ಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಕೊಂಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯಲ್ಲಿ ನಡೆದ ಸಭೆಯ ಬಳಿಕ ಭಾರತ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಕದನ ವಿರಾಮವನ್ನು ಖಚಿತಪಡಿಸಿದ್ದಾರೆ. ಈ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ನಿಜವಾದ ‘ವಾರ್ ರುಕ್ವಾ ದೀ ಪಾಪಾ’ (ಅಪ್ಪ ಯುದ್ಧ ನಿಲ್ಲಿಸಿದರು) ಎಂದ ನೆಟ್ಟಿಗರು ಹೇಳಿದ್ದಾರೆ.
ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಪ್ರವಾಸಿಗರು ಸೇರಿ 26 ಮಂದಿ ಸಾವನ್ನಪ್ಪಿದ್ದಾರೆ. ಈ ದಾಳಿಯ ಹೊಣೆಯನ್ನು ಲಷ್ಕರ್-ಎ-ತೊಯ್ಬಾದ ಟಿಆರ್ಎಫ್ ಹೊತ್ತುಕೊಂಡಿತ್ತು. ಈ ದಾಳಿಗೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರವನ್ನು ನಡೆಸಿದೆ.
ಇದನ್ನು ಓದಿದ್ದೀರಾ? BREAKING NEWS | ‘ತಕ್ಷಣ ಕದನ ವಿರಾಮಕ್ಕೆ ಭಾರತ-ಪಾಕಿಸ್ತಾನ ಒಪ್ಪಿಕೊಂಡಿವೆ’ ಎಂದ ಅಮೆರಿಕ ಅಧ್ಯಕ್ಷ ಟ್ರಂಪ್
ಇದಾದ ಬಳಿಕ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯಲ್ಲಿ ಸಭೆ ನಡೆದಿದೆ. “ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆದ ದೀರ್ಘ ಮಾತುಕತೆ ಬಳಿಕ ಉಭಯ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಎರಡು ದೇಶಕ್ಕೂ ಧನ್ಯವಾದಗಳು” ಎಂದು ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ. ಈ ಬೆನ್ನಲ್ಲೇ ನೆಟ್ಟಿಗರು ‘ವಾರ್ ರುಕ್ವಾ ದೀ ಪಾಪಾ’ ಎಂಬ ಬಿಜೆಪಿ ಜಾಹೀರಾತನ್ನು ಮತ್ತೆ ಗೇಲಿಮಾಡಿದ್ದಾರೆ.
ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ನಿಲ್ಲಿಸಿದರು ಎಂಬ ಬಿಜೆಪಿಯ ಸುಳ್ಳು ಜಾಹೀರಾತು ಭಾರೀ ವೈರಲ್ ಆಗಿತ್ತು. ‘ವಾರ್ ರುಕ್ವಾ ದೀ ಪಾಪಾ’ ಎಂಬ ಸುಳ್ಳು ಜಾಹೀರಾತು ಮೋದಿಯನ್ನು ನಗೆಪಾಟಲಿಗೀಡಾಗಿಸಿತ್ತು. ಇದೀಗ ಅದೇ ಜಾಹೀರಾತು ಮೋದಿಯನ್ನು ಮತ್ತೆ ಕೆದಕಿದೆ. ನಿಜವಾಗಿ ಯುದ್ಧ ನಿಲ್ಲಿಸಿದವರು ಟ್ರಂಪ್ ಎಂದು ನೆಟ್ಟಿಗರು ಹೇಳಿದ್ದಾರೆ.

ನೆಟ್ಟಿಗರು ಹೇಳಿದ್ದು ಏನು?
“ವಾರ್ ರುಕ್ವಾ ದೀ ಪಾಪಾ ಎಂದು ಹೇಳಲು ಇದು ಸರಿಯಾದ ಸಮಯ. ಇದು ಅಮೆರಿಕದ ಶಕ್ತಿ. ಇದಕ್ಕೆ ಶಕ್ತಿ ಎಂದು ಕರೆಯುತ್ತಾರೆ. ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದಾಗ ಇನ್ಮುಂದೆ ಬ್ರಿಕ್ಸ್ (BRICS) ಬೇಡ ಎಂದು ಆದೇಶಿಸಿದರು. ಈಗ ಬ್ರಿಕ್ಸ್ ಇಲ್ಲ. ಇದು ಓರ್ವ ವ್ಯಕ್ತಿಯ ಬಲ” ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ. ಆದರೆ ಬ್ರಿಕ್ಸ್ ಅಂತ್ಯವಾಗಿಲ್ಲ. ಇದು ತಪ್ಪು ಮಾಹಿತಿ. 2025ರ ಜನವರಿಯಲ್ಲಿ BRICSಗೆ ಇಂಡೋನೇಷ್ಯಾ ಸೇರ್ಪಡೆಗೊಂಡಿದ್ದು, ಸದ್ಯ ಹತ್ತು ದೇಶಗಳಿವೆ.
Donald Trump is the real War Rukwa Di Paw Paw guy.
— 👑Che_Krishna🇮🇳💛❤️ (@CheKrishnaCk_) May 10, 2025
#ceasefire#IndianArmy #IndiaPakistanWar pic.twitter.com/7W8T88RVfq
Donald Trump ne war rukwadi papa.#ceasefire #IndiaPakistanConflict pic.twitter.com/CERMymHnMD
— Syed Maqbool (@maqbool_sm) May 10, 2025
This is the perfect moment to say
— Chaos (@FractalsNChaos) May 10, 2025
Paw paw ne war rukwadi..That is the power of America. That is called power.
When Donald Trump came, he took the ordered No more Brics, Brics ended.
Now one call and War over this is Power of one man over every Nation..
Papa : kya hua beta
— Siddhartha shankar bharti (@Siddharthyad16) May 10, 2025
Beta : Donald Trump ne war rukwa di papa pic.twitter.com/RdIIiCRV7Q
#ceasefire
— Sunil Jakhar Jodhpur RJ (@SunilJakhar2525) May 10, 2025
Donald Trump
पाकिस्तान के DGMO
Act of war
America
#IndiaPakisthanWar pic.twitter.com/qR9S0kiB46
ಸದ್ಯ ವಾಟ್ಸಾಪ್, ಇನ್‌ಸ್ಟಾಗ್ರಾಂ, ಟ್ವಿಟ್ಟರ್ ಎಲ್ಲೆಡೆ ಟ್ರಂಪ್ ಟ್ರೋಲ್ ಆಗುತ್ತಿದ್ದಾರೆ. ವಾರ್ ರುಕ್ವಾ ದೀ ಪಾಪಾ ಮತ್ತೆ ಮುನ್ನಲೆಗೆ ಬಂದಿದೆ. ಮೋದಿಯನ್ನು ಗೇಲಿ ಮಾಡಲಾಗುತ್ತಿದೆ.
