ಲೋಕಸಭೆ ಚುನಾವಣೆಯ ಮೊದಲ ಎರಡು ಹಂತಗಳ ಮತದಾನವು ನಡೆದ ಸುಮಾರು 11 ದಿನಗಳ ನಂತರ ಭಾರತೀಯ ಚುನಾವಣಾ ಆಯೋಗ (ಇಸಿಐ) ಅಂತಿಮವಾಗಿ ಮಂಗಳವಾರ ಅಧಿಕೃತ ಒಟ್ಟಾರೆ ಮತದಾನದ ಡೇಟಾ ಬಿಡುಗಡೆ ಮಾಡಿದ್ದು ವಿಳಂಬಕ್ಕೆ ವಿವರಣೆ ನೀಡಲು ವಿಪಕ್ಷಗಳು ಆಗ್ರಹಿಸಿದೆ. ಜೊತೆಗೆ ಮತದಾನ ನಡೆದ ದಿನದಂದು ತಿಳಿಸಿದ ಮತದಾನ ಪ್ರಮಾಣಕ್ಕೂ ಈಗ ಬಿಡುಗಡೆ ಮಾಡಿರುವ ಡೇಟಾದಲ್ಲಿರುವ ಅಂಕಿ ಅಂಶಕ್ಕೂ ಭಾರೀ ವ್ಯತ್ಯಾಸ ಇರುವುದನ್ನು ವಿಪಕ್ಷಗಳು ಬೊಟ್ಟು ಮಾಡಿದೆ.
ಚುನಾವಣಾ ಆಯೋಗದ ಪ್ರಕಾರ ಮೊದಲ ಹಂತದಲ್ಲಿ ಶೇ.66.14ರಷ್ಟು ಮತದಾನವಾಗಿದ್ದರೆ, ಎರಡನೇ ಹಂತದಲ್ಲಿ ಶೇ.66.71ರಷ್ಟು ಮತದಾನವಾಗಿದೆ. ಮೊದಲ ಹಂತಕ್ಕಿಂತ ಕೊಂಚ ಅಧಿಕ ಮತದಾನ ಎರಡನೇ ಹಂತದಲ್ಲಿ ನಡೆದಿದೆ.
ಇದನ್ನು ಓದಿದ್ದೀರಾ? ‘ನೋಟಾ’ಗೆ ಹೆಚ್ಚು ಮತ ಬಂದರೆ ಮುಂದೇನು? ಚುನಾವಣಾ ಆಯೋಗಕ್ಕೆ ಸುಪ್ರೀಂ ನೋಟಿಸ್
ಮೊದಲ ಹಂತದಲ್ಲಿ 102 ಲೋಕಸಭಾ ಕ್ಷೇತ್ರಗಳಲ್ಲಿ ಮತ್ತು ಎರಡನೇ ಹಂತದಲ್ಲಿ 88 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಇನ್ನು 2019 ರ ಮೊದಲ ಹಂತದ ಮತದಾನದಲ್ಲಿ ಶೇಕಡ 69.43ರಷ್ಟು ಮತದಾನವಾಗಿತ್ತು. ಆದರೆ 2024ರ ಲೋಕಸಭೆ ಚುನಾವಣೆಯಲ್ಲಿ ಅದಕ್ಕಿಂತ ಕಡಿಮೆ ಮತದಾನವಾಗಿದೆ.
Finally ECI has put out the final voter turnout figures for the first 2 phases which are substantially, not marginally as is normal, higher than the initial figures.
But why are the absolute numbers of voters in each Parliamentary constituency not put out? Percentages are… pic.twitter.com/WolBmyfnDa— Sitaram Yechury (@SitaramYechury) April 30, 2024
ಮತದಾನದ ಸಂಪೂರ್ಣ ವಿವರ
ಅಧಿಕೃತ ಅಂಕಿಅಂಶಗಳ ಪ್ರಕಾರ, ಮೊದಲ ಹಂತದಲ್ಲಿ ಪುರುಷರು ಶೇಕಡ 66.22, ಮಹಿಳೆಯರು ಶೇಕಡ 66.07 ಮತ್ತು ಲಿಂಗತ್ವ ಅಲ್ಪಸಂಖ್ಯಾತರು ಶೇಕಡ 31.32ರಷ್ಟು ಮತದಾನ ಮಾಡಿದ್ದಾರೆ. ಒಟ್ಟಾರೆಯಾಗಿ ಶೇಕಡ 66.14 ರಷ್ಟು ಮತದಾನವಾಗಿದೆ. ಈ ಹಂತದ ಮತದಾನ ಏಪ್ರಿಲ್ 19 ರಂದು ನಡೆದಿದೆ.,
ಏಪ್ರಿಲ್ 26 ರಂದು ನಡೆದ ಎರಡನೇ ಹಂತದ ಮತದಾನದಲ್ಲಿ ಪುರುಷರು ಶೇಕಡ 66.99, ಮಹಿಳೆಯರು ಶೇಕಡ 66.42 ಮತ್ತು ಲಿಂಗತ್ವ ಅಲ್ಪಸಂಖ್ಯಾತರು ಶೇಕಡ 23.86ರಷ್ಟು ಮತದಾನ ಮಾಡಿದ್ದಾರೆ. ಒಟ್ಟಾರೆ ಶೇಕಡ 66.71ರಷ್ಟು ಮತದಾನವಾಗಿದೆ.
ಬಿಹಾರದಲ್ಲಿ ಮೊದಲ ಹಂತದಲ್ಲಿ ಅತೀ ಕಡಿಮೆ ಮತದಾನವಾಗಿದೆ. ಇಲ್ಲಿ ಶೇಕಡ 49.26ರಷ್ಟು ಮತದಾನವಾಗಿದೆ. ಇನ್ನು ಎರಡನೇ ಹಂತದ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಅತಿ ಕಡಿಮೆ ಮತದಾನವಾಗಿದ್ದು ಶೇಕಡ 55.19ರಷ್ಟು ಮತದಾನವಾಗಿದೆ.
ಇದನ್ನು ಓದಿದ್ದೀರಾ? ಪ್ರಚಾರದ ಸಾಲು ಬದಲಿಸಲು ಹೇಳಿದ ಚುನಾವಣಾ ಆಯೋಗ; ಎಎಪಿ ಆಕ್ರೋಶ
ಮೊದಲ ಹಂತದಲ್ಲಿ ಮತದಾನ ನಡೆದ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದಿದೆ. ಈ ಪೈಕಿ ಅರುಣಾಚಲ ಪ್ರದೇಶ, ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ, ಲಕ್ಷದ್ವೀಪ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್, ಪುದುಚೇರಿ, ತಮಿಳುನಾಡು, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ 11 ರಾಜ್ಯಗಳಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ ಎಂದು ಚುನಾವಣಾ ಆಯೋಗ ಹೇಳಿದೆ.
ಎರಡನೇ ಹಂತದಲ್ಲಿ, 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಚುನಾವಣೆ ನಡೆದಿದೆ. ಅಸ್ಸಾಂ, ಬಿಹಾರ, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಕೇರಳ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಆರು ರಾಜ್ಯದಲ್ಲಿ ಅಧಿಕ ಮಹಿಳೆಯರು ಮತದಾನ ಮಾಡಿದ್ದಾರೆ.
I’m talking of absolute number of registered voters in each constituency not the number of polled votes which will be known only after postal ballots are counted.
Why is the total number of voters in each constituency not being put out?
ECI must answer. pic.twitter.com/cWIBjQXjQv— Sitaram Yechury (@SitaramYechury) April 30, 2024
ವಿಳಂಬಕ್ಕೆ ವಿವರಣೆ ನೀಡಲು ವಿಪಕ್ಷಗಳ ಆಗ್ರಹ
ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, “ಮೊದಲ ಬಾರಿಗೆ, ಮೊದಲ ಹಂತದ ಮತದಾನ ನಡೆದು 11 ದಿನವಾದರೂ ಮತ್ತು ಎರಡನೇ ಹಂತದ ಮತದಾನ ನಡೆದು ನಾಲ್ಕು ದಿನವಾದರೂ ಚುನಾವಣಾ ಆಯೋಗ ಅಂತಿಮ ಮತದಾರರ ಡೇಟಾ ಪ್ರಕಟಿಸಿಲ್ಲ. ಈ ಹಿಂದೆ ಮತದಾನವಾದ ಕೂಡಲೇ ಅಥವಾ 24 ಗಂಟೆಗಳ ಒಳಗೆ ಅಂತಿಮ ಮತದಾರರ ಮತದಾನವನ್ನು ಪ್ರಕಟಿಸಲಾಗುತ್ತಿತ್ತು” ಎಂದು ಹೇಳಿದ್ದಾರೆ.
ಇನ್ನು ಸಿಪಿಐ(ಎಂ) ನಾಯಕ ಸೀತಾರಾಂ ಯೆಚೂರಿ ಎಕ್ಸ್ ಪೋಸ್ಟ್ ಮಾಡಿದ್ದು, “ಅಂತಿಮವಾಗಿ, ಇಸಿಐ ಮೊದಲ 2 ಹಂತಗಳ ಅಂತಿಮ ಮತದಾರರ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಇದು ಆರಂಭಿಕ ಅಂಕಿಅಂಶಗಳಿಗಿಂತ ಗಣನೀಯವಾಗಿ ಹೆಚ್ಚಾಗಿದೆ. ಆದರೆ ಪ್ರತಿ ಸಂಸದೀಯ ಕ್ಷೇತ್ರದ ಮತದಾರರ ಸಂಪೂರ್ಣ ಸಂಖ್ಯೆಯನ್ನು ಏಕೆ ಒದಗಿಸಿಲ್ಲ” ಎಂದು ಪ್ರಶ್ನಿಸಿದ್ದಾರೆ.
“ಎಣಿಕೆಯ ಸಮಯದಲ್ಲಿ ಒಟ್ಟು ಮತದಾರರ ಸಂಖ್ಯೆಯನ್ನು ಬದಲಾಯಿಸಬಹುದು. ಆದ್ದರಿಂದ ಫಲಿತಾಂಶಗಳನ್ನು ಮ್ಯಾನಿಪುಲೇಟ್ ಮಾಡುವ ಆತಂಕವಿದೆ. 2014ರವರೆಗೆ ಪ್ರತಿ ಕ್ಷೇತ್ರದಲ್ಲಿನ ಒಟ್ಟು ಮತದಾರರ ಸಂಖ್ಯೆ ಯಾವಾಗಲೂ ಇಸಿಐ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತಿತ್ತು. ಇಸಿಐ ಪಾದರ್ಶಕವಾಗಿರಬೇಕು, ಎಲ್ಲಾ ಡೇಟಾವನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು” ಎಂದು ಆಗ್ರಹಿಸಿದ್ದಾರೆ.
𝐓𝐡𝐞𝐫𝐞’𝐬 𝐢𝐬 𝐬𝐨𝐦𝐞𝐭𝐡𝐢𝐧𝐠 𝐯𝐞𝐫𝐲 𝐦𝐲𝐬𝐭𝐞𝐫𝐢𝐨𝐮𝐬 𝐠𝐨𝐢𝐧𝐠 𝐨𝐧 𝐰𝐢𝐭𝐡 𝐞𝐥𝐞𝐜𝐭𝐢𝐨𝐧 𝐧𝐮𝐦𝐛𝐞𝐫𝐬.
After a grand total of 4 days after polling, ECI released the turnout numbers for Phases 1 & 2 yesterday. This was also after a news report came in the… pic.twitter.com/7s1lvtiBbq
— Saket Gokhale MP (@SaketGokhale) May 1, 2024
ಇನ್ನು ಮತದಾನದ ಡೇಟಾ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಸಂಸದ ಸಾಕೇತ್ ಗೋಖಲೆ, “ಚುನಾವಣಾ ಡೇಟಾದಲ್ಲಿ ಏನೋ ರಹಸ್ಯ ಕಂಡು ಬರುತ್ತಿದೆ. ನಮ್ಮಲ್ಲಿ ಮತದಾನದ ಒಟ್ಟು 4 ದಿನಗಳ ನಂತರ ಇಸಿಐ ನಿನ್ನೆ 1 ಮತ್ತು 2 ನೇ ಹಂತದ ಮತದಾನದ ಡೇಟಾವನ್ನು ಬಿಡುಗಡೆ ಮಾಡಿದೆ. ಅದು ಕೂಡಾ ಡೇಟಾ ತಡವಾದುದನ್ನು ಪ್ರಶ್ನಿಸಿ ಬೆಳಿಗ್ಗೆ ಸುದ್ದಿ ವರದಿ ಬಂದ ನಂತರ ಮಾಹಿತಿ ಪ್ರಕಟಿಸಲಾಗಿದೆ” ಎಂದು ಹೇಳಿದ್ದಾರೆ.
“ಆಶ್ಚರ್ಯವೆಂದರೆ ಇಸಿಐ ಕೆಲವು ಮೂಲಭೂತ ವಿವರಗಳನ್ನು ನೀಡಿಲ್ಲ. ಅರ್ಹ ಮತದಾರರ ಸಂಖ್ಯೆ ನೀಡಿಲ್ಲ. ಮತಗಳ ಸಂಖ್ಯೆಯನ್ನೂ ನೀಡಿಲ್ಲ. ಮತದಾನದ ಶೇಕಡಾವಾರು ಮಾಹಿತಿ ನೀಡಿದ್ದಾರೆ. ಆದರೆ ನಿಜವಾದ ಸಂಖ್ಯೆಯ ವಿವರ ನೀಡಿಲ್ಲ. ಬರೀ ಶೇಕಡವಾರು ಮಾಹಿತಿ ನೀಡಿ ನಾಲ್ಕು ದಿನಗಳು ಏಕೆ ಬೇಕಾಗಿದೆ? ಶೇಕಡವಾರು ಡೇಟಾ ಮಾತ್ರವಲ್ಲದೆ ಇತರೆ ವಿವರಗಳನ್ನು ಇಸಿಯ ಏಕೆ ಬಿಡುಗಡೆ ಮಾಡಿಲ್ಲ” ಎಂದು ಪ್ರಶ್ನಿಸಿದ್ದಾರೆ.
“ನಾನು ಇಂದು (ತಿಂಗಳ ನಂತರ) ಆರ್‌ಟಿಐ ಅರ್ಜಿಯನ್ನು ಸಲ್ಲಿಸಿದ್ದೇವೆ. ದಯೆಯಿಂದ ತಕ್ಷಣ ಡೇಟಾವನ್ನು ಒದಗಿಸುವಂತೆ ನಾನು ಇಸಿಐಗೆ ವಿನಂತಿಸುತ್ತೇನೆ. ಮುಕ್ತ, ನ್ಯಾಯೋಚಿತ ಮತ್ತು ತಟಸ್ಥ ಚುನಾವಣೆಗಳು ನಡೆಯುವುದು ಅಂಪೈರ್‌ನಂತೆ ಕಾರ್ಯನಿರ್ವಹಿಸುವವರ ಮೇಲೆ ಅವಲಂಬಿತ. ಪಾರದರ್ಶಕತೆ ಇಲ್ಲದಿದ್ದರೆ ದೊಡ್ಡ ಪ್ರಶ್ನೆಯೇ ಕಾಡುತ್ತದೆ” ಎಂದು ಹೇಳಿದ್ದಾರೆ.