- ‘ರಾಜ್ಯದ ಇಂಟೆಲಿಜೆನ್ಸ್ ಹೇಗೆ ಕೆಲಸ ಮಾಡುತ್ತಿದೆ ಇಲ್ಲೇ ಗೊತ್ತಾಗುತ್ತದೆ’
- ಕುಟುಂಬ ಸಮೇತ ಹೋಗಿದ್ದು ಯೂರೋಪ್‌ಗೆ ಹೊರತು ಸಿಂಗಾಪುರಕ್ಕಲ್ಲ
ನಮ್ಮ ರಾಜ್ಯದ ಇಂಟೆಲಿಜೆನ್ಸ್ ಹೇಗೆ ಕೆಲಸ ಮಾಡುತ್ತಿದೆ ಎಂದು ಇಲ್ಲೇ ಗೊತ್ತಾಗುತ್ತೆ. ನಾನು ಕುಟುಂಬ ಸಮೇತ ಯೂರೋಪ್ ಪ್ರವಾಸಕ್ಕೆ ಹೋಗಿದ್ದೆವು. ಅದನ್ನೇ ಕೆಲವರು ಸರ್ಕಾರ ಕೆಡವಲು ಸಿಂಗಾಪುರಕ್ಕೆ ಹೋಗಿದ್ದರು ಎಂದು ಬಿಂಬಿಸಿದರೆ ನಾವೇನು ಮಾಡೋಕೆ ಆಗುತ್ತದೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ತಿರುಗೇಟು ನೀಡಿದರು.
ವಿದೇಶಿ ಪ್ರವಾಸ ಮುಗಿಸಿಕೊಂಡು ಬಂದಿರುವ ಕುಮಾರಸ್ವಾಮಿ ಗುರುವಾರ ತಡರಾತ್ರಿ ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ ವೇಳೆ ಸುದ್ದಿಗಾರರ ಜೊತೆ ಮಾತನಾಡಿ, “ಜೆಡಿಎಸ್ ಪಕ್ಷ 19 ಸ್ಥಾನಗಳನ್ನು ಮಾತ್ರ ಗೆದ್ದಿದ್ದರೂ ಅವರಿಗೆ ನಮ್ಮ ಮೇಲೆ ಭಯ ಎಷ್ಟಿದೆ ಅನ್ನೋದು ಇದನ್ನು ನೋಡಿಯೇ ತಿಳಿಯುತ್ತದೆ” ಎಂದು ವ್ಯಂಗ್ಯವಾಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕ್ಯಾಂಪಸ್ಸುಗಳಲ್ಲಿ ಜಾತಿ ನಿಂದನೆ- ಬಿಗಿ ಕಾಯಿದೆ ಜಾರಿಯಾಗಲಿ
“ಕಾಂಗ್ರೆಸ್ ಸರ್ಕಾರವನ್ನು ಕೆಡವಲು ಕೆಲವರು ಸಿಂಗಾಪುರಕ್ಕೆ ಹೋಗಿ ಬಿಜೆಪಿ ಜೊತೆಗೆ ಷಡ್ಯಂತ್ರ ನಡೆಸುತ್ತಿದ್ದಾರೆ” ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆರೋಪ ಮಾಡಿದ್ದರು. ಈ ವಿಚಾರವಾಗಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಮುಂದುವರಿದು, “ನಾವು ಯೂರೋಪ್‌ಗೆ ಕುಟುಂಬ ಸಮೇತ ಹೋಗಿದ್ದೆವು. ಕುಟುಂಬ ಸಮೇತ ವಿದೇಶಗಳಿಗೆ ಹೋದಾಗ ಅಲ್ಲೆಲ್ಲಾ ರಾಜಕೀಯ ಮಾಡಲು ಆಗುತ್ತಾ” ಎಂದು ಸುದ್ದಿಗಾರರನ್ನೇ ಪ್ರಶ್ನಿಸಿದರು.
ಪೆನ್ ಡ್ರೈವ್ ಬಿಡಲ್ಲ
ಸದ್ಯಕ್ಕೆ ಯಾವುದೇ ಪೆನ್ ಡ್ರೈವ್ ಕೊಡಲ್ಲ. ಆಯ್ಕೆ ಮಾಡಿ ಅಧಿಕಾರ ಕೊಟ್ಟ ನಾಡಿನ ಜನತೆಗೆ ಎಲ್ಲಾ ಗೊತ್ತಾಗಬೇಕು. ಜನರಿಗೆ ಈ ವರ್ಷ ಎಲ್ಲ ಗ್ಯಾರಂಟಿ ಕೊಡ್ತಾರಾ, ಸಾವಿರಾರು ಕೋಟಿ ಸಾಲ ಮಾಡಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಹರಿಹಾಯ್ದರು.