ಈ ಕೆಳಗಿನ ಚಿತ್ರ ನೋಡಿ. ಮಹಾರಾಷ್ಟ್ರದಲ್ಲಿ 2019ರ ವಿಧಾನಸಭಾ ಚುನಾವಣೆಯ ದೃಶ್ಯವಿದು. ಯಾವ ರಾಜಕೀಯ ವಿಶ್ಲೇಷಕರೂ ನಿರೀಕ್ಷಿಸದಷ್ಟು ವಿಧಾನಸಭಾ ಕ್ಷೇತ್ರಗಳನ್ನು ಗೆದ್ದುಕೊಂಡ ಶರದ್ ಪವಾರ್, ಆಗ ಹೊಸ ಸರಕಾರ ರಚಿಸುವಲ್ಲಿ King Maker ಆಗಿದ್ದರು!

ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆಯ ಶಿವಸೇನೆ ಮತ್ತು ಸೋನಿಯಾ ಗಾಂಧಿಯವರ ಕಾಂಗ್ರೆಸ್ ಎರಡನ್ನೂ ಮಾತುಕತೆಯ ಟೇಬಲ್ ಮುಂದೆ ಕೂರಿಸಿ ಕಾಮಗಾರ್ ಅಗಾಡಿ ಮೈತ್ರಿಕೂಟವನ್ನು ರಚಿಸಿ ಮಹಾರಾಷ್ಟ್ರದ ಅಧಿಕಾರವನ್ನು ಕೈವಶ ಮಾಡಿಕೊಂಡವರು ಇದೇ ಶರದ್ ಪವಾರ್!
ಈಗ ಅದೇ ರಾಜಕೀಯ ತಂತ್ರಗಾರಿಕೆಯನ್ಬು ಒರಟಾಗಿ ಶರದ್ ಪವಾರ್ ವಿರುದ್ಧ ಪ್ರಯೋಗಿಸಿದ್ದಾರೆ ಬಿಜೆಪಿಯ ನರೇಂದ್ರ ಮೋದಿ ಮತ್ತು ಅಮಿತ್ ಶಾ. ಮೊದಲು ಶಿವಸೇನೆಯನ್ನು ಒಡೆದು ಉದ್ಧವ್ ಠಾಕ್ರೆಯನ್ನೇ ಮನೆಯಿಂದ ಹೊರ ಹಾಕಿದರು.
ಈಗ ಎನ್‌ಸಿಪಿಯಿಂದ ಶರದ್ ಪವಾರ್ ಅವರನ್ನೇ ಹೊರತಳ್ಳುವ ಯತ್ನ ನಡೆದಿದೆ! ಇದೊಂದು ಒರಟು ಪ್ರಯೋಗ. ಯಾಕೆಂದರೆ, ಹಿಂದೆ ಉದ್ಧವ್ ಠಾಕ್ರೆ, ಯಾವ ಪಕ್ಷವನ್ನೂ ಒಡೆದಿರಲಿಲ್ಲ, ಪೂರ್ತಿ ಪಕ್ಷವೇ ಎನ್‌ಸಿಪಿ ಮತ್ತು ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚಿಸಿತ್ತು. ಪ್ರಜಾಪ್ರಭುತ್ವದ ನೇರ ದಾರಿಯದು. ಈಗ ಬಿಜೆಪಿ ನಡೆಸಿರುವುದು ಪ್ರಜಾಪ್ರಭುತ್ವದ ಬಲವಂತದ ಗರ್ಭಪಾತ.
ಶರದ್ ಪವಾರ್ ನೇತೃತ್ವದಲ್ಲಿ ಹಿಂದೆ ಉದ್ದವ್ ಠಾಕ್ರೆ ಸಿಎಂ ಆಗಿ ಸಮ್ಮಿಶ್ರ ಸರಕಾರ ರಚನೆಯಾದಾಗ ನಡೆದ ರಾಜಕೀಯ ಸಮರದ ಹಿಂದೆ ಇದ್ದದ್ದು Maratha Pride Vs Brahmin Pride ಸಿದ್ದಾಂತ. ಈ ಸಿದ್ದಾಂತವನ್ನು ಬುಡಮೇಲು ಮಾಡುವುದು ಮೋದಿ- ಶಾ ಜೋಡಿ ಅಂದುಕೊಂಡಷ್ಟು ಸುಲಭವಲ್ಲ.
ಈ ಸುದ್ದಿ ಓದಿದ್ದೀರಾ? ಶರದ್ ಪವಾರ್‌ಗೆ ಕೈಕೊಟ್ಟು ಮೈತ್ರಿ ಸರ್ಕಾರದಲ್ಲಿ ಡಿಸಿಎಂ ಪಟ್ಟ ಅಲಂಕರಿಸಿದ ಅಜಿತ್ ಪವಾರ್
ಮಹಾರಾಷ್ಟ್ರದಲ್ಲಿ 2024ರ ಲೋಕಸಭಾ ಚುನಾವಣೆಯನ್ನು ಗೆಲ್ಲುವ ಮೋದಿ- ಶಾ ತಂತ್ರವನ್ನು ವಿಫಲಗೊಳಿಸಲು ಶರದ್ ಪವಾರ್‌ಗೆ ಮಾತ್ರ ಸಾಧ್ಯ. ಪವಾರ್ ಮತ್ತೆ ಮರಾಠ ಹೆಮ್ಮೆಯನ್ನು ಉದ್ದೀಪಿಸಿದರೆ ಅದನ್ನು ಯಾವ ಪಕ್ಷಾಂತರದ ಮಳೆಯೂ ತಡೆಯುವುದು ಕಷ್ಟಸಾಧ್ಯ.
ಅದು ಬಿಜೆಪಿಗೂ ಗೊತ್ತಿದೆ. ಕೇಂದ್ರ ಸರಕಾರ ತನ್ನ ಕೈಯಲ್ಲಿದೆ ಎನ್ನುವ ಗರ್ವದಿಂದ ಬಿಜೆಪಿ ಈಗ ಮುಂದಡಿಯಿಟ್ಟಿದೆ. ಆದರೆ ಬಿಜೆಪಿ ಈಗ ಕರ್ನಾಟಕದ ಲೇಟೆಸ್ಟ್ ಮುಖಭಂಗವನ್ನು ಮರೆತಂತಿದೆ.

ಬಿ ಎಂ ಹನೀಫ್
ಹಿರಿಯ ಪತ್ರಕರ್ತ, ಲೇಖಕ
Nice article
thank u sir