ಹನ್ನೊಂದು ವರ್ಷದಲ್ಲಿ ಒಮ್ಮೆಯೂ ಪತ್ರಿಕಾಗೋಷ್ಠಿ ನಡೆಸದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಹನ್ನೊಂದು ವರ್ಷದ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೈಜವಾದ ಪತ್ರಿಕಾಗೋಷ್ಠಿ ನಡೆಸಲು ಸಾಧ್ಯವಾಗಿಲ್ಲ, ಮಾಧ್ಯಮ ಸಂದರ್ಶನಗಳೂ ಸ್ಕ್ರಿಪ್ಟ್ ಇಲ್ಲದೆ ನಡೆಸಿಲ್ಲ ಎಂದು ಕಾಂಗ್ರೆಸ್ ಟೀಕಿಸಿದೆ.
ಈ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ಪ್ರಪಂಚದಾದ್ಯಂತದ ನಾಯಕರು ಕಾಲಕಾಲಕ್ಕೆ ಮುಕ್ತವಾಗಿ ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಾರೆ. ಆದರೆ ನಮ್ಮಲ್ಲಿ 11 ವರ್ಷಗಳಿಂದ ಯಾವುದೇ ಪತ್ರಿಕಾಗೋಷ್ಠಿಗಳು ನಡೆದಿಲ್ಲ” ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನು ಓದಿದ್ದೀರಾ? ‘ನಾನು ಜೈವಿಕವಾಗಿ ಜನಿಸಿಲ್ಲ, ಪರಮಾತ್ಮನೇ ನನ್ನನ್ನು ಕಳುಹಿಸಿದ್ದು’ ಎಂದ ಪ್ರಧಾನಿ ಮೋದಿ!
“ನರೇಂದ್ರ ಮೋದಿ ಕಳೆದ ವರ್ಷ ಚುನಾವಣಾ ಪ್ರಚಾರದ ವೇಳೆ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ್ದರು. ಆದರೆ ಅದರ ನಿರ್ಮಾಣ, ನಿರ್ದೇಶನ, ಸ್ಕ್ರಿಪ್ಟ್ ಮಾಡಿಕೊಂಡಿದ್ದರು. ಆ ಪೈಕಿ ಒಂದರಲ್ಲಿ ತಾನು ಜೈವಿಕವಾಗಿ ಜನಿಸಿಲ್ಲ ಎಂದು ಹೇಳಿಕೊಂಡು ಸುದ್ದಿಯಾದರು. ಪ್ರಧಾನಿ ಮೋದಿ ಯಾವುದೇ ಪೂರ್ವ ನಿರ್ಧಾರಿತ ಪತ್ರಿಕಾಗೋಷ್ಠಿಯನ್ನು ನಡೆಸುವ ಧೈರ್ಯವನ್ನು ಹೊಂದಿಲ್ಲ” ಎಂದು ಕಾಂಗ್ರೆಸ್ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
Every head of government in the world has a freewheeling press conference now and then. Ours has had none for 11 years.
— Jairam Ramesh (@Jairam_Ramesh) June 8, 2025
Mr. Narendra Modi produced, directed, and scripted his media interactions last year during the election campaign – during one of which he famously claimed to…
“ಇದು ಅವರ ಎಲ್ಲಾ ಪೂರ್ವವರ್ತಿಗಳಿಗಿಂತ ಸಂಪೂರ್ಣವಾಗಿ ಭಿನ್ನ. ಪ್ರಧಾನಿ ಮೋದಿ ಅವರ ಅತಿ ನೆಚ್ಚಿನ ದ್ವೇಷಿಯು ಪ್ರತಿ ಎರಡು ತಿಂಗಳಿಗೊಮ್ಮೆ ಸ್ವಯಂಪ್ರೇರಿತ ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಿದ್ದರು. ಅಲ್ಲಿ ಅವರಿಗೆ ನಿರ್ದಯವಾಗಿ ಪ್ರಶ್ನಿಸಲಾಗುತ್ತಿತ್ತು. ಆದರೆ ಅವರು ತಾಳ್ಮೆಯಿಂದ ಉತ್ತರಿಸುತ್ತಿದ್ದರು. ಇದು ನಮ್ಮ ಪ್ರಜಾಪ್ರಭುತ್ವ ಅಡಿಪಾಯವನ್ನು ಸ್ಥಾಪಿಸುವ ಒಂದು ಮಾರ್ಗ” ಎಂದು ರಮೇಶ್ ಅವರು ಪರೋಕ್ಷವಾಗಿ ನಿರಂತರ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್ ಅವರ ಉಲ್ಲೇಖ ಮಾಡಿದ್ದಾರೆ.
2014ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಮೋದಿ ಮಾಧ್ಯಮಗೋಷ್ಠಿ ನಡೆಸಿಲ್ಲ. ನಿರಂತರ ವಾಗ್ದಾಳಿ ಬಳಿಕ ಸಂದರ್ಶನಗಳನ್ನು ನಡೆಸಲಾಗಿದೆ. ಆದರೆ ಅವೆಲ್ಲವೂ ಸ್ಕ್ರಿಪ್ಟ್ ಆಗಿತ್ತು, ಪೂರ್ವಯೋಜಿತವಾಗಿತ್ತು ಎಂಬುದು ವಿಡಿಯೋದಲ್ಲೇ ಸ್ಪಷ್ಟವಾಗಿ ಕಂಡುಬಂದಿದೆ.
