ಅಲ್ಪಸಂಖ್ಯಾತರ ಕಾಲೋನಿಗೆ ಕೋಟಿ ಕೊಡುವ ಸಿಎಂ ಅವರೇ, ಹಿಂದೂಗಳ ಕಾಲೋನಿ ಎರಡನೇ ದರ್ಜೆಯದ್ದಾ? ವಿಪಕ್ಷ ನಾಯಕ ಆರ್.ಅಶೋಕ್

Date:

Advertisements

ಅಲ್ಪಸಂಖ್ಯಾತರ ಬಡಾವಣೆಗಳ ಸುಧಾರಣೆಗೆ 11 ಸಾವಿರ ಕೋಟಿ ರೂಪಾಯಿ ನೀಡುವುದಾಗಿ ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಪ್ರಶ್ನಿಸಿರುವ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್, “ಅಲ್ಪಸಂಖ್ಯಾತರ ಕಾಲೋನಿಗೆ ಕೋಟಿ ಕೊಡುವ ಸಿಎಂ ಅವರೇ, ಹಿಂದೂಗಳ ಕಾಲೋನಿ ಎರಡನೇ ದರ್ಜೆಯದ್ದಾ?” ಎಂದು ಕೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಟಿಪ್ಪು ಸುಲ್ತಾನ್ ಮಾಡಿದಂತೆಯೇ ಸಿದ್ದರಾಮಯ್ಯ ಅವರು ಕೂಡ ಹಿಂದೂ-ಮುಸ್ಲಿಮರನ್ನು ಬೇರೆ ಮಾಡುತ್ತಿದ್ದಾರೆ” ಎಂದು ಆಕ್ರೋಶ ಹೊರಹಾಕಿದ್ದಾರೆ.

“ಒಂದೇ ವಾರದಲ್ಲಿ ಪ್ರತಿ ರೈತರಿಗೆ 2 ಸಾವಿರ ರೂ. ನೀಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ವಾಸ್ತವವಾಗಿ ಪ್ರತಿಯೊಬ್ಬರಿಗೆ 30-40 ಸಾವಿರ ರೂ.‌ ಕೊಡಬೇಕಿತ್ತು. ಇವರಿಗೆ ಅಷ್ಟು ಹಣ ನೀಡಲು ಯೋಗ್ಯತೆ ಇಲ್ಲ. ಬೆಳಗಾವಿ ಅಧಿವೇಶನದಲ್ಲಿ ವಿರೋಧ ಬರುತ್ತದೆಂದು 2 ಸಾವಿರ ರೂ. ಘೋಷಿಸಿದ್ದರು. ಅದನ್ನು ಕೊಡುವ ಯೋಗ್ಯತೆ ಇಲ್ಲದವರು, ಮಾನ ಮರ್ಯಾದೆ ಇಲ್ಲದೆ 11 ಸಾವಿರ ಕೋಟಿ ರೂಪಾಯಿಯನ್ನು ಅಲ್ಪಸಂಖ್ಯಾತರ ಬಡಾವಣೆಗೆ ಖರ್ಚು ಮಾಡುತ್ತೇನೆ ಎಂದು ಹೇಳುತ್ತಾರೆ” ಎಂದು ದೂರಿದರು.

Advertisements

“ಹಿಂದೆ ಟಿಪ್ಪು ಸುಲ್ತಾನ್ ಹಿಂದೂ ಮುಸ್ಲಿಮರನ್ನು ಬೇರೆ ಮಾಡಿದಂತೆ ಸಿಎಂ ಸಿದ್ದರಾಮಯ್ಯನವರು ಈಗ ಮಾಡುತ್ತಿದ್ದಾರೆ. ಮುಸ್ಲಿಮರ ಕಾಲೋನಿ ಬೇರೆ, ಹಿಂದೂಗಳ ಪ್ರದೇಶ ಬೇರೆ ಎಂದು ವರ್ಗೀಕರಣ ಮಾಡಿ ಸಂವಿಧಾನಕ್ಕೆ ಅಪಚಾರವಸೆಗಿದ್ದಾರೆ‌. ಹಿಂದೂಗಳ ಕಾಲೋನಿ ಎರಡನೇ ದರ್ಜೆಯದ್ದಾ? ದಲಿತರು ಇರುವ ಕಾಲೋನಿಗಳ ಪಾಡೇನು” ಎಂದು ಪ್ರಶ್ನಿಸಿದರು.

“ಕಾಂಗ್ರೆಸ್ ಸರ್ಕಾರ, ಅಲ್ಪಸಂಖ್ಯಾತರಿಗೆ ಕಾಣಿಕೆ ಮೇಲೆ ಕಾಣಿಕೆ ನೀಡುತ್ತಿದೆ. ಬರಗಾಲದಿಂದ ನೊಂದ ರೈತರಿಗೆ ನೇಣಿನ ಕುಣಿಕೆ ನೀಡಿದೆ. ಸಾಲ ತೀರಿಸಲಾಗದೆ ಕಳೆದ ಏಳು ತಿಂಗಳಲ್ಲಿ 500ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಷ್ಟಿದ್ದರೂ ಅಲ್ಪಸಂಖ್ಯಾತರಿಗೆ ಬಂಪರ್ ಮೇಲೆ ಬಂಪರ್ ಕಾಣಿಕೆ ನೀಡುತ್ತಿದ್ದಾರೆ. ಈ ಹಿಂದೆ 10 ಸಾವಿರ ಕೋಟಿ ರೂಪಾಯಿ ಎಂದು ಘೋಷಣೆ ಮಾಡಿದ್ದರು. ಈಗ 1 ಸಾವಿರ ಕೋಟಿ ರೂ. ಸೇರಿ 11 ಸಾವಿರ ಕೋಟಿ ರೂಪಾಯಿ ಆಗಿದೆ” ಆರ್ ಅಶೋಕ್ ಟೀಕಿಸಿದರು.

“ರಾಜ್ಯದಲ್ಲಿ ಅಭಿವೃದ್ಧಿಗೆ ಸಿಗುವುದೇ 50 ರಿಂದ 60 ಸಾವಿರ ಕೋಟಿ ರೂ. ಉಳಿದಿದ್ದು ವೆಚ್ಚಗಳಿಗೆ ಹೋಗುತ್ತದೆ. ಅದರಲ್ಲಿ 11 ಸಾವಿರ ಕೋಟಿ ರೂಪಾಯಿಯನ್ನು ಅಲ್ಪಸಂಖ್ಯಾತರ ಪ್ರದೇಶಗಳಿಗೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ಲೋಕಸಭಾ ಚುನಾವಣೆಗೆ ಮುಸಲ್ಮಾನರನ್ನು ಓಲೈಕೆ ಮಾಡುವ ಪ್ರವೃತ್ತಿ ಅವರಿಗೆ ಕರಗತವಾಗಿದೆ. ಸರ್ಕಾರ ರೈತರ ತಲೆಯ ಮೇಲೆ ಕಲ್ಲು ಹಾಕಿದೆ” ಎಂದು ದೂರಿದರು.

ಇದನ್ನು ಓದಿದ್ದೀರಾ? ‘ಇಂಡಿಯಾ’ ಒಕ್ಕೂಟದಿಂದ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿಯಾಗುವ ಪರಿಸ್ಥಿತಿ ಇಲ್ಲ: ಎಚ್‌ಡಿ ಕುಮಾರಸ್ವಾಮಿ

“ಕಳೆದ ಏಳು ತಿಂಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಹಿಂದಿನ ಸರ್ಕಾರದ ಯೋಜನೆಗಳ ಅನುದಾನ ಸ್ಥಗಿತಗೊಂಡಿದೆ. ಆದರೂ ಓಲೈಕೆ ರಾಜಕಾರಣ ನಡೆಯುತ್ತಿದೆ. ಪಿಎಫ್ಐ ಮೊದಲಾದ ಸಂಘಟನೆಗಳ ಮೇಲಿದ್ದ 135 ಪ್ರಕರಣಗಳನ್ನು ವಾಪಸ್ ಪಡೆಯಲಾಗಿದೆ. ಕೆಜಿ ಹಳ್ಳಿ, ಡಿಜೆ ಹಳ್ಳಿ ಘಟನೆ ಕುರಿತು ಮುಸ್ಲಿಮ್ ಶಾಸಕರು ಪತ್ರ ಬರೆದಾಗ ಸರ್ಕಾರ ಬಹಳ ಮುತುವರ್ಜಿ ವಹಿಸಿ ಕಡತವನ್ನು ಕಳುಹಿಸಿದೆ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಎಲ್ಲ ಧರ್ಮದವರನ್ನು ಒಂದಾಗಿ ಕರೆದೊಯ್ಯುತ್ತೇನೆ ಎನ್ನುತ್ತಾರೆ. ಈಗ ಅದಕ್ಕೆ ಅಪವಾದವಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ದೂರಿದರು.

ಮಧು ಬಂಗಾರಪ್ಪ ಚೆಕ್ ಬೌನ್ಸ್ ಪ್ರಕರಣ ಉಲ್ಲೇಖಿಸಿದ ಅವರು, “ಶಿಕ್ಷಣ ಸಚಿವರು ಚೆಕ್ ಬೌನ್ಸ್ ಮಾಡಿ ಯಾರಿಗೋ ನಾಮ ಹಾಕಿದ್ದಾರೆ. ಕೋರ್ಟ್ ಆದೇಶ ಬಂದ ನಂತರವೂ ಆ ಸಚಿವರ ರಾಜೀನಾಮೆ ಪಡೆಯದೆ ಮುಖ್ಯಮಂತ್ರಿಯವರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಕೂಡಲೇ ಅವರ ರಾಜೀನಾಮೆ ಪಡೆಯಬೇಕು” ಎಂದು ಆಗ್ರಹಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ರಾಮಮಂದಿರ ಉದ್ಘಾಟನೆಯನ್ನು ಇಷ್ಟು ಅವಸರದಲ್ಲಿ ಮಾಡುವ ಉದ್ದೇಶ ಏನು,,ವೀ,,,ನಾ,, ಲೋಕಸಭಾ ಚುನಾವಣೆ ನಂತರ ಮಾಡಬಹುದಿತ್ತು,,,ಚುನಾವಣೆಗಾಗಿ ಏನು ಬೇಕಾದರೂ ಮಾಡುವಿರಿ,,,, ವರ್ಷವಿಡೀ ಹಿಂದೂ ಮುಸ್ಲಿಂ ಕಿರುಚಾಡುವಿರಲ್ವಾ,, ಚುನಾವಣೆಯಲ್ಲಿ ನಿಮ್ಮ ಸರಕಾರ ತನ್ನ ಜನಪರ ಕೆಲಸವನ್ನು ಹೇಳಿ ಮತ ನೀಡಿ ಎಂದು ಕೇಳುವ ಧೈರ್ಯ ಇಲ್ವಾ,,, ನಿಮ್ಮ ದೃಷ್ಟಿಯಲ್ಲಿ ಹಿಂದೂ ಅಂದ್ರೆ ಯಾರು ಮಾಜಿಗಳೆ,,,ಬಿಎಸ್ ವೈ ಮತ್ತು ರಾಜ್ಯಾಧ್ಯಕ್ಷ ಇರುವ ವೇದಿಕೆಯಲ್ಲಿ ನಾವು ಹಿಂದೂಗಳಲ್ಲ,, ನಾವು ವೀರಶೈವ ಲಿಂಗಾಯತರು ನಮ್ಮದೇ ಸ್ವತಂತ್ರ ಧರ್ಮ ಅಂದಿದ್ದಾರೆ,,,, ಅಲ್ಲದೆ ನಿಮ್ಮದೇ ಪಕ್ಷದ ಯತ್ನಾಳ್ ಕರೋನಾದಲ್ಲಿ ಜನರು ಸಾವಿನ ದವಡೆಯಲ್ಲಿ ಇರುವಾಗ ಸಾವಿರಾರು ಕೋಟಿ ಗುಳುಂ ಮಾಡಿರುವಿರೆಂದು ಬಹಿರಂಗವಾಗಿ ಹೇಳಿದ್ದಾರೆ,, ನೀವು ಅಂದಿನ ಸರ್ಕಾರದಲ್ಲಿ ಮಂತ್ರಿ ಆಗಿದ್ರಿ,,, ಸ್ವಲ್ಪಾದ್ರೂ ನಿಮಗೆ ನೈತಿಕತೆ ಬೇಡವಾ,,,ಸಾವಿರ ಕೋಟಿ ಅಲ್ಪಸಂಖ್ಯಾತರ ಯೋಜನೆ ಆದರೆ ಉಳಿದ ಲಕ್ಷಾಂತರ ಕೋಟಿ ಯಾರಿಗೆ ಇದೆ,, ಹಿಂದೂಗಳಿಗೆ ಅಲ್ವೋ,,, ನಿಮ್ಮ ಪಕ್ಷದಲ್ಲಿ ಹಿಂದೂ ಮುಸ್ಲಿಂ ಬಿಟ್ಟರೆ ಹೇಳಿಕೊಳ್ಳಲು ಬೇರೆ ವಿಷಯಗಳೇ ಇಲ್ವಾ,,, ಇನ್ನೂ ಅದೆಷ್ಟು ದಿನ ಜನರನ್ನು ಮೂರ್ಖರನ್ನಾಗಿ ಮಾಡುವಿರಿ,,, ರಾಮಮಂದಿರ ಕೋಟ್ಯಂತರ ಹಿಂದೂಗಳ ದೇವಸ್ಥಾನ ಆದರೆ,, ಅಲ್ಲಿ ಕೇವಲ ಒಂದು ವರ್ಗದ ಜನರು ಅರ್ಚಕರಾಗುವುದು ಏಕೆ,, ಹಿಂದೂ ಮಂದಿರ ಯಾವ ಹಿಂದೂ ಬೇಕಾದರೂ ಆಗಬಹುದು,, ತಾಕತ್ತಿದ್ದರೆ ಪ್ರಶ್ನೆ ಮಾಡಿ,,,,, ಹೇಳಿಕೆಗಳು ಜವಾಬ್ದಾರಿಯುತವಾಗಿ ಇರಬೇಕು,,ಕೆವಲ ಬಾಸ್ ಗಳನ್ನು ಮೆಚ್ಚಿಸಲು ಆಗಬಾರದು,, ರಾಜ್ಯದ ಮಾನ ಹರಾಜು ಆಗುವುದು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

Download Eedina App Android / iOS

X