ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾವೇರಿ ನಿವಾಸದಲ್ಲಿ ಹೊಸ ಮೀಟಿಂಗ್ ಹಾಲ್ ಉದ್ಘಾಟನೆಯನ್ನು ಸ್ವತಃ ಸಿದ್ದರಾಮಯ್ಯ ಅವರು ಡಿಸಿಎಂ ಡಿಕೆ ಶಿವಕುಮಾರ್ ಹಸ್ತದಿಂದ ಮಾಡಿಸಿದರು.
ಡಿಕೆ ಶಿವಕುಮಾರ್ ಅವರಿಗೆ ಟೇಪ್ ಕತ್ತರಿಸಲು ಸಿದ್ದರಾಮಯ್ಯ ಕತ್ತರಿ ಕೊಡುತ್ತಿದ್ದಂತೆ, “ನನ್ನಿಂದಲೇ ಟೇಪ್ ಕಟ್ ಮಾಡಿಸುತ್ತಿದ್ದೀರಾ?” ಎಂದು ನಗುತ್ತಾ ಡಿಸಿಎಂ ಡಿಕೆ ಶಿವಕುಮಾರ್ ಕೇಳಿದರು.
ಆಗ ಸಿದ್ದರಾಮಯ್ಯ “ಹೌದಪ್ಪಾ” ಎಂದು ನಗುತ್ತಾ ಹೇಳಿದರು. ಸಚಿವ ಪರಮೇಶ್ವರ್ ಮಧ್ಯಪ್ರವೇಶಿಸಿ, “ನಮ್ಮ ಪಕ್ಷದ ಅಧ್ಯಕ್ಷರು ನೀವು” ಎಂದು ಹೇಳಿದರು.
ನಂತರ ಸಿದ್ದರಾಮಯ್ಯ ಅವರು ಪರಮೇಶ್ವರ್ ಹೆಗಲ ಮೇಲೆ ಕೈ ಹಾಕಿ ಮುಂದಕ್ಕೆ ಕರೆತಂದರು. ನಂತರ ಎಲ್ಲರೂ ಒಂದು ಚಪ್ಪಾಳೆ ಹೊಡೆಯಿರಿ ಎಂದು ಹೇಳಿದ ಡಿಕೆ ಶಿವಕುಮಾರ್ ಟೇಪ್ ಕತ್ತರಿಸಿ ಮೀಟಿಂಗ್ ಹಾಲ್ ಉದ್ಘಾಟಿಸಿದರು.