ಮಧ್ಯಪ್ರದೇಶ ಬಿಜೆಪಿ ಸರ್ಕಾರ ನಿದ್ದೆಗೆ ಜಾರಿದೆ; ಕಾಂಗ್ರೆಸ್‌ನಿಂದ ‘ಕುಂಭಕರ್ಣ’ ಪ್ರತಿಭಟನೆ

Date:

Advertisements

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆಯನ್ನು ನಡೆಸಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಪ್ರತಿಭಟನೆಯ ವಿಡಿಯೋ ಹರಿದಾಡುತ್ತಿದೆ. ಮಲಗಿರುವ ಬಿಜೆಪಿ ಸರ್ಕಾರವನ್ನು ಎಬ್ಬಿಸಲು ಕಾಂಗ್ರೆಸ್‌ ‘ಕುಂಭಕರ್ಣ’ ಪ್ರತಿಭಟನೆಯನ್ನು ನಡೆಸಿದೆ.

ಶಾಸಕರು ಹಗರಣಗಳು ಮತ್ತು ಭ್ರಷ್ಟಾಚಾರಗಳನ್ನು ಮಾಡಿದರೂ ಕೂಡಾ ಸರ್ಕಾರ ಮಾತ್ರ ಕುಂಭಕರ್ಣನಂತೆ ಮಲಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಹಾಗೆಯೇ ಕುಂಭಕರ್ಣನಂತೆ ವೇಷ ಧರಿಸಿ ನಿದ್ದೆಗೆ ಜಾರಿರುವಂತೆ ನಟಿಸಿ ಪ್ರತಿಭಟನೆ ನಡೆಸಿದ್ದಾರೆ.

ಇದನ್ನು ಓದಿದ್ದೀರಾ? ಅಪರಾಧ ಹೆಚ್ಚಳ | ತನ್ನ ತಟ್ಟೆಯಲ್ಲಿ ಹೆಗ್ಗಣ, ಕಾಂಗ್ರೆಸ್ ತಟ್ಟೆಯ ನೊಣದತ್ತ ಬಿಜೆಪಿ ಬೊಟ್ಟು!

Advertisements

ಹಾಗೆಯೇ ಮಲಗಿರುವ ಸರ್ಕಾರವನ್ನು ಪ್ರತಿನಿಧಿಸುವ ಕುಂಭಕರ್ಣ ವೇಷಾಧಾರಿಯನ್ನು ಎಬ್ಬಿಸಲು ಕಾಂಗ್ರೆಸ್ ನಾಯಕರು ಪೀಪಿ ಊದಿ ಪ್ರತಿಭಟಿಸಿದ್ದಾರೆ. ವಿಪಕ್ಷ ನಾಯಕ ಉಮಾಂಗ್ ಸಿಂಘಾರ್ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆದಿದೆ. ಶಾಸಕ ದಿನೇಶ್ ಜೈನ್ ಕುಂಭಕರ್ಣನಂತೆ ವೇಷ ಧರಿಸಿದ್ದರು.

“ದೇಶದಲ್ಲಿ ನಿರಂತರವಾಗಿ ಹಗರಣ ನಡೆಯುತ್ತಿದ್ದರೂ ಕೂಡಾ ಬಿಜೆಪಿ ಸರ್ಕಾರವು ಕುಂಭಕರ್ಣನಂತೆ ಮಲಗಿದೆ. ಆದ್ದರಿಂದ ನಾವು ಈ ರೀತಿಯಾಗಿ ವಿನೂತನ ಪ್ರತಿಭಟನೆ ನಡೆಸಿದ್ದೇವೆ. ರಾಜ್ಯದಲ್ಲಿ ನರ್ಸಿಂಗ್ ಹಗರಣ, ಸಾರಿಗೆ ಹಗರಣ, ಪತ್ವಾರಿ ಹಗರಣ ನಡೆದಿದೆ. ಯುವಕರಿಗೆ ಉದ್ಯೋಗ ಲಭಿಸುತ್ತಿಲ್ಲ. ರೈತರಿಗೆ ಗೊಬ್ಬರುಗಳು ಲಭ್ಯವಾಗುತ್ತಿಲ್ಲ. ಆದರೆ ಸರ್ಕಾರ ಇದರ ವಿರುದ್ಧವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಒಪ್ಪುತ್ತಿಲ್ಲ. ಭ್ರಷ್ಟಾಚಾರದ ವಿರುದ್ಧ ಕ್ರಮವೂ ಕೈಗೊಳ್ಳುತ್ತಿಲ್ಲ” ಎಂದು ಸಿಂಘಾರ್ ಆರೋಪಿಸಿದ್ದಾರೆ.

ಆದರೆ ಇದಕ್ಕೆ ತಿರುಗೇಟು ನೀಡಿದ ಕ್ರೀಡಾ ಸಚಿವ ವಿಶ್ವಾಶ್ ಸಾರಂಗ್, “ನಾವು ಎಲ್ಲಾ ವಿಚಾರದ ಬಗ್ಗೆ ಚರ್ಚೆ ನಡೆಸಲು ಸಿದ್ಧವಿದ್ದೇವೆ. ಆದರೆ ಕಾಂಗ್ರೆಸ್ ಪ್ರತಿಭಟನೆ ಮಾಡಿ ಬಜೆಟ್ ಅಧಿವೇಶನದ ವೇಳೆ ಗದ್ದಲ ಸೃಷ್ಟಿಸುತ್ತಿದೆ. ಬರೀ ಫೋಟೋಗಾಗಿ ಈ ರೀತಿ ಮಾಡುತ್ತಿದೆ” ಎಂದು ಆರೋಪಿಸಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

Download Eedina App Android / iOS

X