ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ವಿಧಾನಸಭೆ ಚುನಾವಣೆಯ ಪ್ರಚಾರ ನಡೆಸುತ್ತಿದ್ದ ವೇಳೆ ಕೇಜ್ರಿವಾಲ್ ಕಾರಿನ ಮೇಲೆ ದಾಳಿ ನಡೆದಿದೆ. “ಬಿಜೆಪಿಯ ಗೂಂಡಾಗಳೇ ಈ ದಾಳಿಯನ್ನು ನಡೆಸಿದ್ದಾರೆ” ಎಂದು ಎಎಪಿ ಆರೋಪಿಸಿದೆ.
“ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ಜೊತೆಗಿದ್ದ ಬಿಜೆಪಿ ಬೆಂಬಲಿಗರು ಕೋಲು ಮತ್ತು ಕಲ್ಲುಗಳ ಮೂಲಕ ಕೇಜ್ರಿವಾಲ್ ಅವರ ಮೇಲೆ ದಾಳಿ ನಡೆಸಿದ್ದಾರೆ” ಎಂದು ಎಎಪಿ ದೂರಿದೆ. ಇನ್ನು ಕೇಜ್ರಿವಾಲ್ ಅವರಿಗೆ ಜನರು ಕಪ್ಪು ಭಾವುಟವನ್ನು ಪ್ರದರ್ಶಿಸುತ್ತಿರುವುದು ಕೂಡಾ ವಿಡಿಯೋದಲ್ಲಿ ಕಾಣಬಹುದಾಗಿದೆ.
ಇದನ್ನು ಓದಿದ್ದೀರಾ? ದೆಹಲಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಜೈಲುಹಕ್ಕಿ ತಾಹಿರ್ ಹುಸೈನ್ ಯಾರು ಗೊತ್ತೇ?
ಹೊಸ ದೆಹಲಿ ವಿಧಾನಸಭೆ ಕ್ಷೇತ್ರದಲ್ಲಿ ಎಎಪಿಯಿಂದ ಅರವಿಂದ್ ಕೇಜ್ರಿವಾಲ್ ಕಣದಲ್ಲಿದ್ದರೆ, ಬಿಜೆಪಿಯಿಂದ ಪರ್ವೇಶ್ ವರ್ಮಾ ಮತ್ತು ಕಾಂಗ್ರೆಸ್‌ನಿಂದ ಸಂದೀಪ್ ದೀಕ್ಷಿತ್ ಸ್ಪರ್ಧೆಗಿಳಿದಿದ್ದಾರೆ.
हार के डर से बौखलाई BJP, अपने गुंडों से करवाया अरविंद केजरीवाल जी पर हमला‼️
— AAP (@AamAadmiParty) January 18, 2025
BJP प्रत्याशी प्रवेश वर्मा के गुंडों ने चुनाव प्रचार करते वक्त अरविंद केजरीवाल जी पर ईंट-पत्थर से हमला कर उन्हें चोट पहुंचाने की कोशिश की ताकि वो प्रचार ना कर सकें।
बीजेपी वालों, तुम्हारे इस कायराना… pic.twitter.com/QcanvqX8fB
ವಿಡಿಯೋವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಎಎಪಿ, “ಸೋಲಿನ ಭಯದಲ್ಲಿರುವ ಬಿಜೆಪಿ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ದಾಳಿ ನಡೆಸಲು ತನ್ನ ಗೂಂಡಾಗಳನ್ನು ಕಳಿಸಿದೆ. ಚುನಾವಣಾ ಪ್ರಚಾರಕ್ಕೆ ಅಡ್ಡಿ ಉಂಟು ಮಾಡುವ ಪ್ರಯತ್ನ ಇದಾಗಿದೆ. ಈ ಪುಕ್ಕಲುತನದ ದಾಳಿಗೆ ಕೇಜ್ರಿವಾಲ್ ಅವರು ಬೆದರುವುದಿಲ್ಲ. ದೆಹಲಿ ಜನರು ಇದಕ್ಕೆ ತಕ್ಕ ಉತ್ತರವನ್ನು ನೀಡಲಿದ್ದಾರೆ” ಎಂದು ಹೇಳಿದೆ.
ಇದನ್ನು ಓದಿದ್ದೀರಾ? ದೆಹಲಿ ಚುನಾವಣೆ | ಬಿಜೆಪಿ ಪ್ರಣಾಳಿಕೆ ಬಿಡುಗಡೆ: ಮಹಿಳೆಯರಿಗೆ ಮಾಸಿಕ 2,500 ರೂ. ಸಹಾಯಧನ, 500 ರೂ.ಗೆ ಎಲ್‌ಪಿಜಿ ಭರವಸೆ
ಇನ್ನು ಬಿಜೆಪಿ ಮೇಲೆ ಮಾಡಿದ ಆರೋಪವನ್ನು ಅಭ್ಯರ್ಥಿ ಪರ್ವೇಶ್ ವರ್ಮಾ ಅಲ್ಲಗಳೆದಿದ್ದಾರೆ. “ಜನರು ಪ್ರಶ್ನೆ ಕೇಳುತ್ತಿದ್ದಾಗ, ಕೇಜ್ರಿವಾಲ್ ಕಾರು ಇಬ್ಬರು ಯುವಕರ ಮೇಲೆ ಹರಿದಿದೆ. ಇಬ್ಬರನ್ನೂ ಕೂಡಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಜನರ ಜೀವಕ್ಕೆ ಮೌಲ್ಯವೇ ಇಲ್ಲದ್ದಂತೆ ಆಗಿದೆ. ನಾನು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದೇನೆ” ಎಂದು ಆರೋಪಿಸಿದ್ದಾರೆ.
ದೆಹಲಿಯಲ್ಲಿ ಫೆಬ್ರವರಿ 5ರಂದು ಚುನಾವಣೆ ನಡೆಯಲಿದ್ದು, ಫೆಬ್ರವರಿ 8ರಂದು ಚುನಾವಣಾ ಫಲಿತಾಂಶ ಹೊರಬರಲಿದೆ.
