ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ರಾಷ್ಟ್ರೀಯ ಅಧ್ಯಕ್ಷ ಎಂ ಕೆ ಫೈಜಿ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಅವರನ್ನು ಸೋಮವಾರ ರಾತ್ರಿ ಇಡಿ ವಶಕ್ಕೆ ಪಡೆದಿತ್ತು. ಇದೀಗ, ಬಂಧಿಸಲಾಗಿದೆ ಎಂದು ತಿಳಿಸಿದೆ.
ಎಸ್‌ಡಿಪಿಐನ ಅಧ್ಯಕ್ಷ ಎಂ.ಕೆ ಫೈಜಿ ಅವರನ್ನು ಸೋಮವಾರ ರಾತ್ರಿ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಡಿ ವಶಕ್ಕೆ ಪಡೆದಿತ್ತು. ಈಗ, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಅವರನ್ನು ಬಂಧಿಸಿರುವುದಾಗಿ ಮಾಹಿತಿ ನೀಡಿದೆ.
ನಿಷೇಧಿತ ಸಂಘಟನೆ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (ಪಿಎಫ್‌ಐ) ಜೊತೆ ಎಸ್‌ಡಿಪಿಐ ಹಣಕಾಸಿನ ಸಂಬಂಧ ಹೊಂದಿದೆ ಎಂದು ಆರೋಪಿಸಲಾಗಿದೆ. ಆದಾಗ್ಯೂ, ಈ ಆರೋಪವನ್ನು ಎಸ್‌ಡಿಪಿಐ ನಿರಾಕರಿಸಿದೆ.