ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಯನ್ನು ಖಂಡಿಸಿ, ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ’ ಅಭಿಯಾನವನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.
ಈ ಬಗ್ಗೆ ಕಾಂಗ್ರೆಸ್ ನಾಯಕ ಪವನ್ ಖೇರಾ ಮಾಹಿತಿ ನೀಡಿದ್ದು, ಅಭಿಯಾನದಡಿಯಲ್ಲಿ ಪಕ್ಷದ ಮುಖಂಡರು ಪ್ರತಿ ಜಿಲ್ಲೆಯಲ್ಲೂ ‘ಚೌಪಾಲ್’ಗಳನ್ನು ಆಯೋಜಿಸಿ ಬಿಜೆಪಿ-ಆರ್‌ಎಸ್‌ಎಸ್ ದಶಕಗಳಿಂದ ಅಂಬೇಡ್ಕರ್ ಅವರನ್ನು ಹೇಗೆ ಅವಮಾನಿಸುತ್ತಿದೆ ಮತ್ತು ಸಂವಿಧಾನವನ್ನು ಯಾವೆಲ್ಲ ರೀತಿಯಲ್ಲಿ ಅವಮಾನಿಸುತ್ತಿದೆ ಎಂಬುದನ್ನು ಜನರಿಗೆ ತಿಳಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಗೃಹಸಚಿವ ಅಮಿತ್ ಶಾ ವಿರುದ್ಧ ಜ.9ರಂದು ʼವಿಜಯನಗರ ಬಂದ್’ಗೆ ಕರೆ
ಜನವರಿ 3ರಂದು ಅಭಿಯಾನವು ಪ್ರಾರಂಭವಾಗಿದ್ದು ಜನವರಿ 26ರವರೆಗೆ ನಡೆಯಲಿದೆ. ಅಂಬೇಡ್ಕರ್ ಅವರ ಜನ್ಮಸ್ಥಳವಾದ ಮಧ್ಯಪ್ರದೇಶದ ಮ್ಹೋವ್‌ನಲ್ಲಿ ಗಣರಾಜ್ಯೋತ್ಸವ ಆಚರಣೆ ಮೂಲಕ ಈ ಅಭಿಯಾನ ಕೊನೆಯಾಗಲಿದೆ ಎಂದು ಖೇರಾ ಹೇಳಿದರು.
“ಅಂಬೇಡ್ಕರ್ ಅವರ ಪರಂಪರೆ ಮತ್ತು ಮೌಲ್ಯಗಳನ್ನು ಕಾಪಾಡಲು 2025ರ ಜನವರಿ 26ರಿಂದ 2026ರ ಜನವರಿ 26ರವರೆಗೆ ‘ಸಂವಿಧಾನ ಬಚಾವೋ ರಾಷ್ಟ್ರೀಯ ಪಾದಯಾತ್ರೆ’ (ಸಂವಿಧಾನ ಉಳಿಸಿ ಆಂದೋಲನ) ದೇಶದಾದ್ಯಂತ ನಡೆಸಲಾಗುತ್ತದೆ” ಎಂದು ಕೂಡಾ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.
On 17 December, Home Minister Amit Shah made an objectionable comment on Baba Saheb Ambedkar in Parliament.
— Asma (@asmatasleem13) January 4, 2025
We hoped that the Home Minister would apologize and PM Modi would intervene in this matter. But PM Modi supported the Home Minister and became a partner in insulting… pic.twitter.com/7QHZ06RLko
ಇದನ್ನು ಓದಿದ್ದೀರಾ? ಸತ್ಯ ಶೋಧ | ಅಂಬೇಡ್ಕರ್ RSS ಶಾಖೆಗೆ ಹೋಗಿದ್ದರು ಎಂಬುದು ಶುದ್ಧ ಸುಳ್ಳು
ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಗೃಹ ಸಚಿವ ಅಮಿತ್ ಶಾ ಅವರನ್ನು ವಜಾಗೊಳಿಸಬೇಕು ಎಂಬ ನಮ್ಮ ಬೇಡಿಕೆಯನ್ನು ನಾವು ಮತ್ತೆ ಮತ್ತೆ ಪುನರುಚ್ಚರಿಸುತ್ತೇವೆ ಎಂದು ಹೇಳಿದರು.
ದೇಶದ ಇತಿಹಾಸದಲ್ಲಿ ಅಳಿಸಲಾಗದ ಛಾಪು ಮೂಡಿಸಿದ ಮಹಾತ್ಮಾ ಗಾಂಧಿ, ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಜವಾಹರಲಾಲ್ ನೆಹರು ಅವರಂತಹ ರಾಷ್ಟ್ರೀಯ ನಾಯಕರನ್ನು ರಾಕ್ಷಸೀಕರಣ ಮಾಡುವ ಎಲ್ಲಾ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ಆರೋಪಿಸಿದ್ದಾರೆ.
