- ಪಿಎಂ ಕೇರ್ಸ್ ಎಂಬ ಗೋಲ್ಮಾಲ್ ನಿಧಿಗೆ ಚೀನಾ ಕಂಪೆನಿಗಳಿಂದ ಕೋಟಿ ಕೋಟಿ ಹಣ ಸಂಗ್ರಹ
- ಪಟೇಲರ ಪ್ರತಿಮೆ ನಿರ್ಮಾಣದ ಹೊಣೆ ಚೀನಾ ಕಂಪೆನಿಗೆ ನೀಡಿದ್ದು ಕೂಡ ಕೇಂದ್ರ ಸರ್ಕಾರವೇ
ಚೀನಾ ಕಂಪೆನಿಗಳಿಂದ ದೇಣಿಗೆ ಸ್ವೀಕರಿಸುವುದು ಅಪರಾಧವೆಂದಾದರೆ ಮೊದಲು ಅಪರಾಧಿ ಸ್ಥಾನದಲ್ಲಿ ಮೋದಿಯೇ ನಿಲ್ಲುತ್ತಾರೆ. ಪಿಎಂ ಕೇರ್ಸ್ ಎಂಬ ಗೋಲ್ಮಾಲ್ ನಿಧಿಗೆ ಚೀನಾ ಕಂಪೆನಿಗಳಿಂದ ಕೋಟಿ ಕೋಟಿ ಹಣ ಸಂಗ್ರಹಿಸಲಾಗಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಈ ಕುರಿತು ಎಕ್ಸ್‌ನಲ್ಲಿ ಬಿಜೆಪಿ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್, “ಚೀನಾ ಕಂಪೆನಿಗಳಿಂದ ದೇಣಿಗೆ ಪಡೆಯಲಾಗಿದೆ ಎಂದು ಆರೋಪಿಸಿ ನ್ಯೂಸ್ ಕ್ಲಿಕ್ ಮಾಧ್ಯಮ ಸಂಸ್ಥೆಯ ಮೇಲೆ ದಾಳಿ ಮಾಡಲಾಗಿದೆ. ಸರ್ದಾರ್ ಪಟೇಲರ ಪ್ರತಿಮೆ ನಿರ್ಮಾಣದ ಹೊಣೆಯನ್ನು ಚೀನಾ ಕಂಪೆನಿಗೆ ನೀಡಿದ್ದು ಕೂಡ ಕೇಂದ್ರ ಸರ್ಕಾರವೇ. ಮೋದಿಯವರಿಗೆ ದಮ್ಮು ತಾಕತ್ತಿದ್ದರೆ ಭಾರತದ ಮಾಧ್ಯಮ ಸಂಸ್ಥೆಗಳ ಮೇಲೆ ದಾಳಿ ಮಾಡುವ ಬದಲು ಭಾರತವನ್ನು ಆಕ್ರಮಿಸಿರುವ ಚೀನಾ ಮೇಲೆ ದಾಳಿ ಮಾಡಲಿ. ಕನಿಷ್ಠ ಪಕ್ಷ ‘ಚೀನಾ’ ಎಂದು ಹೆಸರು ಹೇಳಿ ವಾಗ್ದಾಳಿಯನ್ನಾದರೂ ಮಾಡಲಿ!” ಎಂದು ಲೇವಡಿ ಮಾಡಿದೆ.
“ಇತ್ತೀಚೆಗಷ್ಟೇ ಜಿ20 ಸಮಾವೇಶದ ಸಂದರ್ಭದಲ್ಲಿ ಅಮೆರಿಕಾ ಅಧ್ಯಕ್ಷರು ಭಾರತದ ಮಾಧ್ಯಮಗಳ ಸ್ವಾತಂತ್ರ್ಯವು ಅಪಾಯದಲ್ಲಿದೆ ಎಂದು ವಿದೇಶದಲ್ಲಿ ಕಳವಳ ವ್ಯಕ್ತಪಡಿಸಿದ್ದರು. ಮೋದಿಗೆ ಮಾಧ್ಯಮ ಸ್ವಾತಂತ್ರ್ಯವನ್ನು ರಕ್ಷಿಸುವಂತೆ ಬುದ್ದಿ ಹೇಳಿದ್ದೇನೆ ಎಂದಿದ್ದರು. ಈ ಅವಮಾನದ ಬೆನ್ನಲ್ಲೇ ಮೋದಿ ಸರ್ಕಾರ ನ್ಯೂಸ್ ಕ್ಲಿಕ್ ಸಂಸ್ಥೆಯ ಮೇಲೆ ದಾಳಿ ಮಾಡಿದೆ. ಭಾರತದ ಸತ್ಯ ಹೇಳುವ ಮಾಧ್ಯಮಗಳ ಕತ್ತು ಹಿಸುಕಲಾಗುತ್ತಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಮೋದಿ ಭಜನೆಯ ‘ಗೋದಿ ಮೀಡಿಯಾ’ಗಳಿಗೆ ಮಾತ್ರ ಇಲ್ಲಿ ಸ್ವತಂತ್ರವಿದೆ” ಎಂದು ಕಟುವಾಗಿ ಟೀಕಿಸಿದೆ.
ಚೀನಾ ಕಂಪೆನಿಗಳಿಂದ ದೇಣಿಗೆ ಪಡೆಯಲಾಗಿದೆ ಎಂದು ಆರೋಪಿಸಿ ನ್ಯೂಸ್ ಕ್ಲಿಕ್ ಮಾಧ್ಯಮ ಸಂಸ್ಥೆಯ ಮೇಲೆ ದಾಳಿ ಮಾಡಲಾಗಿದೆ.
ಚೀನಾ ಕಂಪೆನಿಗಳಿಂದ ದೇಣಿಗೆ ಸ್ವೀಕರಿಸುವುದು ಅಪರಾಧವೆಂದಾದರೆ ಮೊದಲು ಅಪರಾಧಿ ಸ್ಥಾನದಲ್ಲಿ ಮೋದಿಯೇ ನಿಲ್ಲುತ್ತಾರೆ.
ಪಿಎಂ ಕೇರ್ಸ್ ಎಂಬ ಗೋಲ್ಮಾಲ್ ನಿಧಿಗೆ ಚೀನಾ ಕಂಪೆನಿಗಳಿಂದ ಕೋಟಿ ಕೋಟಿ ಹಣ ಸಂಗ್ರಹಿಸಲಾಗಿದೆ.… pic.twitter.com/C1YLLyghTc
— Karnataka Congress (@INCKarnataka) October 7, 2023
“ಅದಾನಿ ಕಂಪೆನಿಯಲ್ಲಿ ಚೀನಾದವರ ಹೂಡಿಕೆ ಇದೆ, ‘ಅದಾನಿ ಚೀನಿ ಬಾಯಿ ಬಾಯಿ’ ಎನ್ನುವಂತಿದೆ. ನರೇಂದ್ರ ಮೋದಿ ಅವರೇ, ಅದಾನಿ ಕಂಪೆನಿ ಮೇಲೆ ಇಡಿ ದಾಳಿ ಮಾಡುವುದು ಯಾವಾಗ? ನಿಮ್ಮ ಗೆಳೆಯನ ಹಿತಕ್ಕಾಗಿ ಚೀನಾದ ಅತಿಕ್ರಮಣ ನೋಡಿ ಸುಮ್ಮನಿದ್ದೀರಾ? ಭಾರತದ ಭೂಮಿಯನ್ನು ಬಲಿ ಕೊಡುತ್ತಿದ್ದೀರಾ” ಎಂದು ಪ್ರಶ್ನಿಸಿದೆ.
Bjp