ಕಾಂಗ್ರೆಸ್ ಜಾರಿ ತರುವ ಮಹಿಳಾ ಸಬಲೀಕರಣ ಅಂಶಗಳು ಗೊಂದಲದ ಗೂಡಾದರೇ, ಬಿಜೆಪಿ ಜಾರಿಗೆ ತರುವ ಮಹಿಳಾ ಸಬಲೀಕರಣ ಅಂಶಗಳು, ಮಹಿಳೆಯರ ಮುಖದಲ್ಲಿ ನೆಮ್ಮದಿಯ ಮಂದಹಾಸವನ್ನು ಮೂಡಿಸುತ್ತದೆ ಎಂದು ಕಾಂಗ್ರೆಸ್ ಗ್ಯಾರಂಟಿಗಳನ್ನು ಬಿಜೆಪಿ ಟೀಕಿಸಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, “ಒಂದು ಸುಳ್ಳನ್ನು ನಿರಂತರವಾಗಿ ಹೇಳುತ್ತಾ, ಸತ್ಯವನ್ನು ಮರೆಮಾಚಿ, ಆ ಸುಳ್ಳನ್ನೇ ಸತ್ಯ ಎಂದು ನಿರೂಪಿಸುವುದು ಕಾಂಗ್ರೆಸ್ ಪಕ್ಷದ ಸಾಮಾನ್ಯ ಲಕ್ಷಣವಾಗಿದೆ” ಎಂದು ಕಿಡಿಕಾರಿದೆ.
“ಚುನಾವಣಾ ಅವಧಿಯಲ್ಲಿ ಬೆಲೆಯೇರಿಕೆಯ ಬಗ್ಗೆ ರಾಜ್ಯದ ಮಹಿಳೆಯರ ಹಾದಿ ತಪ್ಪಿಸಲು ಯತ್ನಿಸಿದ ಕಾಂಗ್ರೆಸ್, ಅಧಿಕಾರಕ್ಕೇರಿದ ದಿನದಿಂದ, ನಿತ್ಯವೂ ದಿನ ಬಳಕೆ ವಸ್ತುಗಳ ಬೆಲೆ ಏರಿಸುತ್ತಿದೆ” ಎಂದು ಆರೋಪಿಸಿದೆ.
“ಮೊದಲ ಕ್ಯಾಬಿನೆಟ್ನಲ್ಲಿಯೇ ನೀಡಬೇಕಾಗಿದ್ದ “ಗೃಹಲಕ್ಷ್ಮಿ” ಯೋಜನೆಯ ₹2000 ಇನ್ನೂ ಮಹಿಳೆಯರ ಅಕೌಂಟ್ಗಳಿಗೆ ಜಮೆಯಾಗಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ದಿನದಿಂದ ರಾಜ್ಯದಲ್ಲಿ ಉಂಟಾಗಿರುವ ಬೆಲೆಯೇರಿಕೆಯನ್ನು ಗಮನಿಸಿದರೆ, ಇವರು ನೀಡುವ ₹2000 ದಲ್ಲಿ ಬೇಕಾಗುವಷ್ಟು ದಿನಸಿ ಖರೀದಿಸಲು ಸಾಧ್ಯವಿಲ್ಲ” ಎಂದು ದೂರಿದೆ.
“ಮಹಿಳಾ ಸಬಲೀಕರಣದ ಅಂಶವನ್ನೇ ಕಾಂಗ್ರೆಸ್ ಬುಡಮೇಲು ಮಾಡಿದ್ದು, ಸರ್ವರ್ ಹ್ಯಾಕ್ ಆಗಿದೆ ಎಂಬ ಅಸಂಬದ್ಧ ಸುಳ್ಳುಗಳನ್ನು ಹೇಳುತ್ತಾ, ಕಾಲಹರಣ ಮಾಡುತ್ತಿದೆ. ಸ್ವಾತಂತ್ರ್ಯ ಬಂದು 70 ವರ್ಷಗಳ ಕಾಲ ಹೊಗೆಯೊಂದಿಗೆ ಅಡುಗೆ ಮಾಡಿದ್ದ ಮಹಿಳೆಗೆ, ಉಜ್ವಲಾ ಯೋಜನೆಯ ಮೂಲಕ ಹೊಗೆ ಮುಕ್ತ ಅಡುಗೆ ಮನೆ ನೀಡಿದ್ದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ” ಎಂದು ಕೇಂದ್ರ ಸರ್ಕಾರದ ಉಜ್ವಲ ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದೆ.
ಈ ಸುದ್ದಿ ಓದಿದ್ದೀರಾ? ವಿಪಕ್ಷ ನಾಯಕನ ಆಯ್ಕೆ ಆಗದಿರಲು ಸಂತೋಷ್-ಬಿಎಸ್ವೈ ಆಂತರಿಕ ಯುದ್ಧ ಕಾರಣವೆ: ಕಾಂಗ್ರೆಸ್ ಪ್ರಶ್ನೆ
“ದಶಕಗಳ ಕಾಲ ನೀರಿಗಾಗಿ ಹವಣಿಸಿದ್ದ ಮಹಿಳೆಯರಿಗೆ, ಅವರ ಮನೆ ಬಾಗಿಲಿಗೆ ಜಲ ಜೀವನ್ ಮಿಷನ್ ಯೋಜನೆಯ ಮೂಲಕ ನಳದ ಸಂಪರ್ಕ ಒದಗಿಸಿದ್ದು ಮೋದಿಯವರ ಸರ್ಕಾರ” ಎಂದು ಕಾಂಗ್ರೆಸ್ಗೆ ಟ್ಯಾಂಗ್ ನೀಡಿದೆ.