ಪ್ರತಿ ಬಾರಿಯೂ ಚುನಾವಣಾ ಸಮೀಕ್ಷೆಯ ನಿಖರ ಫಲಿತಾಂಶ ನೀಡುವ ‘ಆಕ್ಸಿಸ್ ಮೈ ಇಂಡಿಯಾ’ದ ದೆಹಲಿ ಚುನಾವಣೋತ್ತರ ಸಮೀಕ್ಷಾ ವರದಿ ಬಿಡುಗಡೆಯಾಗಿದೆ. ಸಂಸ್ಥೆಯ ಮುಖ್ಯಸ್ಥ ಪ್ರದೀಪ್ ಗುಪ್ತಾ ಅವರು ಸಮೀಕ್ಷಾ ವರದಿಯನ್ನು ಪ್ರಕಟಿಸಿದ್ದು, ದೆಹಲಿಯಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ.
ಬುಧವಾರ ಹಲವಾರು ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಿದ್ದವು. ಅವುಗಳ ಪೈಕಿ, ದೈನಿಕ್ ಭಾಸ್ಕರದ ಸಮೀಕ್ಷೆ ಮಾತ್ರವೇ ದೆಹಲಿಯಲ್ಲಿ ಎಎಪಿ ಗೆಲುತ್ತದೆ. ಈ ಬಾರಿ ಎಎಪಿ, 43-47 ಸ್ಥಾನಗಳನ್ನು ಪಡೆಯುತ್ತದೆ ಎಂದು ಹೇಳಿತ್ತು. ಉಳಿದ ಎಲ್ಲ, ಅಂದರೆ, ಮ್ಯಾಟ್ರಿಕ್ಸ್, ಜೆವಿಸಿ ಪೋಲ್, ಪೀಪಲ್ಸ್ ಪಲ್ಸ್, ಪಿ-ಮಾರ್‌ಕ್ಯೂ, ಪೀಪಲ್ಸ್ ಇನ್‌ಸೈಟ್‌ನ ಸಮೀಕ್ಷೆಗಳು ಬಿಜೆಪಿ ಅಧಿಕಾರಕ್ಕೇರಲಿದೆ ಎಂದು ಹೇಳಿದ್ದವು.
ಆದರೆ, ಆಕ್ಸಿಸ್ ಮೈ ಇಂಡಿಯಾ ಬುಧವಾರ ತನ್ನ ಸಮೀಕ್ಷಾ ಅಂಕಿಅಂಶವನ್ನು ಪ್ರಕಟಿಸಿರಲಿಲ್ಲ. ಇದೀಗ, ಗುರುವಾರ ಫಲಿತಾಂಶವನ್ನು ಪ್ರಕಟಿಸಿದೆ. ಫೆಬ್ರವರಿ 5ರಂದು ನಡೆದ ದೆಹಲಿ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ 45-55 ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ ಎಂದು ಹೇಳಿದೆ. ಎಎಪಿ ಕೇವಲ 15-25 ಸ್ಥಾನಗಳನ್ನು ಮಾತ್ರವೇ ಗೆಲ್ಲಬಹುದು ಎಂದು ಹೇಳಿದೆ. ಇನ್ನು, ಕಾಂಗ್ರೆಸ್ ಹೆಚ್ಚೆಂದರೆ ಒಂದು ಸ್ಥಾನವನ್ನು ಗೆಲ್ಲಬಹುದು ಎಂದು ಹೇಳಿದೆ.
ಆಕ್ಸಿಸ್ ಮೈ ಇಂಡಿಯಾದ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ, ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸ್ಪರ್ಧಿಸಿರುವ ನವದೆಹಲಿ ವಿಧಾನಸಭಾ ಕ್ಷೇತ್ರವಿರುವ ನವದೆಹಲಿ ಜಿಲ್ಲೆಯ 10 ಸ್ಥಾನಗಳಲ್ಲಿ, ಬಿಜೆಪಿ ಏಳು ಸ್ಥಾನಗಳನ್ನು ಗೆಲ್ಲಲಿದೆ. ಎಎಪಿ ಮೂರು ಸ್ಥಾನಗಳನ್ನು ಮಾತ್ರ ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಿದೆ.
ಇನ್ನು, ಈಶಾನ್ಯ ದೆಹಲಿ ಜಿಲ್ಲೆಯ ಬಿಜೆಪಿ 10 ಸ್ಥಾನಗಳಲ್ಲಿ ಬಿಜೆಪಿ ಆರು ಮತ್ತು ಎಎಪಿ ನಾಲ್ಕು ಸ್ಥಾನಗಳನ್ನು ಗೆಲ್ಲಬಹುದು ಆರು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಆಗ್ನೇಯ ದೆಹಲಿ ಜಿಲ್ಲೆಯಲ್ಲಿ, ಬಿಜೆಪಿ ಮತ್ತು ಎಎಪಿ ತಲಾ ಐದು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.
ಪ್ರಕಟವಾದ ಬಹುತೇಕ ಎಲ್ಲ ಸಮೀಕ್ಷೆಗಳು, ಬಿಜೆಪಿ 27 ವರ್ಷಗಳ ಬಳಿಕ, ದೆಹಲಿಯಲ್ಲಿ ಮತ್ತೆ ಅಧಿಕಾರಕ್ಕೆ ಮರಳಿದೆ. ರಾಷ್ಟ್ರ ರಾಜಧಾನಿಯ ಗದ್ದುಗೆ ಬಿಜೆಪಿ ಪಾಲಾಗಲಿದೆ ಎಂದು ಹೇಳುತ್ತಿವೆ.