ಯೂತ್‌ ಕಾಂಗ್ರೆಸ್‌ನಿಂದ ‘ಮೋದಿ ಕಾ‌ ಅಸ್ಲಿ ಪರಿವಾರ್’ ಪೋಸ್ಟರ್‌: ದಿಲ್ಲಿ ಪೊಲೀಸರಿಂದ ಎಫ್‌ಐಆರ್‌

Date:

ಯೂತ್ ಕಾಂಗ್ರೆಸ್‌ನ ಹೆಸರಿನಡಿ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರದೊಂದಿಗೆ ಅವ್ಯವಹಾರ ಪ್ರಕರಣಗಳಲ್ಲಿ ಸಿಲುಕಿ ದೇಶ ತೊರೆದ ಉದ್ಯಮಿಗಳಾದ ನೀರವ್‌ ಮೋದಿ, ವಿಜಯ್‌ ಮಲ್ಯ ಮುಂತಾದವರ ಚಿತ್ರಗಳಿರುವ ಪೋಸ್ಟರ್‌ಗಳು ದಿಲ್ಲಿಯ ಹಲವೆಡೆ ಕಂಡುಬಂದ ಬಳಿಕ ದಿಲ್ಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿರುವುದಾಗಿ ವರದಿಯಾಗಿದೆ.

- Advertisement -

ಈ ವಿವಾದಾತ್ಮಕ ಪೋಸ್ಟರ್‌ಗಳಲ್ಲಿ ನರೇಂದ್ರ ಮೋದಿ ಮತ್ತು ದೇಶ ತೊರೆದ ಕೆಲವು ಉದ್ಯಮಿಗಳು, ಲೈಂಗಿಕ ದೌರ್ಜನ್ಯದ ಬಿಜೆಪಿ ಮುಖಂಡರೊಂದಿಗೆ “ಮೋದಿ ಕಾ ಅಸ್ಲಿ ಪರಿವಾರ್”(ಮೋದಿಯ ನಿಜವಾದ ಪರಿವಾರ) ಎಂಬ ಶೀರ್ಷಿಕೆಯೊಂದಿಗೆ ಭಾರತೀಯ ಯುವ ಕಾಂಗ್ರೆಸ್‌ ಎಂದು ಬರೆದಿರುವ ಫ್ಲೆಕ್ಸ್ ಅನ್ನು ಹಲವಡೆ ಹಾಕಲಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

JNU ವಿದ್ಯಾರ್ಥಿ ‘ನಜೀಬ್’ ನಾಪತ್ತೆಗೆ 10 ವರ್ಷಗಳು: ಉತ್ತರ...

ತನಿಖಾ ಸಂಸ್ಥೆಗಳು ಕಡತವನ್ನು ಮುಚ್ಚಿದ ಮಾತ್ರಕ್ಕೆ ಒಬ್ಬ ತಾಯಿಯ ಹುಡುಕಾಟವನ್ನಾಗಲಿ ಅಥವಾ ಅಮಾಯಕ ವಿದ್ಯಾರ್ಥಿಯೊಬ್ಬನ ನಾಪತ್ತೆ ಕುರಿತ ಪ್ರಶ್ನೆಗಳನ್ನಾಗಲಿ ಅಳಿಸಿಹಾಕಲು ಸಾಧ್ಯವಿಲ್ಲ. ನಜೀಬ್ ಅಹ್ಮದ್ ಅವರನ್ನು ಕೇವಲ ಒಂದು ಪ್ರತಿಭಟನೆಯ ಸಂಕೇತವಾಗಿ ನೆನೆಯುವ...

ಈ ಪೋಸ್ಟರ್‌ಗಳಿಗೆ ಸಂಬಂಧಿಸಿದಂತೆ ತುಘಲಕ್‌ ರೋಡ್‌ ಪೊಲೀಸ್‌ ಠಾಣೆಯಲ್ಲಿ ದಿಲ್ಲಿ ಪ್ರಿವೆನ್ಶನ್‌ ಆಫ್‌ ಡಿಫೇಸ್‌ಮೆಂಟ್‌ ಆಫ್‌ ಪ್ರಾಪರ್ಟಿ ಆ್ಯಕ್ಟ್‌ನ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಆ ಬಳಿಕ ಖುದ್ದು ಪೊಲೀಸರೆ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದ್ದಾರೆ.

ಹೊಸದಿಲ್ಲಿ ಮುನಿಸಿಪಲ್‌ ಕೌನ್ಸಿಲ್‌ನ ಅಧಿಕಾರಿಯೊಬ್ಬರ ದೂರಿನ ಆಧಾರದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಈ ವಿವಾದಿತ ಪೋಸ್ಟರ್‌ನಲ್ಲಿ ದೇಶ ತೊರೆದ ಉದ್ಯಮಿಗಳಲ್ಲದೇ, ಗೌತಮ್ ಅದಾನಿ, ಭೋಪಾಲ್‌ನ ಬಿಜೆಪಿ ಸಂಸದೆ, ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣ ಪ್ರಮುಖ ಆರೋಪಿ ಪ್ರಜ್ಞಾ ಸಿಂಗ್ ಠಾಕೂರ್‌ ಹಾಗೂ ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯದ ಆರೋಪಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸೇರಿದಂತೆ ಒಟ್ಟು 13 ಜನಗಳ ಫೋಟೋಗಳನ್ನು ಹಾಕಲಾಗಿತ್ತು. ಇವರೆಲ್ಲರೂ ಮೋದಿಯವರ ನೈಜ ಕುಟುಂಬ ಎಂದು ಬರೆಯಲಾಗಿತ್ತು.

ಹಿನ್ನೆಲೆ ಏನು?

ಪಾಟ್ನಾದಲ್ಲಿ ಕಳೆದ ರವಿವಾರ ನಡೆದ ಸಮಾವೇಶದಲ್ಲಿ ಆರ್‌ಜೆಡಿ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್‌ ಅವರು, ಪ್ರಧಾನಿ ಮೋದಿಗೆ ಕುಟುಂಬವಿಲ್ಲ. ನೈಜ ಹಿಂದೂ ಅಲ್ಲ. ನೈಜ ಹಿಂದೂ ತಾಯಿ ಮರಣ ಹೊಂದಿದಾಗ ಕೇಶಮುಂಡನ ಮಾಡುತ್ತಿದ್ದರು” ಎಂದು ಹೇಳಿದ್ದಕ್ಕೆ ಬಿಜೆಪಿ ಪಾಳಯ ಆಕ್ರೋಶಗೊಂಡಿತ್ತು.

modi ka pariwar 1 1

ಇದಕ್ಕೆ ಪ್ರತಿಯಾಗಿ ಸೋಮವಾರ ನಡೆದ ಸಾರ್ವಜನಿಕ ಸಮಾವೇಶದ ಭಾಷಣದ ವೇಳೆ ಪ್ರತಿಕ್ರಿಯಿಸಿದ್ದ ಪ್ರಧಾನಿ ಮೋದಿ, 140 ಕೋಟಿ ದೇಶವಾಸಿಗಳು ತಮ್ಮ ಪರಿವಾರ ಎಂದಿದ್ದರು. ಇದರ ಬೆನ್ನಲ್ಲೇ ಹಲವು ಬಿಜೆಪಿ ನಾಯಕರು ತಮ್ಮ ಸಾಮಾಜಿಕ ಜಾಲತಾಣ ಹ್ಯಾಂಡಲ್‌ಗಳ ಬಯೋದಲ್ಲಿ ʼಮೋದಿ ಕಾ ಪರಿವಾರ್’ ಎಂದು ಸೇರಿಸಿದ್ದರು.

ಇದಕ್ಕೆ ಕೌಂಟರ್ ಆಗಿ ಯೂತ್ ಕಾಂಗ್ರೆಸ್, “ಮೋದಿ ಕಾ ಅಸ್ಲಿ ಪರಿವಾರ್” ಎಂದು ಹೇಳುವ ಮೂಲಕ ಅತ್ಯಾಚಾರ ಆರೋಪಿಗಳು, ದೇಶ ತೊರೆದ ಉದ್ಯಮಿಗಳ ಫೋಟೋ ಇರುವ ಫ್ಲೆಕ್ಸ್ ಹಾಕಿತ್ತು. ಅಲ್ಲದೇ, ಅದನ್ನೇ ಸೋಷಿಯಲ್ ಮೀಡಿಯಾಗಳಲ್ಲೂ ಹಂಚಿಕೊಂಡಿತ್ತು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಜಾಪ್ರಭುತ್ವದ ಗಟ್ಟಿತನವಿರುವುದು ಪ್ರಜೆಗಳಿಗೆ ಸರ್ಕಾರವನ್ನು ಪ್ರಶ್ನಿಸುವ ಸ್ವಾತಂತ್ರ್ಯ ಇರುವಲ್ಲಿ: ಸಿಎಂ ಡಿ.ಕೆ ಶಿವಕುಮಾರ್

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ಹೊಣೆಗಾರಿಕೆಯೇ ಬುನಾದಿಯಾಗಿದೆ. ಎಲ್ಲರೂ ಸರ್ಕಾರಕ್ಕೆ ಕುರುಡಾಗಿ ತಲೆಬಾಗುವುದೇ...

ಪತ್ರಕರ್ತರ ಮೇಲಿನ ಪೊಲೀಸ್‌ ದಾಳಿಗೆ ಡಿಎಸ್‌ಜೆಎ ಖಂಡನೆ; ಪ್ರೆಸ್ ಕೌನ್ಸಿಲ್‌ನಿಂದ ಮಾರ್ಗಸೂಚಿ ಪ್ರಕಟ

ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಮತ್ತು ಪೊಲೀಸ್ ಕ್ರಮಗಳನ್ನು ವರದಿ ಮಾಡುತ್ತಿರುವ ಪತ್ರಕರ್ತರ...

ದೇಶದ ಜನತೆ ಅಧಿಕಾರ ಬದಲಾವಣೆ ಬಯಸಿದ್ದಾರೆ, ನೀವು ಹೊರಡುವ ಸಮಯ ಬಂದಿದೆ; ರಾಜ್‌ನಾಥ್‌ಗೆ ಸಿಬಲ್‌ ಎಚ್ಚರಿಕೆ

ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಬಾಂಗ್ಲಾದೇಶ ಮಾದರಿಯಲ್ಲಿ ದೇಶದಲ್ಲಿ 'ಸರ್ಕಾರ ಬದಲಾವಣೆ'ಯ...

ಖ್ಯಾತ ಹಿರಿಯ ಸಂಗೀತ ನಿರ್ದೇಶಕ ದೇವ ಇನ್ನಿಲ್ಲ

ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳ ಚಿತ್ರಗಳಿಗೆ ಸುಮಧುರ ಸಂಗೀತ...