ್ಯಯ ಮಂಡಿಸಿ ರಾಮಕೃಷ್ಣ ಹೆಗಡೆ ಅವರ ದಾಖಲೆ ಸರಿಗಟ್ಟಿದ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ಭವಿಷ್ಯದಲ್ಲಿ ಶುಕ್ರವಾರ (ಜು.7) 14ನೇ ಆಯವ್ಯಯ ಮಂಡಿಸುವ ಮೂಲಕ ಚರಿತ್ರಾರ್ಹ ದಾಖಲೆ ನಿರ್ಮಿಸಲಿದ್ದಾರೆ.

ಐದು ಗ್ಯಾರಂಟಿ ಘೋಷಣೆ ನಡುವೆ ಸಾಕಷ್ಟು ಸವಾಲುಗಳ ಚಕ್ರವ್ಯೂಹವನ್ನು ಮುಖ್ಯಮಂತ್ರಿಗಳು ಭೇದಿಸಿ ತಮ್ಮ ಜೀವಮಾನದ ಕಾಳಜಿಗಳನ್ನು ಹೇಗೆ ಕಾಪಾಡಿಕೊಳ್ಳುತ್ತಾರೆ ಎನ್ನುವ ಕುತೂಹಲಕ್ಕೆ ನಾಳೆ ತೆರೆ ಬೀಳಲಿದೆ.

ಕಳೆದ 25 ದಿನಗಳಿಂದ 14ನೇ ಆಯವ್ಯಯ ಮಂಡನೆಗೆ ಒಂದರ ಹಿಂದೆ ಒಂದು ಸಭೆಗಳನ್ನು ನಡೆಸುತ್ತಾ ಹಣಕಾಸು ಇಲಾಖೆಯನ್ನು ಸಜ್ಜುಗೊಳಿಸುತ್ತಿರುವ ಮುಖ್ಯಮಂತ್ರಿಗಳು ಎಂದಿನಂತೆ ನಾಳೆ ತಮ್ಮ ಬಾಯಲ್ಲಿ ಬಸವಣ್ಣ, ಅಂಬೇಡ್ಕರ್, ಲೋಹಿಯಾ ಹಾಗೂ ದೇವರಾಜ ಅರಸರ ಆಶಯಗಳನ್ನು ನಿರೀಕ್ಷಿಸಬಹುದಾಗಿದೆ.

Advertisements

14ನೇ ದಾಖಲೆಯ ಆಯವ್ಯಯ ಮಂಡಿಸುತ್ತಿರುವ ಚರಿತ್ರಾರ್ಹ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಇಟ್ಟ ದಿಟ್ಟ ಹೆಜ್ಜೆಗಳ ಹಿನ್ನೋಟ ಇಲ್ಲಿದೆ…  

ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ, ಹಣಕಾಸು ಸಚಿವರಾಗಿ 1995-96 ರಲ್ಲಿ ಮಂಡಿಸಿದ ಮೊದಲ ಆಯವ್ಯಯದಿಂದ ಹಿಡಿದು ಮೊದಲ ಮುಖ್ಯಮಂತ್ರಿ ಅವಧಿಯ ಕೊನೆಯ ಹಾಗೂ 2018-19ರ ತಮ್ಮ 13ನೇ ಆಯವ್ಯಯದಲ್ಲೂ ಬಸವಣ್ಣ, ಅಂಬೇಡ್ಕರ್, ಲೋಹಿಯಾ ಮತ್ತು ದೇವರಾಜ ಅರಸರ ನೆರಳು ಸ್ಪಷ್ಟವಾಗಿ ದಾಖಲಾಗಿದೆ.

1995-96 ರಿಂದ 2013-14ರ ವರೆಗೂ ಮಂಡಿಸಿದ ಏಳು ಆಯವ್ಯಯಗಳಲ್ಲಿ ಸಮಾಜವಾದಿ ಆಶಯಗಳು, ಚಿಂತನೆಗಳು, ಕಾಳಜಿಗಳು ಎದ್ದು ಕಂಡರೆ, 2013-14 ರಿಂದ 2018-19ರವರೆಗಿನ ಆರು ಆಯವ್ಯಯಗಳಲ್ಲಿ ಅಹಿಂದ ಚಳವಳಿಯ ತತ್ವ ಮತ್ತು ಆದರ್ಶಗಳು ಸಿದ್ದರಾಮಯ್ಯರ ಕೈ ಹಿಡಿದು ನಡೆಸಿದ್ದಕ್ಕೆ ಸ್ಪಷ್ಟ ಕುರುಹುಗಳು ಮತ್ತು ದಾಖಲೆಗಳಿವೆ.

ಈ ಎರಡು ಹಂತದ ಆಯವ್ಯಯಗಳಲ್ಲಿ ಒಟ್ಟು ಜನಸಂಖ್ಯೆಯ ಶೇ 85 ರಷ್ಟಿರುವ ಅಹಿಂದ ಮತ್ತು ಶೂದ್ರ ಸಮುದಾಯಗಳಿಗೆ ಹಂಚಿಕೆ ಮಾಡುತ್ತಲೇ ಕೃಷಿ, ಕೈಗಾರಿಕೆ, ಸೇವಾ ವಲಯ ಮತ್ತು ಕೌಶಲ್ಯಾಭಿವೃದ್ಧಿಗೂ ಹೆಚ್ಚಿನ ಪ್ರಮಾಣದ ಹಣ ನೀಡಿರುವುದು ಬಸವಣ್ಣನವರ ಸರ್ವರಿಗೂ ಸಮಪಾಲು ಎನ್ನುವ ಆಶಯವನ್ನು ಪಾಲಿಸಿರುವುದಕ್ಕೆ ಸಾಕ್ಷಿ.

ಸಿದ್ದರಾಮಯ್ಯ ಅವರು ಮಂಡಿಸಿದ ಮೊದಲ ಆಯವ್ಯಯದ ಗಾತ್ರ 12,616 ಕೋಟಿ ಆಗಿದ್ದರೆ 13 ನೇ ಆಯವ್ಯಯದ ಗಾತ್ರ 2,09,181 ಕೋಟಿ ಆಗಿತ್ತು. 14 ನೇ ಆಯವ್ಯಯದ ಗಾತ್ರ 3,35,000 ಕೋಟಿ‌ ಆಗಬಹುದು ಎಂದು ಸ್ವತಃ ಮುಖ್ಯಮಂತ್ರಿಗಳೇ ಅಂದಾಜಿಸಿದ್ದಾರೆ.

ಸವಾಲಿನ 14ನೇ ಆಯವ್ಯಯ

ಸಿದ್ದರಾಮಯ್ಯ ನಾಳೆ ಮಂಡಿಸಲಿರುವ 14ನೇ ಆಯವ್ಯಯ ಅತ್ಯಂತ ಸವಾಲಿನಿಂದ ಕೂಡಿದೆ. ಎಲ್ಲ ಜಾತಿ, ಜನವರ್ಗಗಳ ಬದುಕಿನ ಸಂಕಷ್ಟಗಳಿಗೆ ತಕ್ಕ ಮಟ್ಟಿನ ಸಮಾಧಾನ ನೀಡುವ ಐದು ಗ್ಯಾರಂಟಿಗಳ ಪ್ರಭಾವ ದಟ್ಟವಾಗಿರುತ್ತದೆ ಎನ್ನುವುದು ಮುಖ್ಯಮಂತ್ರಿಗಳ ಕಳೆದ ಒಂದು ವಾರದ ಹೇಳಿಕೆಗಳಿಂದ ಗಮನಿಸಬಹುದಾಗಿದೆ.

ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1991ನ್ನು ಸಿದ್ದಪಡಿಸಿ ಜಾರಿಗೊಳಿಸಿದರು. ಹಾಗೆಯೇ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ 2002ರ ಮೂಲಕ ಸರ್ಕಾರದ ವಿತ್ತೀಯ ವಿಧಾನಗಳನ್ನು ಸರಳೀಕರಿಸಿದ ಮತ್ತು ಮಧ್ಯಮಾವಧಿ ವಿತ್ತೀಯ ಯೋಜನೆಯ ಅಂದಾಜುಗಳನ್ನು (MTFP) ವಾರ್ಷಿಕ ಆಯವ್ಯಯದೊಂದಿಗೆ ವಿಧಾನಮಂಡಲದಲ್ಲೇ ಕಡ್ಡಾಯಗೊಳ್ಳುವಂತೆ ಮಾಡಿದ್ದು ಸಿದ್ದರಾಮಯ್ಯ ಅವರ ಆರ್ಥಿಕ ಶಿಸ್ತು ಮತ್ತು ದೂರದೃಷ್ಟಿಗೆ ಹಿಡಿದ ಕನ್ನಡಿ ಎನ್ನುವ ಮೆಚ್ಚುಗೆಯ ಮಾತುಗಳು ಆರ್ಥಿಕ ತಜ್ಞರಿಂದ ವ್ಯಕ್ತವಾಗಿವೆ.

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1991ನ್ನು ಮತ್ತು ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ 2002ರ ಷರತ್ತುಗಳನ್ನು ಸಿದ್ದರಾಮಯ್ಯ ಎಲ್ಲೂ ಉಲ್ಲಂಘಿಸಿಲ್ಲ. ನುಡಿದದ್ದನ್ನೇ ನಡೆದ ಸಿದ್ದರಾಮಯ್ಯನವರ ಆರ್ಥಿಕ ಶಿಸ್ತು, ಜನಪರ ಕಾಳಜಿ ಮೇಳೈಸಿದ ಘೋಷಣೆಗಳನ್ನು ಅನುಷ್ಠಾನಗೊಳಿಸಿದ ಖ್ಯಾತಿ ಅವರಿಗೆ ಇರುವುದರಿಂದ ರಾಜ್ಯದ ಜನತೆ ನಾಳಿನ ಬಜೆಟ್‌ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಸಹಜವಾಗಿಯೇ ಹೊಂದಿದ್ದಾರೆ.

ಇದುವರೆಗಿನ 13 ಆಯವ್ಯಯಗಳನ್ನು ಮಂಡಿಸುವ ಹೊತ್ತಿನಲ್ಲಿ ರಾಜ್ಯಗಳಿಗೆ ತೆರಿಗೆ ವಿಧಿಸುವ ಹಕ್ಕು ಮತ್ತು ಅಧಿಕಾರ ಇತ್ತು. ಈಗ ರಾಜ್ಯಗಳ ಈ ಹಕ್ಕನ್ನು ಕೇಂದ್ರದ ಜಿಎಸ್‌ಟಿ ಕಿತ್ತುಕೊಂಡಿದೆ. ಜತೆಗೆ ಈಗಾಗಲೇ ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡುವುದನ್ನು ಕೇಂದ್ರ ಸರ್ಕಾರ ನಿರಾಕರಿಸುವ ಮೂಲಕ ಸಿದ್ದರಾಮಯ್ಯ ಅವರ ಎದುರಿಗೆ ಬಹಳ ದೊಡ್ಡ ಸವಾಲನ್ನು ಮೋದಿ ಸರ್ಕಾರ ಕೃತಕವಾಗಿ ಸೃಷ್ಟಿಸಿದೆ.

ಜಿಎಸ್‌ಟಿ ಮತ್ತು ಕೇಂದ್ರದ ಅಸಹಕಾರದ ನಡುವೆ ಮುಖ್ಯಮಂತ್ರಿಗಳು ಐದು ಗ್ಯಾರಂಟಿ ಯೋಜನೆಗಳನ್ನು ಈ ಆರ್ಥಿಕ ವರ್ಷದಲ್ಲೇ ಜಾರಿ ಮಾಡುವುದಾಗಿ ಘೋಷಿಸಿದ್ದಾರೆ. ಈ ಎಲ್ಲ ಬಿಕ್ಕಟ್ಟುಗಳ ನಡುವೆ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಲಿರುವ ದಾಖಲೆ ಬಜೆಟ್‌ ಬಗ್ಗೆ ರಾಜ್ಯದ ಕಣ್ಣು ನೆಟ್ಟಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X