ದಾವಣಗೆರೆ ಲೋಕಸಭಾ ಕ್ಷೇತ್ರ | ಬೆಣ್ಣೆನಗರಿಯಲ್ಲಿ ತ್ರಿಕೋನ ಸ್ಪರ್ಧೆ ಸಾಧ್ಯತೆ? ಮತದಾರರ ಒಲವು ಯಾರತ್ತ?

Date:

Advertisements

ಬೆಣ್ಣೆನಗರಿ ಎಂದೇ ಕರೆಯಲ್ಪಡುವ ಮಧ್ಯ ಕರ್ನಾಟಕದ ದಾವಣಗೆರೆಯ ಲೋಕಸಭಾ ಕ್ಷೇತ್ರದ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಬರೋಬ್ಬರಿ ಮೂವತ್ತು ಅಭ್ಯರ್ಥಿಗಳು ಕಣದಲ್ಲಿದ್ದು ಗೆಲುವಿಗಾಗಿ ಹಣಾಹಣಿ ನಡೆಸಲಿದ್ದಾರೆ. ಪ್ರತಿ ಚುನಾವಣೆಯಲ್ಲೂ ನಡೆಯುತ್ತಿದ್ದ ರಾಷ್ಟ್ರೀಯ ಪಕ್ಷಗಳ ನಡುವಿನ ನೇರಾ ಹಣಾಹಣಿ ಈ ಬಾರಿ ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆ  ಕಣದಲ್ಲಿ ಕುತೂಹಲಕಾರಿ ತ್ರಿಕೋನ ಸ್ಪರ್ಧೆಗೆ ತಿರುಗಿ ಕೊಂಡಿರುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ.

ಜಿಲ್ಲೆಯ ಕಾಂಗ್ರೆಸ್ ನ ಅನಿವಾರ್ಯ ಕುಟುಂಬ ಶಾಮನೂರು ಮತ್ತು ಬಿಜೆಪಿಯ ಮನೆತನ ಆಡಳಿತದ ಸಂಸದ ಸಿದ್ದೇಶ್ವರ, ಈ ಎರಡು ಪ್ರಭಲ ಕುಟುಂಬಗಳಿಗೆ ಪಕ್ಷೇತರ ಅಭ್ಯರ್ಥಿಯೊಬ್ಬರು ಸ್ವಾಭಿಮಾನದ ಪ್ರಬಲ ಸ್ಪರ್ಧೆ ನೀಡಿರುವುದು ವಿಶೇಷ. ಎಲ್ಲಾ ಚುನಾವಣೆಗಳಲ್ಲೂ ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸುವುದು ಸಾಮಾನ್ಯ,  ಆದರೆ ಈ ಬಾರಿ ದಾವಣಗೆರೆ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಸಿಗದೇ ವಂಚಿತಗೊಂಡು ಸ್ವಾಭಿಮಾನಿ ಅಭ್ಯರ್ಥಿಯಾಗಿ ಬಂಡಾಯವಾಗಿ ಸ್ಪರ್ಧಿಸಿರುವ ಜಿ ಬಿ ವಿನಯ್ ಕುಮಾರ್ ಸ್ಪರ್ಧೆ ಗಮನ ಸೆಳೆಯುತ್ತದೆ. ಕಾರಣ ಕ್ಷೇತ್ರದಲ್ಲಿ ಇವರಿಗೆ ಸಿಕ್ಕಿರುವ ಅಪೂರ್ವ ಜನಬೆಂಬಲ ಎಂದೇ ಹೇಳಲಾಗುತ್ತಿದೆ.

ರಾಹುಲ್ ಗಾಂಧಿಯ ಜೋಡೋ ಭಾರತ್ ಯಾತ್ರೆಯಲ್ಲಿ ಅವರೊಂದಿಗೆ ಹಲವು ದಿನಗಳ ಕಾಲ ಹೆಜ್ಜೆ ಹಾಕಿದ್ದ ವಿನಯ್ ಕುಮಾರ್ ಅವರು ವಿಧಾನಸಭೆ ಚುನಾವಣೆಯ ನಂತರ ಕಾಂಗ್ರೆಸ್‌ನ ಲೋಕಸಭಾ ಟಿಕೆಟ್ ಆಕಾಂಕ್ಷಿಯಾಗಿ ಸಕ್ರಿಯವಾಗಿ ದಾವಣಗೆರೆ ಜಿಲ್ಲೆಯಾದ್ಯಂತ ಗ್ರಾಮಗಳಿಗೆ ಪಾದಯಾತ್ರೆ ಕೈಗೊಂಡು ಸುಮಾರು 630ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪಾದಯಾತ್ರೆ ಮಾಡಿ ಜನರನ್ನ ಸಂಪರ್ಕಿಸಿ ಅವರ ಸಮಸ್ಯೆಗಳನ್ನು ಅರಿಯುವ ಕೆಲಸ ಮಾಡಿದ್ದರು. ಇದೇ ಅವರ  ಜನಬೆಂಬಲ, ಜನಪ್ರೀತಿಗೆ ಮತ್ತು ಬಂಡಾಯ ಸ್ಪರ್ಧೆಗೆ ಕಾರಣ ಎನ್ನಬಹುದು ಎಂದೇ ಹೇಳುತ್ತಾರೆ  ಜಿಲ್ಲೆಯ ರಾಜಕೀಯ ವಿಶ್ಲೇಷಕರು.

Advertisements

ದಾವಣಗೆರೆ ಲೋಕಸಭಾ ಕ್ಷೇತ್ರದ ಕೈ ಟಿಕೆಟ್ ಯಾರಿಗೆ ಸಿಗಲಿದೆ ಎಂದು ಕೂತೂಹಲ ಕೆರಳಿಸಿತ್ತು. ಶಾಮನೂರು ಕುಟುಂಬ ಸೊಸೆ ಸಚಿವ ಮಲ್ಲಿಕಾರ್ಜುನ್ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಮುದಾಯಕ್ಕೆ ಸೇರಿದ ಅವರ ಆಪ್ತ ವಿನಯ್ ಕುಮಾರ್ ನಡುವೆ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ದೊರಕಿದ್ದು ಕಳೆದ ವರ್ಷದಿಂದ ಜಿಲ್ಲೆಯಲ್ಲಿ ಪಾದಯಾತ್ರೆ ಮಾಡಿ ಟಿಕೆಟ್ ಆಕಾಂಕ್ಷಿಯಾಗಿದ್ದ ವಿನಯ್ ಕುಮಾರ್ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಜೊತೆಯಲ್ಲಿ ಜಿಲ್ಲಾ ಕಾಂಗ್ರೆಸ್ ನಲ್ಲಿ ಯಾರೊಬ್ಬರೂ ಕೂಡ ಅವರಿಗೆ ಟಿಕೆಟ್ ತಪ್ಪಿದ ನಂತರ ಸೌಜನ್ಯಕ್ಕೂ ಕೂಡ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡದೇ, ಕಾಂಗ್ರೆಸ್ ಔಟ್ರೀಚ್ ವಿಭಾಗದ ರಾಷ್ಟ್ರೀಯ ಹುದ್ದೆಯಲ್ಲಿರುವ ಅವರಿಗೆ ಕಾಂಗ್ರೆಸ್ ಸದಸ್ಯತ್ವವನ್ನೇ ಪಡೆದಿಲ್ಲ, ಅವರು ಹೊರಗಿನವರು ಎನ್ನುವಂತೆ ಮಾತನಾಡಿದ್ದು ಇನ್ನಷ್ಟು ಕೆರಳಿಸಿ ಸ್ಪರ್ಧೆಗೆ ಕಾರಣವಾಗಿದೆ ಎನ್ನುತ್ತಾರೆ.

ಕಾಂಗ್ರೆಸ್ ಪಕ್ಷದಲ್ಲಿ ಸಾಮಾಜಿಕ ನ್ಯಾಯ ಪರಿಪಾಲನೆ ಆಗಿಲ್ಲ, ಎಲ್ಲಾ ಒಂದೇ ಕುಟುಂಬದ ಕೈಯಲ್ಲಿ ಇರುವಂತೆ ನೋಡಿಕೊಳ್ಳಲಾಗುತ್ತಿದೆ. ಕಾರ್ಯಕರ್ತರು ಕೇವಲ ಬಾವುಟ ಹಿಡಿಯಲು, ಬಂಟಿಂಗ್ಸ್ ಕಟ್ಟಲು ಇರಬೇಕೇ, ಹೀಗಾ‌ದರೆ ಕಾರ್ಯಕರ್ತರ ಪಾಡೇನು,  ಪಕ್ಷಪಾತ ಆಡಳಿತದಿಂದ ಜನ ರೋಸಿ ಹೋಗಿದ್ದಾರೆ ಎಂದು ಆರೋಪಿಸಿರುವ ಅವರು ಜಿಲ್ಲೆಯ ಬಿಜೆಪಿ ಪರಿಸ್ಥಿತಿ ಕೂಡ ಹೊರತಾಗಿಲ್ಲ, ಅಲ್ಲೂ ಕೂಡ ಇದೇ ರೀತಿ ಇದ್ದು ಅವರೂ ಬದಲಾವಣೆ ಬಯಸಿದ್ದಾರೆ, ತಳಸಮುದಾಯ ಗಳಿಗೆ ಅಧಿಕಾರ, ಸಾಮಾಜಿಕ ನ್ಯಾಯ ಸಿಗಬೇಕು ಎಂದು ವಿನಯ್ ಕುಮಾರ್ ಕಣಕ್ಕೆ  ಇಳಿದಿದ್ದು ವಂಶ, ಬಂಡವಾಳಶಾಹಿ ರಾಜಕಾರಣಕ್ಕೆ ಸೆಡ್ಡು ಹೊಡೆಯುವ ಮೂಲಕ ಸ್ಪರ್ಧೆ ಮಾಡಿದ್ದಾರೆ.

ವಿನಯ್ ಕುಮಾರ್ ಸ್ಪರ್ಧೆ ಕಾಂಗ್ರೆಸ್ ಗೆ ಅಥವಾ ಬಿಜೆಪಿಗೆ ಮುಳುವಾಗಲಿದೆಯೇ ನೋಡಬೇಕಿದೆ. ಅವರು  ಯಾವ ಮತ ಸೆಳೆಯಲಿದ್ದಾರೆ ? ಎಷ್ಟು ಮತ ಪಡೆಯಬಹುದು ನೋಡಬೇಕಿದೆ. ಕಾಂಗ್ರೆಸ್ ನ ಸಾಂಪ್ರದಾಯಿಕ ಅಹಿಂದ ಮತಬುಟ್ಟಿಗೆ ಕೈಹಾಕಿರುವ ವಿನಯ್‌ಗೆ,  ಬಿಜೆಪಿ ಯ ಬಹುತೇಕ ಅಸಮಾಧಾನದ ಮತಗಳೂ ವಿನಯ್ ಗೆ ಬರಬಹುದು ಎನ್ನುವ ಲೆಕ್ಕಾಚಾರವಿದೆ. ಹೀಗಾದಲ್ಲಿ ಬಹುತೇಕ ತ್ರಿಕೋನ ಸ್ಪರ್ಧೆ ಸಾಧ್ಯತೆ ಇದ್ದು, ಗೆಲುವಿನ ಹಾವು ಏಣಿ ಆಟ ನೆಡೆಯುವುದು ಅಂತಿಮ ಫಲಿತಾಂಶದವರೆಗೆ ದಾವಣಗೆರೆಯ ಮತದಾರರ ಪಕ್ಷಗಳ ಮುಖಂಡರ, ಕಾರ್ಯಕರ್ತರ ಎದೆಬಡಿತ ಏರುಪೇರಾಗುವುದು ನಿಶ್ಚಳವೆನಿಸಲಿದೆ. ಹೀಗಾಗಿ ಎರಡೂ ಪಕ್ಷಗಳಿಗೂ ಇಂದು ಎಚ್ಚರಿಕೆಯ ಗಂಟೆ, ವಿನಯ್ ಕುಮಾರ್ ಪಡೆಯುವ ಮತಗಳು ಎರಡೂ ಪಕ್ಷಗಳ ವಂಶ ರಾಜಕಾರಣ ವಿರೋಧಿಸುವ ಮತಗಳು ಎಂದೇ ವಿಶ್ಲೇಷಣೆಯಾಗುತ್ತಿದೆ.

ಕಾಂಗ್ರೆಸ್ ನಲ್ಲಿ ಮಾವ ಶಾಸಕರು. ಪತಿ ಶಾಸಕರು ಹಾಗೂ ಸಚಿವರು. ಅವರ ಮನೆತನದವರೇ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿಯಲ್ಲಿ ಜಿ. ಎಂ. ಸಿದ್ದೇಶ್ವರ ಕುಟುಂಬವೇ ಕಳೆದ 30 ವರ್ಷಗಳಿಂದ ಲೋಕಸಭೆಗೆ ಟಿಕೆಟ್ ಪಡೆದು ಸ್ಪರ್ಧೆ ಮಾಡುತ್ತಿದೆ. ಹಾಗಾದರೆ ಪಕ್ಷಕ್ಕಾಗಿ ದುಡಿದ, ಜೀವನವನ್ನೇ ಮುಡುಪಾಗಿಟ್ಟವರ ಕಥೆ ಏನು? ನೂರಾರು ಸಾವಿರಾರು ಕಾರ್ಯಕರ್ತರು ಪಕ್ಷಕ್ಕಾಗಿ ಜೀವನ ಪಣಕ್ಕಿಟ್ಟು ದುಡಿಯುತ್ತಾರೆ. ಪಕ್ಷಗಳಲ್ಲಿ ಯಾವ ರೀತಿ ಕಾರ್ಯಕರ್ತರನ್ನು ನೆಡಸಿಕೊಳ್ಳಲಾಗುತ್ತಿದೆ, ಮತಗಳಿಕೆಗಷ್ಟೇ ಬಳಕೆ ಮಾಡಿಕೊಳ್ಳಲಾಗಿದೆ. ಸಾಮಾಜಿಕ ನ್ಯಾಯ ಎರಡೂ ಪಕ್ಷಗಳಲ್ಲಿ ಪಾಲನೆಯಾಗಿಲ್ಲ, ಉಳ್ಳವರಿಗೆ ಮಾತ್ರ ಮಣೆ ಹಾಕಲಾಗುತ್ತಿದೆ ಎಂದು ಆರೋಪಿಸಿ ಸ್ಪರ್ಧೆ ಮಾಡಿರುವ ಅಭ್ಯರ್ಥಿಗೆ ಮತ ಹಾಕಿ, ತಕ್ಕ ಪಾಠ ಕಲಿಸಲು ಮತದಾರರು ನಿರ್ಧರಿಸುವರೇ ಎಂದು ಕಾಯ್ದು ನೋಡಬೇಕಾಗಿದೆ.

ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಯಾವೊಬ್ಬ ರಾಜಕಾರಣಿಯು ಗ್ರಾಮೀಣ ಪ್ರದೇಶಗಳತ್ತ ತಿರುಗಿ ನೋಡದ ಪರಿಸ್ಥಿತಿ ಇರುವ ಸಂದರ್ಭದಲ್ಲಿ ಕಳೆದ ವರ್ಷದಿಂದಲೂ ಹಳ್ಳಿಗಳಿಗೆ ಪಾದಯಾತ್ರೆ ಮಾಡಿ ಜನರ ವಿಶ್ವಾಸ ಗಳಿಸಿದ್ದ ಅಭ್ಯರ್ಥಿ ಒಬ್ಬರು, ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ. ಯಾವ ರೀತಿ ಜನಪ್ರತಿನಿಧಿ ಕೆಲಸ ಮಾಡಬೇಕು ಎಂದು ತೋರಿಸಿಕೊಡುತ್ತೇನೆ. ಜಿಲ್ಲೆಯ ಯಾವುದೇ ಪ್ರತಿನಿಧಿ ಗ್ರಾಮಗಳಿಗೆ ಪಾದಯಾತ್ರೆ ಮಾಡಿಲ್ಲ, ನಾನು ನಿಮ್ಮ ಮನೆಗಳಿಗೆ ಬಂದಿದ್ದೇನೆ. ಸ್ವಾಭಿಮಾನಿಗೆ ಅವಕಾಶ ಕೊಡಿ. ಆಮೇಲೆ ನೀವೇ ಹೇಳುತ್ತೀರಾ ಎಂದು ಭಾವನಾತ್ಮಕವಾಗಿ ಮತ ಸೆಳೆಯುವ ಪ್ರಯತ್ನ ಆಗುತ್ತಿವೆ.‌

ಯುವಕರಿಗೆ ಅವಕಾಶ ಸಿಗಬೇಕು. ರಾಜಕಾರಣದಲ್ಲಿ ಹೊಸ ಗಾಳಿ ಬೀಸುವಂತಾಗಬೇಕು. ಈ ಚುನಾವಣೆಯಿಂದ ಈ ದಿಕ್ಕು ಬದಲಾಗಲಿದೆಯೇ ನೋಡಬೇಕಿದೆ. ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ನೆಡೆಯುವ ಸಾದ್ಯತೆ ಗೋಚರವಾಗಿದ್ದು, ಯಾರೇ ಗೆದ್ದರೂ ಪಡೆಯುವ ಮತಗಳು, ಗೆಲುವಿನ ಅಂತರ ವಂಶಾಡಳಿತದ, ಬಂಡವಾಳಶಾಹಿ ರಾಜಕಾರಣಕ್ಕೆ ಈ ಚುನಾವಣೆ ತಕ್ಕಪಾಠ ಕಲಿಸಲಿದೆ ಎನ್ನಬಹುದು.

ದಾವಣಗೆರೆ ಮತದಾರರು ಪ್ರಬುದ್ಧರಿದ್ದು ಈ ಬಾರಿ ಅಚ್ಚರಿಯ ಆಯ್ಕೆಗೆ ಕಾರಣವಾಗಬಹುದೇ ಎಂದು ಕಾದು ನೋಡಬೇಕಿದೆ.

ವಿನಾಯಕ್
ವಿನಾಯಕ್ ಚಿಕ್ಕಂದವಾಡಿ
+ posts

ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ವಿನಾಯಕ್ ಚಿಕ್ಕಂದವಾಡಿ
ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

ಬಿಹಾರದಲ್ಲಿ ಒಂದು ಮತವನ್ನೂ ಕದಿಯಲು ನಾವು ಬಿಡಲ್ಲ: ರಾಹುಲ್ ಗಾಂಧಿ

ಮತಗಳನ್ನು ಕದಿಯಲು ಚುನಾವಣಾ ಆಯೋಗ ಮತ್ತು ಬಿಜೆಪಿ ಪಾಲುದಾರಿಕೆ ಹೊಂದಿದೆ ಎಂದು...

Download Eedina App Android / iOS

X