ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆಯ ಬಂಧಿತರು ʼಅಮಾಯಕʼ ಮುಸ್ಲಿಮರು: ಭಾಸ್ಕರ ರಾವ್‌

Date:

Advertisements

ಬಿಜೆಪಿ ಅಧಿಕಾರಾವಧಿಯಲ್ಲಿ ನಡೆದ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಸ್ಫೋಟಕ ಹೇಳಿಕೆಯನ್ನು ಬಿಜೆಪಿ ನಾಯಕ, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ ರಾವ್‌ ನೀಡಿದ್ದಾರೆ. ಅಮಾಯಕ ಮುಸ್ಲಿಮರನ್ನು ಈ ಘಟನೆಯಲ್ಲಿ ಬಂಧಿಸಲಾಗಿದೆ ಎಂದು ವಿಷಾದಿಸಿದ್ದಾರೆ.

“ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಘಟನೆಯಲ್ಲಿ ಬಂಧಿತರಾದವರು ಅಮಾಯಕ ಮುಸ್ಲಿಮರು. ಅವರಿನ್ನೂ ಜೈಲಿನಲ್ಲಿದ್ದಾರೆ” ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಕೇರಳದ ಬಾಂಬ್‌‌ ಬ್ಲಾಸ್ಟ್‌ ಘಟನೆಗೆ ಮುಸ್ಲಿಮರನ್ನು ತಳುಕುಹಾಕಿ ಅವರು ಮಾಡಿದ್ದ ಟ್ವೀಟ್‌ಗೆ ಸಂಬಂಧಿಸಿದಂತೆ ಭಾರೀ ಟೀಕೆಗಳು ವ್ಯಕ್ತವಾಗಿವೆ. ಈ ಕುರಿತು ಈದಿನ.ಕಾಂಗೆ ಪ್ರತಿಕ್ರಿಯಿಸಿರುವ ಅವರು, “ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆಯಲ್ಲಿ ಬಂಧಿತರಾದವರು ಅಮಾಯಕರು. ಇಂತಹ ಘಟನೆಗಳಾದಾಗ ಅಮಾಯಕರನ್ನು ಅರೆಸ್ಟ್ ಮಾಡ್ತಾರೆ. ಕಾಂಗ್ರೆಸ್, ಸಿಪಿಎಂನವರು ಇವರಿಗೆ ಏನಾದರೂ ಸಹಾಯ ಮಾಡ್ತಾರಾ? ಇಲ್ಲ- ಏನೂ ಮಾಡಲ್ಲ” ಎಂದು ತಿಳಿಸಿದರು.

Advertisements

“ನನ್ನ ಟ್ವೀಟ್‌ಗೆ ಟೀಕೆಗಳಷ್ಟೇ ಅಲ್ಲ, ಪರವಾಗಿಯೂ ಪ್ರತಿಕ್ರಿಯೆಗಳು ಬರುತ್ತಿವೆ. ಆ ಘಟನೆಗೆ (ಕೇರಳ ಬಾಂಬ್ ಬ್ಲಾಸ್ಟ್‌‌ಗೆ) ಯಾರು ಹೊಣೆ ಎಂಬುದು ನಮಗೆ ಗೊತ್ತಿಲ್ಲ. ಇಂತಹದೊಂದು ಘಟನೆಯಾದ ಕೂಡಲೇ ಮೊದಲಿಗೆ ಅಮಾಯಕ ಮುಸಲ್ಮಾನರನ್ನು ಅರೆಸ್ಟ್ ಮಾಡಿಬಿಡುತ್ತಾರೆ. ಅವರ ಮೇಲೆ ಯುಎಪಿಎ (ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ) ಅಡಿ ಪ್ರಕರಣ ದಾಖಲಿಸುತ್ತಾರೆ. ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿಯಲ್ಲೂ ಹೀಗೆಯೇ ಆಯಿತು. ಲೀಡರ್‌ಗಳು ಯಾರೂ ಕಾಣಿಸಿಕೊಳ್ಳಲ್ಲ. ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಪ್ರಕರಣ ಸಂಬಂಧ ಎರಡೂವರೆ ವರ್ಷಗಳ ಹಿಂದೆ ಅರೆಸ್ಟ್ ಆದವರು, ಪಾಪ ಈಗಲೂ ಜೈಲಿನಲ್ಲಿದ್ದಾರೆ. ಅವರು ಬಿಡುಗಡೆ ಕೂಡ ಆಗಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

“ಮುಸ್ಲಿಮರ ಪರವಾಗಿ ನಾನು ನಿಂತಿರುವಷ್ಟು ಯಾರೂ ನಿಂತಿಲ್ಲ. ಎನ್‌ಆರ್‌ಸಿ- ಸಿಎಎ ವೇಳೆ ಇರಲಿ, ಕೋವಿಡ್ ಸಂದರ್ಭದಲ್ಲಿ ಇರಲಿ, ನಾನು ಬೆಂಗಳೂರಿನಲ್ಲಿ ಆಯಕ್ತನಾಗಿದ್ದಾಗ ಒಂದೇ ಒಂದು ತೊಟ್ಟು ರಕ್ತ ಬೀಳಿಸಿಲ್ಲ” ಎಂದು ಹೇಳಿದರು.

ಇಂತಹ ಬಾಂಬ್ ಬ್ಲಾಸ್ಟ್ ಆದ ತಕ್ಷಣ ಸಿಕ್ಕ ಸಿಕ್ಕ ಮುಗ್ದ ಮುಸ್ಲಿಮರನ್ನು ಅರೆಸ್ಟ್ ಮಾಡಿಬಿಡ್ತಾರೆ. ಅವರ ಬಳಿ ವಕೀಲರಿಗೆ ಕೊಡಲು ಹಣ ಕೂಡ ಇರಲ್ಲ, ಹೊರಗಡೆ ಬರಲು ಕೂಡ ಆಗಲ್ಲ. ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಕೇಸ್‌ನಲ್ಲಿ ಕಲ್ಲಂಗಡಿ ಮಾರೋರು, ಮೀನು ಮಾರೋರು ಇನ್ನೂ ಜೈಲಿನಲ್ಲಿ ಇದ್ದಾರೆ, ಪಾಪ. ಅವರು ಈಗಲೂ ಆಚೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

“ಪೂರ್ವಗ್ರಹ ಪೀಡಿತರಾಗಿ ನನ್ನನ್ನು ಮುಸ್ಲಿಂ ವಿರೋಧಿ ಎನ್ನಬಾರದು. ನಾನು ಯಾರ ವಿರೋಧಿಯೂ ಅಲ್ಲ. ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಅಮಾಯಕರನ್ನು ಬಲಿ ಹಾಕುವವರ ವಿರೋಧಿ ನಾನು. ನಾನು ಕೆಲಸ ಮಾಡಿದ ಯಾವುದೇ ನಗರದಲ್ಲಿ ಒಂದೇ ಒಂದು ಕೋಮು ಗಲಭೆ ಆಗಲು ಬಿಟ್ಟಿಲ್ಲ. ಬೇಕಾದರೆ ನನ್ನ ಚರಿತ್ರೆಯನ್ನು ವಿಚಾರಿಸಿಕೊಳ್ಳಿ” ಎಂದು ತಿಳಿಸಿದರು.

“ಹಮಾಸ್ ಮುಖಂಡರನ್ನು ಕರೆಸಿ ಮಾತನಾಡಿಸುವುದು ತಪ್ಪು. ಅದಾದ ಮೇಲೆ ಬಾಂಬ್ ಬ್ಲಾಸ್ಟ್‌‌ ಆಯ್ತು. ನಂತರ ಅಮಾಯಕರನ್ನು ಕರೆದುಕೊಂಡು ಹೋಗಿ ಜೈಲಿಗೆ ಹಾಕ್ತಾರೆ, ಅಷ್ಟೇ. ನಿಜವಾದ ಪ್ರಚೋದನಕಾರರು ತಪ್ಪಿಸಿಕೊಳ್ಳುತ್ತಾರೆ. ಕೆಳಹಂತದಲ್ಲಿರುವ ಮುಸ್ಲಿಮರನ್ನು ಬಲಿ ಹಾಕಿಬಿಡ್ತಾರೆ” ಎಂದು ಎಚ್ಚರಿಸಿದರು.

“ಕಾಂಗ್ರೆಸ್ ಮತ್ತು ಸಿಪಿಎಂ ಪಕ್ಷಗಳು ಇಷ್ಟು ವರ್ಷಗಳ ಆಡಳಿತದಲ್ಲಿ ಆ ಸಮುದಾಯವನ್ನು ಬಲಿಷ್ಠ ಮಾಡಿದ್ದಾರೆಯೇ? ಇಲ್ಲ. ಟೊಳ್ಳು ಆಶ್ವಾಸನೆಯನ್ನು ಕೊಟ್ಟು ವೋಟ್ ಬ್ಯಾಂಕ್ ರೀತಿ ಅವರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ” ಎಂದು ಟೀಕಿಸಿದರು.

“ರಾಷ್ಟ್ರ ಮಟ್ಟದಲ್ಲಿ ಅಲ್ಪಸಂಖ್ಯಾತ ನಾಯಕರನ್ನು ಕಾಂಗ್ರೆಸ್‌ನವರು ಬೆಳೆಸಿದ್ದಾರೆಯೇ? ರಾಜ್ಯಮಟ್ಟದಲ್ಲಿ ಬೆಳೆಸಿದ್ದಾರೆಯೇ? ಆಳವಾಗಿ ನೋಡಿ, ಪೂರ್ವಗ್ರಹ ಪೀಡಿತರಾಗಿ ನೋಡಬೇಡಿ. ಇಂತಹ ವಿಚಾರವನ್ನು ನಾನು ಬಹಳ ಆಳವಾಗಿ ನೋಡಿದವನು, ಅರ್ಥ ಮಾಡಿಕೊಂಡವನು” ಎಂದು ಸ್ಪಷ್ಪಪಡಿಸಿದರು.

ವಿವಾದಾತ್ಮಕ ಟ್ವೀಟ್‌ಗೆ ಬರುತ್ತಿರುವ ಪ್ರತಿ ಟ್ವೀಟ್‌ಗಳ ಸಂಬಂಧ ಮಾತನಾಡಿದ ಅವರು, “ಟ್ವೀಟ್ ಮಾಡುವವರಿಗೆ ಅಮಾಯಕ ಮುಸಲ್ಮಾನರ ಪಾಡು ಗೊತ್ತಿದೆಯಾ? ಅಷ್ಟು ಕಾಳಜಿ ಇದ್ದರೆ ಅವರಿಗೆ ಜಾಮೀನು ಕೊಟ್ಟು ಹೊರಗಡೆ ಕರೆದುಕೊಂಡು ಬರಲಿ. ಟ್ವೀಟ್ ಮಾಡೋದು ಬಿಟ್ಟು ಕೆಲಸ ಮಾಡಲಿ” ಎಂದು ಸವಾಲು ಹಾಕಿದರು.

“ಯಾವುದೋ ಒಂದು ಘಟನೆಯಾದರೆ ಅದಕ್ಕೆ ಮುಸ್ಲಿಮರನ್ನು ತಳುಕು ಹಾಕುವುದು ಎಷ್ಟು ಸರಿ?” ಎಂದು ಪ್ರಶ್ನಿಸಿದಾಗ, “ಆ ರೀತಿಯಲ್ಲಿ ಮಾಡಿಟ್ಟಿದ್ದಾರೆ. ಒಂದು ಪೊಲೀಸ್ ಸ್ಟೇಷನ್‌ಗೆ ಬೆಂಕಿ ಹಚ್ಚಿದರೋ, ಲೀಡರ್‌ಗಳು ಯಾರೂ ಸಿಕ್ಕಿಬೀಳಲ್ಲ. ಎಲ್ಲ ಅಮಾಯಕರನ್ನು ಬಂಧಿಸಿಬಿಡ್ತಾರೆ. ನಿಮಗೆಲ್ಲ ಇದು ಹೊಸ ವಿಷಯ ಇರಬಹುದು. ಆದರೆ ನಾನು ಇದನ್ನೆಲ್ಲ 34 ವರ್ಷಗಳಿಂದ ನೋಡುತ್ತಲೇ ಬಂದವನು” ಎಂದು ಹೇಳಿದರು.

ಕೇರಳದಲ್ಲಿ ಡೊಮಿನಿಕ್ಸ್ ಎಂಬ ವ್ಯಕ್ತಿ ಎಸಗಿರುವ ಬಾಂಬ್ ಸ್ಪೋಟ ಕೃತ್ಯಕ್ಕೆ ಮುಸ್ಲಿಮರನ್ನು ಎಳೆದು ತಂದು ಭಾಸ್ಕರ್‌ ರಾವ್ ಟ್ವೀಟ್ ಮಾಡಿದ್ದರು. “ದೇಶದಲ್ಲಿ ಬಾಂಬ್ ಸ್ಫೋಟಗಳಿಗೆ ದೀರ್ಘ ವಿರಾಮವಿತ್ತು. ಕಾಂಗ್ರೆಸ್ ಮತ್ತು ಸಿಪಿಎಂನಿಂದ ದಶಕಗಳ ಕಾಲದ ಓಲೈಕೆಯ ಮತಬ್ಯಾಂಕ್ ರಾಜಕಾರಣವು ಮುಸ್ಲಿಮರನ್ನು ಅವಿದ್ಯಾವಂತರನ್ನಾಗಿ, ಹಿಂದುಳಿದವರನ್ನಾಗಿ ಮತ್ತು ಅಪರಾಧಿಗಳನ್ನಾಗಿ ಮಾಡಿದೆ… ಪರಿಣಾಮವಾಗಿ ಭಯೋತ್ಪಾದನೆಯನ್ನು ನಾವು ಮನೆಬಾಗಿಲಿಗೆ ಆಹ್ವಾನಿಸಿದ್ದೇವೆ. ಈ ಜನರು ಮುಖ್ಯವಾಹಿನಿಗೆ ಬರಲು ಯಾವಾಗ ಯೋಚಿಸುತ್ತಾರೆ….?” ಎಂದು ಪ್ರಶ್ನಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

Download Eedina App Android / iOS

X