ಸುಮಾರು ಎರಡು ದಶಕಗಳ(20 ವರ್ಷಗಳ) ಬಳಿಕ ಠಾಕ್ರೆ ಸಹೋದರರು ಒಂದೇ ವೇದಿಕೆಯನ್ನು ಹಂಚಿಕೊಂಡಿದ್ದಾರೆ. ಸೋದರಸಂಬಂಧಿಗಳಾದ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಇಂದು ಮುಂಬೈನಲ್ಲಿ ನಡೆದ ಮರಾಠಿ ವಿಜಯ ರ್‍ಯಾಲಿಯಲ್ಲಿ ಒಂದಾಗಿದ್ದಾರೆ. ತಮ್ಮನ್ನು ಒಂದಾಗಿಸಿದ ಶ್ರೇಯಸ್ಸನ್ನು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಅಧ್ಯಕ್ಷ ರಾಜ್ ಠಾಕ್ರೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ನೀಡಿದ್ದಾರೆ.
‘ಅವಾಜ್ ಮರಾಠಿಚಾ’ (ಮರಾಠಿಯ ಧ್ವನಿ) ಎಂಬ ಶೀರ್ಷಿಕೆಯ ಈ ಕಾರ್ಯಕ್ರಮವನ್ನು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಜಂಟಿಯಾಗಿ ಆಯೋಜಿಸಿವೆ.
ಇದನ್ನು ಓದಿದ್ದೀರಾ? ಎರಡು ದಶಕಗಳ ನಂತರ ‘ಮರಾಠಿ ವಿಜಯ’ ರ್‍ಯಾಲಿ ನೆಪದಲ್ಲಿ ಒಂದಾದ ರಾಜ್, ಉದ್ಧವ್ ಠಾಕ್ರೆ
ಮಹಾರಾಷ್ಟ್ರದ ಪ್ರಾಥಮಿಕ ಶಾಲೆಗಳಲ್ಲಿ ಹಿಂದಿಯನ್ನು ಮೂರನೇ ಭಾಷೆಯಾಗಿ ಕಡ್ಡಾಯಗೊಳಿಸುವ ವಿವಾದಾತ್ಮಕ ನೀತಿಯನ್ನು ಠಾಕ್ರೆ ಸಹೋದರರು ಜೊತೆಯಾಗಿ ವಿರೋಧಿಸಿದ್ದಾರೆ. ಸರ್ಕಾರ ಈ ನೀತಿಯನ್ನು ಹಿಂಪಡೆದ ಬಳಿಕ ಸಹೋದರರು ಜೊತೆಯಾಗಿ ಸೇರಿ ವಿಜಯ ರ್‍ಯಾಲಿ ನಡೆಸಿದ್ದಾರೆ.
VIDEO | Mumbai: Addressing a joint victory gathering with Shiv Sena (UBT) chief Uddhav Thackeray (@uddhavthackeray), titled 'Awaj Marathicha', MNS chief Raj Thackeray (@RajThackeray) says, “CM Fadnavis managed to do what Balasaheb Thackeray could not – bring myself and Uddhav… pic.twitter.com/AasFNDNpfB
— Press Trust of India (@PTI_News) July 5, 2025
ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ ಠಾಕ್ರೆ, “ಬಾಲ್ ಠಾಕ್ರೆಗೆ, ಇತರ ಅನೇಕರಿಗೆ ಮಾಡಲು ಸಾಧ್ಯವಾಗದ್ದನ್ನು, ದೇವೇಂದ್ರ ಫಡ್ನವೀಸ್ ಮಾಡಿದರು. ನಮ್ಮನ್ನು ಒಟ್ಟುಗೂಡಿಸಿದರು” ಎಂದು ಹೇಳಿದ್ದಾರೆ. ಹಾಗೆಯೇ, “ನಿಮಗೆ ವಿಧಾನಸಭೆಯಲ್ಲಿ ಅಧಿಕಾರವಿರಬಹುದು, ನಮಗೆ ರಸ್ತೆಗಳಲ್ಲಿ ಅಧಿಕಾರವಿದೆ” ಎಂದೂ ಹೇಳಿದರು.
“ಈ ತ್ರಿಭಾಷಾ ಸೂತ್ರ ಕೇಂದ್ರ ಸರ್ಕಾರ ತಂದಿರುವುದು. ಇಂದು, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಎಲ್ಲ ಪ್ರಕ್ರಿಯೆ ಇಂಗ್ಲೀಷ್‌ನಲ್ಲಿದೆ. ಅದು ಯಾವುದೇ ಬೇರೆ ರಾಜ್ಯದಲ್ಲಿರುವುದು ಅಲ್ಲ. ಮಹಾರಾಷ್ಟ್ರ ಎಚ್ಚರವಾದಾಗ, ಏನಾಗುತ್ತದೆ ಎಂದು ನೀವು ನೋಡುತ್ತೀರಿ. ಮುಂಬೈ ಅಥವಾ ಮಹಾರಾಷ್ಟ್ರದ ಮೇಲೆ ನಿಮ್ಮ ಕೈ ಹಾಕಲು ಪ್ರಯತ್ನಿಸಿದರೆ ಏನಾಗುತ್ತದೆ ಎಂದು ನೋಡಬೇಕಾಗುತ್ತದೆ” ಎಂದು ಎಚ್ಚರಿಸಿದರು.
2005ರಲ್ಲಿ ಮಾಲ್ವನ್ ವಿಧಾನಸಭಾ ಉಪಚುನಾವಣೆ ಪ್ರಚಾರದ ಸಮಯದಲ್ಲಿ ರಾಜ್ ಮತ್ತು ಉದ್ಧವ್ ಕೊನೆಯ ಬಾರಿಗೆ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಬಳಿಕ ಆಂತರಿಕ ಭಿನ್ನಾಭಿಪ್ರಾಯಗಳ ಕಾರಣ ರಾಜ್ ಠಾಕ್ರೆ ಶಿವಸೇನೆಯನ್ನು ತೊರೆದರು. 2005ರ ನವೆಂಬರ್‌ನ ಶಿವಾಜಿ ಪಾರ್ಕ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ ತಮ್ಮ ಚಿಕ್ಕಪ್ಪ ಸ್ಥಾಪಿಸಿದ ಶಿವಸೇನೆಗೆ ರಾಜೀನಾಮೆ ನೀಡುವುದಾಗಿ ಭಾವನಾತ್ಮಕವಾಗಿ ಹೇಳಿದ್ದರು. “ನಾನು ಕೇಳಿದ್ದು ಗೌರವ ಮಾತ್ರ. ನನಗೆ ಸಿಕ್ಕಿದ್ದು ಅವಮಾನ ಮಾತ್ರ” ಎಂದು ಠಾಕ್ರೆ ಹೇಳಿದ್ದರು.
