ದಲಿತ ಚಳವಳಿಯ ಹಿರಿಯಣ್ಣ ಪ್ರೊ. ಬಿ ಕೃಷ್ಣಪ್ಪ

Date:

Advertisements
ಇಂದು (ಜೂನ್‌ 09) ದಲಿತ ಚಳವಳಿಯ ನಾಯಕ ಪ್ರೊ. ಬಿ ಕೃಷ್ಣಪ್ಪ ಅವರ ಜನ್ಮದಿನ. ರಾಜ್ಯದಲ್ಲಿ ದಲಿತ ಧ್ವನಿಗೂ ವೇದಿಕೆ ಬೇಕು, ಆ ಧ್ವನಿ ವಿಧಾನಸೌಧಕ್ಕೆ ಕೇಳಬೇಕೆಂದು ಶ್ರಮಿಸಿದವರು ಬಿ ಕೃಷ್ಣಪ್ಪ. ಅವರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯ

ಕರ್ನಾಟಕದ ದಲಿತ ಚಳವಳಿಯು ಹುಟ್ಟಿಗೆ ಕಾರಣರಾದವರಲ್ಲಿ ಮೊದಲಿಗರಾದ ಪ್ರೊ. ಬಿ ಕೃಷ್ಣಪ್ಪ ಇಡೀ ದೇಶದಲ್ಲೆ ವಿಶಿಷ್ಟವಾದ ದಲಿತ ಚಳವಳಿಯನ್ನು ಮುನ್ನಡೆಸಿದ ನಾಯಕ. ಕರ್ನಾಟಕದ ದಲಿತ ಚಳವಳಿ ಕೇವಲ ತಳಸಮುದಾಯಗಳ ಮೇಲೆ ನಡೆಯುತ್ತಿದ್ದ ದೌರ್ಜನ್ಯಗಳ ವಿರುದ್ಧದ ಹೋರಾಟಕ್ಕೆ ಅಷ್ಟೇ ಸೀಮಿತವಾಗದೆ ರಾಜ್ಯದ ಅನೇಕ ಕಡೆ ನಡೆಸಿದ ಭೂ ಹೋರಾಟಗಳಿಂದ ಸಾವಿರಾರು ಎಕರೆ ಭೂಮಿ ದಲಿತರಿಗೆ ಸಿಕ್ಕಿದೆ.

ಇವತ್ತಿಗೂ ಎಷ್ಟೊ ಹಳ್ಳಿಗಳಲ್ಲಿ ದಲಿತರು ಸತ್ತರೆ ಹೂಳುವುದಕ್ಕೆ ಅಂಗೈ ಅಗಲದ ಜಾಗವಿಲ್ಲದ ಪರಿಸ್ಥಿತಿ ಇರುವಾಗ ದಲಿತ ಚಳವಳಿ ಎಪ್ಪತ್ತು ಎಂಬತ್ತರ ದಶಕದಲ್ಲಿ ಭೂ ಹೋರಾಟಗಳನ್ನು ನಡೆಸಿ ಸಾವಿರಾರು ಎಕರೆ ಭೂಮಿಯನ್ನು ದಲಿತರಿಗೆ ಕೊಡಿಸಿತು. ಅಲ್ಲದೆ ‘ಭೂ ಪರಭಾರೆ ಕಾಯ್ದೆ’ ಜಾರಿಗೆ ಕಾರಣವಾಯಿತು. ಈ ಹೋರಾಟಗಳ ನೇತೃತ್ವ ಬಿ ಕೃಷ್ಣಪ್ಪ ಅವರದು.

ಚಂದ್ರಗುತ್ತಿ ಬೆತ್ತಲೆ ಸೇವೆಯ ನಿಷೇಧಕ್ಕಾಗಿ ಬಿಕೆ ರೂಪಿಸಿದ ಹೋರಾಟದ ಹಿಂದೆ ಸಾಂಪ್ರದಾಯಿಕ ಸಮಾಜವನ್ನು ಎದರು ಹಾಕಿಕೊಂಡು ನಡೆಸಿದ ಹೋರಾಟದ ಕುರಿತು ಅಧ್ಯಯನ ಮಾಡಿದರೆ ದಲಿತ ಚಳವಳಿಯ ಚಿಕಿತ್ಸಕ ಗುಣ ಅರ್ಥವಾಗುತ್ತದೆ.

Advertisements

ದಲಿತ ಚಳವಳಿ ಎಡಪಂಥೀಯ ಚಿಂತನೆ ಮತ್ತು ಲೋಹಿಯಾ ಸಮಾಜವಾದದ ಪ್ರಭಾವದಿಂದ ಸಂಪೂರ್ಣವಾಗಿ ಬಿಡಿಸಿಕೊಳ್ಳಲು ಸಾಧ್ಯವಾಗದಿದ್ದರೂ ಬಿಕೆಯವರ ಕಾರಣಕ್ಕೆ ಅದಕ್ಕೆ ಅಂಬೇಡ್ಕರ್‌ವಾದಿ ದೃಷ್ಟಿಕೋನ ದಕ್ಕಿತ್ತು.

ಈ ಲೇಖನ ಓದಿದ್ದೀರಾ?: ಗ್ಯಾರಂಟಿ ಗಲಾಟೆಯಲ್ಲಿ ಕಾಣೆಯಾಯಿತು ಒಕ್ಕೂಟ ಸರ್ಕಾರ ಮಾಡುತ್ತಿರುವ ಅನ್ಯಾಯದ ಚರ್ಚೆ

ಸಾಹಿತ್ಯ, ಸಂಸ್ಕೃತಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಅಂಬೇಡ್ಕರ್‌ವಾದಿ ನೋಟಕ್ರಮದಿಂದ ಗ್ರಹಿಸಿ ಬಿಕೆಯವರು ಎತ್ತಿದ ಗಂಭೀರ ಪ್ರಶ್ನೆಗಳು ಅವತ್ತಿಗಿಂತಲೂ ಇವತ್ತಿಗೆ ಹೆಚ್ಚು ಪ್ರಸ್ತುತವಾಗುತ್ತಿರುವುದು ಅವರ ಚಿಂತನೆಗೆ ಇರುವ ಮಹತ್ವವನ್ನು ತೋರಿಸುತ್ತದೆ.

ಬಿ.ಕೃಷ್ಣಪ್ಪನವರನ್ನು ನೆನಪು ಮಾಡಿಕೊಳ್ಳವುದರ ಜೊತೆಗೆ ಭೂ ಹೋರಾಟಗಳು ಮತ್ತು ಚಂದ್ರಗುತ್ತಿ ಪ್ರಕರಣದಂತಹ ಹೋರಾಟಗಳಿಗೆ ಬಿಕೆಯವರು ನೀಡಿದ ಕೊಡುಗೆ, ಸಾಹಿತ್ಯ ವಿಮರ್ಶೆಯ ಬರಹಗಳ ಮೂಲಕ ಎತ್ತಿದ ಪ್ರಶ್ನೆಗಳ ಅಧ್ಯಯನ ಮಾಡಬೇಕಿದೆ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X