ಉಡುಪಿ ವಿಡಿಯೋ ಪ್ರಕರಣ | ‘ಪ್ರತೀಕ್’ ಸ್ಥಾನದಲ್ಲಿ ‘ಅತೀಕ್’ ಇದ್ದರೆ ಮಾತ್ರ ಬಿಜೆಪಿ ಹೋರಾಟ: ದಿನೇಶ್‌ ಗುಂಡೂರಾವ್‌

Date:

Advertisements
  • ಪ್ರತೀಕ್‌ನ ಸ್ಥಾನದಲ್ಲಿ ಅತೀಕ್ ಇದ್ದರೆ ಮಾತ್ರ ಬಿಜೆಪಿಯವರ ಹೋರಾಟವೇ?
  • ಎಬಿವಿಪಿ ಯುವಕ ಅಶ್ಲೀಲ ವಿಡಿಯೋ ಹರಿಬಿಟ್ಟಾಗ ನವರಂದ್ರಗಳೂ ಬಂದ್ ಆಗಿತ್ತು

ಉಡುಪಿ ವಿಡಿಯೋ ಚಿತ್ರೀಕರಣ ಪ್ರಕರಣವನ್ನು ಬಿಜೆಪಿ ನಾಯಕರು ಉದ್ದೇಶಪೂರ್ವಕವಾಗಿ ರಾಜಕೀಯಗೊಳಿಸುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್‌ ಗುಂಡೂರಾವ್‌ ಆರೋಪಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಅವರು, “ಉಡುಪಿ ಪ್ರಕರಣದಲ್ಲಿ ಯಾವುದೇ ವಿಡಿಯೋ ಹರಿದಾಡಿಲ್ಲ. ಹರಿದಾಡುತ್ತಿರುವ ವಿಡಿಯೋ ಕೂಡ ನಕಲಿ. ಪೊಲೀಸರು ವಿದ್ಯಾರ್ಥಿನಿಯರ ಮೊಬೈಲ್ ರಿಟ್ರೀವ್ ಮಾಡಿದ್ದಾರೆ. ಅಲ್ಲಿ ಯಾವುದೇ ವಿಡಿಯೋಗಳಿಲ್ಲ. ಮತ್ಯಾಕೆ ಈ ರಾದ್ಧಾಂತ?” ಎಂದು ಕಿಡಿಕಾರಿದ್ದಾರೆ.

“ಬೊಮ್ಮಾಯಿ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಉಡುಪಿ ಪ್ರಕರಣದಲ್ಲಿ ಇಲಿ ಹೋಗಿದ್ದನ್ನೇ ಹುಲಿ ಹೋದಂತೆ ಬಿಂಬಿಸುತ್ತಿದ್ದಾರೆ. ಬೊಮ್ಮಾಯಿ ಅವರಿಗೊಂದು ಪ್ರಶ್ನೆ. ಉಡುಪಿ ಪ್ರಕರಣದಲ್ಲಿ ಇಷ್ಟು ಬಟ್ಟೆ ಹರಿದುಕೊಳ್ಳುತ್ತಿರುವ ನೀವು, ಪ್ರತೀಕ್ ಗೌಡ ಎಂಬ ತೀರ್ಥಹಳ್ಳಿಯ ಎಬಿವಿಪಿ ಘಟಕದ ಅಧ್ಯಕ್ಷ ಹಿಂದೂ ಯುವತಿಯರ ಅಶ್ಲೀಲ ವಿಡಿಯೋ ಬಿಟ್ಟಾಗ ಎಲ್ಲಿದ್ದೀರಿ” ಎಂದು ಪ್ರಶ್ನಿಸಿದ್ದಾರೆ.

Advertisements

“ಪ್ರತೀಕ್ ಗೌಡ ಎಂಬ ಎಬಿವಿಪಿ ಯುವಕನೊಬ್ಬ ಹಿಂದೂ ಯುವತಿಯರ ಅಶ್ಲೀಲ ವಿಡಿಯೋ ಹರಿಬಿಟ್ಟಾಗ ಬೊಮ್ಮಾಯಿ ಸೇರಿದಂತೆ ಬಿಜೆಪಿಯ ಎಲ್ಲ ನಾಯಕರ ನವರಂದ್ರಗಳೂ ಬಂದ್ ಆಗಿತ್ತು. ಈಗ ಧರ್ಮರಕ್ಷಕರ ಮುಖವಾಡ ತೊಟ್ಟು ಅಖಾಡಕ್ಕಿಳಿದಿದ್ದಾರೆ‌. ಹಿಂದೂ ಯುವತಿಯರ ಅಶ್ಲೀಲ ವಿಡಿಯೋ ಹರಿಬಿಟ್ಟ ‘ಪ್ರತೀಕ್’ನ ಸ್ಥಾನದಲ್ಲಿ ‘ಅತೀಕ್’ ಇದ್ದರೆ ಮಾತ್ರ ಇವರ ಹೋರಾಟವೇ?” ಎಂದು ಬಿಜೆಪಿ ನಡೆಯನ್ನು ಟೀಕಿಸಿದ್ದಾರೆ.

“ಬೊಮ್ಮಾಯಿಯವರೇ, ಪೊಲೀಸರು ನಿಮ್ಮ ಆಡಳಿತದಲ್ಲಿ ರಾಜಕೀಯದ ಒತ್ತಡಕ್ಕೆ ಮಣಿದಿರಬಹುದು. ಆದರೆ, ನಾವು ಪೋಲಿಸರಿಗೆ ಫ್ರೀ ಹ್ಯಾಂಡ್ ಕೊಟ್ಟಿದ್ದೇವೆ. ಹಿಂದೂ ಯುವತಿಯರ ಅಶ್ಲೀಲ ವಿಡಿಯೋ ಹರಿಬಿಟ್ಟ ಪ್ರತೀಕ್ ಗೌಡ ಎಂಬಾತನನ್ನು ನಮ್ಮ ಪೊಲೀಸರು ಒದ್ದು ಒಳಗಾಕ್ಕಿದ್ದಾರೆ. ಬಹುಶಃ ಧರ್ಮ ರಕ್ಷಣೆಯ ಗ್ರಾಫ್ ನಿಮಗಿಂತ ನಮ್ಮದ್ದೇ ಜಾಸ್ತಿ ಇದೆಯಲ್ಲವೇ?” ಎಂದು ತಿರುಗೇಟು ನೀಡಿದ್ದಾರೆ.

“ಪ್ರಾಜ್ಞರಾದ ಬೊಮ್ಮಾಯಿ ಅವರು ಬಿಜೆಪಿಯ ಟೂಲ್‌ಕಿಟ್‌ನ ಭಾಗವಾಗಬಾರದು. ಉಡುಪಿ ಪ್ರಕರಣ ವಯೋಸಹಜ ಚೇಷ್ಟೆ ಮತ್ತು ಹುಡುಗಾಟ ಎಂದು ಬೊಮ್ಮಾಯಿಯವರಿಗೂ ಕೂಡ ತಿಳಿದಿದೆ. ಆದರೂ ಪಾಪ ಬಿಜೆಪಿಯಲ್ಲಿ ತಮ್ಮ ಅಸ್ತಿತ್ವಕ್ಕಾಗಿ ಬೊಮ್ಮಾಯಿಯವರು ಈ ರೀತಿಯ ಹೇಳಿಕೆ ಕೊಡುತ್ತಿದ್ದಾರೆ. ಕುತೂಹಲವೆಂದರೆ ಸಿಎಂ ಆದವರು ವಿಪಕ್ಷ ಸ್ಥಾನ ಪಡೆಯಲು ಇಷ್ಟೆಲ್ಲಾ ಮಾಡಬೇಕೆ” ಎಂದು ಪ್ರಶ್ನಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಉಡುಪಿಗೆ ಭೇಟಿ ನೀಡಿದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್

“ಉಡುಪಿಯ ಕಾಲೇಜಿನ ಶೌಚಾಲಯದ ವಿಡಿಯೋ ಪ್ರಸಂಗದ‌ ಹಿಂದೆ ಧಾರ್ಮಿಕ ಷಡ್ಯಂತ್ರವಿಲ್ಲ ಎಂಬುದು ಪೊಲೀಸರ ತನಿಖೆಯಿಂದ ಸಾಬೀತಾಗಿದೆ. ಆದರೆ, ಬಿಜೆಪಿಯವರು ತಮಿಳುನಾಡಿನ ಯಾವುದೋ ವಿಡಿಯೋವನ್ನು ಉಡುಪಿಯದ್ದೇ ಎಂದು ಬಿಂಬಿಸಿ ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿಯ ಮನೆದೇವರೇ ಸುಳ್ಳು. ಆದರೂ ಇಂತಹ ವಿಚಾರದಲ್ಲೂ ಈ ಸುಳ್ಳು ಬೇಕೇ?” ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಉಡುಪಿ ವಿಡಿಯೋ ಪ್ರಕರಣವನ್ನು ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರದ ವಿರುದ್ಧ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲು ಬಿಜೆಪಿ ಮುಂದಾಗಿದೆ. ವಿಡಿಯೋ ಘಟನೆಯಲ್ಲಿರುವ ಮೂವರು ಮುಸ್ಲಿಂ ವಿದ್ಯಾರ್ಥಿನಿಯರನ್ನು ಬಂಧಿಸಿ, ಸಮಗ್ರ ನಡೆಸಬೇಕು. ಇಲ್ಲವಾದಲ್ಲಿ ಜುಲೈ 27ರಂದು ಮಹಿಳಾ ಮೋರ್ಚಾದಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಕರೆ ಕೊಡುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಎಂ ಎನ್ ರವಿಕುಮಾರ್ ಹೇಳಿಕೆ ನೀಡಿದ್ದರು.

ಅಲ್ಲದೆ ಬುಧವಾರ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್‌ ಭೇಟಿ ನೀಡಿ ಪೊಲೀಸರೊಂದಿಗೆ ಮಾತು ಕತೆ ನಡೆಸಿ. ಪರಿಶೀಲನೆಗೆ ಮುಂದಾಗಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಭಯಂಕರ ರಾಷ್ಟ್ರವಾದಿಗಳು ಮತ್ತು ದೇಶಭಕ್ತರ ಪಕ್ಷದಲ್ಲಿರುವ ಲಿಂಗಾಯತ, ವಕ್ಕಲಿಗ ,ದಲಿತ ಮತ್ತು ಹಿಂದುಳಿದ ವರ್ಗಗಳ ರಾಜಕಾರಣಿಗಳು ತಮ್ಮ ಅಸ್ತಿತ್ವವನ್ನು ಮರೆತು ಬಿಟ್ಟಿದ್ದಾರೆ,,ಕೇವಲ ಬಾಸ್ ಆಜ್ಞೆ ಪಾಲಿಸಲು ತಮ್ಮ ಸ್ವಾಭಿಮಾನವನ್ನು ಬಿಟ್ಟು ತಮ್ಮ ಸಮುದಾಯಗಳ ಹಿತಾಸಕ್ತಿ ವಿರುದ್ಧವಾಗಿಯೂ ಕೆಲಸ ಮಾಡುವುದು ದುರಂತ,,,,ಈ ಸಮುದಾಯದ ಜನರು ಜಾಗೃತರಾಗಿ ಇವರಿಗೆ ವಿಶ್ರಾಂತಿ ಕೊಡುವುದು ಅತ್ಯವಶ್ಯಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

Download Eedina App Android / iOS

X