ಕಾಂಗ್ರೆಸ್‌ನವರು ನಪುಂಸಕರು, ಷಂಡರು ಎಂದು ಬಿಜೆಪಿ ಮುಖಂಡ ಎಸ್.ಕೆ.ಬೆಳ್ಳುಬ್ಬಿ ಹೇಳಿಕೆ ನೀಡಿದ್ದಾರೆ.
ಬೀದರ್ ನಗರದ ಗಣೇಶ ಮೈದಾನದಲ್ಲಿ ಗುರುವಾರ ಬಿಜೆಪಿ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
“ರಾಮಾಯಣದಲ್ಲಿ ರಾಮ ವನವಾಸಕ್ಕೆ ಹೊಗಿ ವಾಪಸ್ಸಾಗಿ ಬರುವ ಸಂದರ್ಭದ ಕಥೆಯನ್ನು ಹೇಳುತ್ತ, ಕಾಂಗ್ರೆಸ್ ಪಕ್ಷಕ್ಕೆ ತುಲನೆ ಮಾಡಿದ್ದಾರೆ. ಅರವತ್ತು ವರ್ಷಗಳ ಕಾಲ ದೇಶವಾಳಿದ ಕಾಂಗ್ರೆಸ್‌ನವರಿಗೆ ಇನ್ಮುಂದೆ ಭವಷ್ಯವಿಲ್ಲ. ಕಾಂಗ್ರೆಸ್ನಲ್ಲಿರುವವರು ನಪುಸಂಕರು, ಷಂಡರು” ಎಂದಿದ್ದಾರೆ.
“ಅಖಂಡ ಭಾರತದ ಸ್ವಾತಂತ್ರ್ಯ ಪಡೆಯುತ್ತೇವೆ ಎಂದು ಮಾಜಿ ಪ್ರಧಾನಿ ನೆಹರು ಆಣೆ ಮಾಡಿದ್ರು. ಆದರೆ ಪ್ರಧಾನಿ ಮಂತ್ರಿ ಆಗುವ ಆಸೆಗೋಸ್ಕರ ಭಾರತ ದೇಶವನ್ನು ಮೂರು ಭಾಗವಾಗಿ ಒಡೆದರು. ಈಗ ಅದೇ ಪಕ್ಷದ ರಾಹುಲ್ ಗಾಂಧಿ ಮತ್ತೆ ಭಾರತ್ ಜೋಡೋ ನಡೆಸುತ್ತಿದ್ದಾರೆ. ಆ ಹಕ್ಕು ನಿಮಗಿಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಚುನಾವಣಾ ವಿಷಯವಾದ ’ಸಂವಿಧಾನ’ ಮತ್ತು ಮೋದಿ ಮಾತಿನ ಬೂಟಾಟಿಕೆ
“ಅಖಂಡ ಭಾರತ ಆಗಬೇಕಾದರೆ ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಿ ಆಗಬೇಕು. ಅದಕ್ಕಾಗಿ ಬಿಜೆಪಿಗೆ ಗೆಲ್ಲಿಸುವ ಮೂಲಕ ನಾವು ಮೋದಿಯವರ ಸಂಕಲ್ಪಕ್ಕೆ ಕೈಜೋಡಿಸೋಣ” ಎಂದು ಕರೆ ನೀಡಿದರು.
ಸ್ಥಳದ ಮಹಿಮೆ,,, ಹಾಗೆ ಹೇಳದೇ ಹೋದರೆ ದಿಲ್ಲಿ ಬಾದಶಾ ಕಿವಿ ಹಿಂಡಿ ಹಿಪ್ಪೆ ಹಾಕುವರು,,,ಪಾಪ ಇವರಿಗೂ ವಯಸ್ಸು ಆಯ್ತು ಹೇಳಿದಾಂಗೆ ಕೇಳಲೇಬೇಕು