ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಅನ್ನೋದು ನನಗೂ ಗೊತ್ತು. ನಾನು ಕಾಂಗ್ರೆಸ್ ಶಾಸಕನಾದರೂ ನಿಜ ಹೇಳಬೇಕು, ಕೇಂದ್ರದಲ್ಲಿ ಬಿಜೆಪಿ ಬರುವ ವಿಚಾರ ಮೊದಲೇ ಗೊತ್ತಿರುವ ಸಂಗತಿ ಎಂದು ಕೋಲಾರ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಅಚ್ಚರಿಯ ಮಾತುಗಳನ್ನಾಡಿದ್ದಾರೆ.
ಕೋಲಾರದಲ್ಲಿ ಸೋಮವಾರ ಸುದ್ದಿಗಾರರ ಎಕ್ಸಿಟ್ ಪೋಲ್ ಬಗ್ಗೆ ಪ್ರತಿಕ್ರಿಯಿಸಿ, “ಈ ಬಾರಿ ಬಿಜೆಪಿ ಬರಲಿ. ಮುಂದಿನ ಚುನಾವಣೆ ನಮ್ಮ ಗುರಿ. ಅದಕ್ಕೆ ಬೇಕಾದ ಪೂರ್ವ ತಯಾರಿ ನಡೆಯುತ್ತಿದೆ” ಎಂದರು.
“ರಾಜ್ಯದಲ್ಲಿ 50-50 ಫಲಿತಾಂಶ ಬರಲಿದೆ. ಕೋಲಾರದಲ್ಲಿ 29 ಸಾವಿರ ಮತಗಳಿಂದ ಕಾಂಗ್ರೆಸ್ ಗೆಲ್ಲದೆ. ರಮೇಶ್ ಕುಮಾರ್ಗೆ ವಿಧಾನ ಪರಿಷತ್ ಟಿಕೆಟ್ ಕೇಳಿದ್ದೆವು. ಅದು ಸಿಗಲಿಲ್ಲ. ಮುಂದೆ ಒಳ್ಳೆ ಅವಕಾಶ ಸಿಗಬಹುದು. ರಾಜ್ಯದಲ್ಲಿ ಸಚಿವ ಸ್ಥಾನ ಬದಲಾವಣೆಯಾದರೆ ಕೋಲಾರಕ್ಕೂ ಸಚಿವ ಸ್ಥಾನ ಸಿಗಲಿದೆ” ಎಂದು ತಿಳಿಸಿದರು.
“ಚುನಾವಣೆ ನೀತಿ ಸಂಹಿತೆ ಮುಗಿದ ಕೂಡಲೇ ಅಭಿವೃದ್ದಿ ಕೆಲಸಗಳು ಆರಂಭವಾಗಲಿದೆ. ರಿಂಗ್ ರೋಡ್‌ಗೆ ಡಿಪಿಆರ್ ಆಗಿದೆ. ಮೂರು ತಿಂಗಳ ಒಳಗೆ ಟಿಂಡರ್ ಪ್ರಕ್ರಿಯೆ ಸಹ ಮುಗಿಯಲಿದೆ. ಎಪಿಎಂಸಿ ಜಾಗ ಕೂಡಲೇ ಆಗಲಿದೆ. ಚಲುವನಹಳ್ಳಿ ಜಾಗ ನೋಡಿದ್ದು, ಅದೇ ಪೈನಲ್ ಆಗಲಿದೆ” ಎಂದರು.
