ರಾಜ್ಯದಲ್ಲಿ ಪ್ರಸ್ತುತ ಆಡಳಿತದ ಚುಕ್ಕಾಣಿಯನ್ನು ಹಿಡಿದಿರುವ ಕಾಂಗ್ರೆಸ್ 2023ರ ವಿಧಾನಸಭೆ ಚುನಾವಣೆಗೂ ಮುನ್ನ ನೀಡಿದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದು, ಬಹುತೇಕರಿಗೆ ಇದರ ಲಾಭ ದೊರೆಯುತ್ತಿದೆ. ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಈ ಗ್ಯಾರಂಟಿ ಯೋಜನೆಯು ಕಾಂಗ್ರೆಸ್‌ನ ‘ಕೈ’ ಹಿಡಿಯುವ ನಿರೀಕ್ಷೆಯಿದೆ.
ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡುವ ಶಕ್ತಿ ಯೋಜನೆ, ಮಹಿಳೆಯರಿಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆ, ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆ, ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆಯನ್ನು ನೀಡುವ ಯುವನಿಧಿ ಯೋಜನೆ, 5 ಕೆಜಿ ಅಕ್ಕಿ ಮತ್ತು ಐದು ಕೆಜಿ ಅಕ್ಕಿಯ ಬದಲಾಗಿ ಹಣವನ್ನು ನೀಡುವ ಅನ್ನಭಾಗ್ಯ ಯೋಜನೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರವು ಜಾರಿಗೊಳಿಸಿದೆ.
ರಾಜಕೀಯಕ್ಕಾಗಿ ಬಿಜೆಪಿಯವರು ಕಾಂಗ್ರೆಸ್ ಗ್ಯಾರಂಟಿಗಳನ್ನು ಟೀಕಿಸುತ್ತಿದ್ದಾರೆ. ಆದರೆ ʼಈ ದಿನ.ಕಾಮ್ʼ ನಡೆಸಿದ ಸಮೀಕ್ಷೆಯಲ್ಲಿ ಗ್ಯಾರಂಟಿ ಯೋಜನೆಯ ಬಗ್ಗೆ ಜನ ಕೃತಜ್ಞತೆಯಿಂದ ಮಾತನಾಡಿದ್ದಾರೆ. ಂಹಿಳೆಯರಿಗೆ ಮನೆ ನಡೆಸಲು ಸಹಾಯ ಮಾಡಿದ ಕಾಂಗ್ರೆಸ್‌ಗೆ ತಮ್ಮ ಮತ ಎಂದು ಸಾರಿ ಹೇಳಿದ್ದಾರೆ.
ಕರ್ನಾಟಕ ಸರ್ಕಾರ 5 ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಈ ಗ್ಯಾರಂಟಿ ಯೋಜನೆಗಳನ್ನು ಬೆಂಬಲಿಸಿ ನೀವು ಕಾಂಗ್ರೆಸ್‌ಗೆ ಓಟು ಹಾಕುತ್ತೀರಾ ಎಂದು ಈ ದಿನ ಸಮೀಕ್ಷೆಯಲ್ಲಿ ಕೇಳಲಾಗಿದ್ದು, ಅಂತಿಮ ಸಮೀಕ್ಷೆಯಲ್ಲಿ ಒಟ್ಟು ಪ್ರತಿಕ್ರಿಯಿಸಿದವರಲ್ಲಿ ಶೇಕಡ 52.28 ಮಂದಿ ಹೌದು ಎಂದಿದ್ದಾರೆ. ಶೇಕಡ 35.26 ರಷ್ಟು ಮಂದಿ ಇಲ್ಲ ಮತ್ತು ಶೇಕಡ 12.46ರಷ್ಟು ಜನರು ಗೊತ್ತಿಲ್ಲ ಅಥವಾ ಹೇಳುವುದಿಲ್ಲ ಎಂದು ಹೇಳಿದ್ದಾರೆ. ಒಟ್ಟಾರೆಯಾಗಿ ಗ್ಯಾರಂಟಿಯಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲೆ ಒಲವು ಅಧಿಕವಾಗಿದೆ ಎಂದು ಸಮೀಕ್ಷೆ ಹೇಳುತ್ತದೆ.
ಲಿಂಗವಾರು ವಿವರ
ಗ್ಯಾರಂಟಿ ಯೋಜನೆಗಳನ್ನು ಬೆಂಬಲಿಸಿ ಕಾಂಗ್ರೆಸ್‌ಗೆ ಮತ ಹಾಕುತ್ತೀರಾ ಎಂದು ಪುರುಷರಲ್ಲಿ ಕೇಳಿದಾಗ ಶೇಕಡ 48.6ರಷ್ಟು ಜನರು ಹೌದು ಎಂದು ಹೇಳಿದರೆ, ಶೇಕಡ 39.16ರಷ್ಟು ಜನರು ಇಲ್ಲ ಎಂದು ಹೇಳಿದರೆ, ಶೇಕಡ 12.24ರಷ್ಟು ಜನರು ಗೊತ್ತಿಲ್ಲ-ಹೇಳುವುದಿಲ್ಲ ಎಂದಿದ್ದಾರೆ.
ಗ್ಯಾರಂಟಿ ಯೋಜನೆಗಳನ್ನು ಬೆಂಬಲಿಸಿ ಕಾಂಗ್ರೆಸ್‌ಗೆ ಮತ ಹಾಕುತ್ತೀರಾ ಎಂದು ಮಹಿಳೆಯರಲ್ಲಿ ಕೇಳಿದಾಗ ಶೇಕಡ 56.58ರಷ್ಟು ಜನರು ಹೌದು ಎಂದು ಹೇಳಿದರೆ, ಶೇಕಡ 30.7ರಷ್ಟು ಜನರು ಇಲ್ಲ ಎಂದು ಹೇಳಿದರೆ, ಶೇಕಡ 12.72ರಷ್ಟು ಜನರು ಗೊತ್ತಿಲ್ಲ-ಹೇಳುವುದಿಲ್ಲ ಎಂದಿದ್ದಾರೆ.
ಇನ್ನು ಇತರೆಯಲ್ಲಿ ಶೇಕಡ 63.16ರಷ್ಟು ಜನರು ಹೌದು ಎಂದು ಹೇಳಿದರೆ, ಶೇಕಡ 21.05ರಷ್ಟು ಜನರು ಇಲ್ಲ ಎಂದು ಹೇಳಿದರೆ, ಶೇಕಡ 15.79ರಷ್ಟು ಜನರು ಗೊತ್ತಿಲ್ಲ-ಹೇಳುವುದಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾಗಿ ಮೂರು ಯೋಜನೆಗಳು ಅನ್ನಭಾಗ್ಯ, ಗೃಹಲಕ್ಷ್ಮೀ, ಶಕ್ತಿ ಯೋಜನೆಗಳು ಮಹಿಳೆಯರನ್ನು ಕೇಂದ್ರಿಕರಿಸಿದೆ. ಈ ದಿನ ಸಮೀಕ್ಷೆಯನ್ನು ನೋಡಿದಾಗ ಈ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್‌ಗೆ ಮಹಿಳೆಯರ ಮತವನ್ನು ಹೆಚ್ಚಿಸುವ ನಿರೀಕ್ಷೆಯಿದೆ.
ವಯೋಮಾನವಾರು ವಿವರ
ಗ್ಯಾರಂಟಿ ಯೋಜನೆಗಳನ್ನು ಬೆಂಬಲಿಸಿ ನೀವು ಕಾಂಗ್ರೆಸ್‌ಗೆ ಓಟು ಹಾಕುತ್ತೀರಾ ಎಂಬ ಪ್ರಶ್ನೆಗೆ 18ರಿಂದ 25 ವಯೋಮಾನದ ಶೇಕಡ 49.18 ಮಂದಿ ಹೌದು ಎಂದರೆ, ಶೇಕಡ 37.74ರಷ್ಟು ಜನರು ಇಲ್ಲ ಎಂದಿದ್ದಾರೆ. ಇನ್ನು ಶೇಕಡ 13.08ರಷ್ಟು ಜನರು ಗೊತ್ತಿಲ್ಲ ಅಥವಾ ಹೇಳುವುದಿಲ್ಲ ಎಂದಿದ್ದಾರೆ.
25-35 ವಯೋಮಾನದ ಶೇಕಡ 51.58 ಮಂದಿ ಹೌದು ಎಂದರೆ, ಶೇಕಡ 36.02ರಷ್ಟು ಜನರು ಇಲ್ಲ ಎಂದಿದ್ದಾರೆ. ಇನ್ನು ಶೇಕಡ 12.39ರಷ್ಟು ಜನರು ಗೊತ್ತಿಲ್ಲ ಅಥವಾ ಹೇಳುವುದಿಲ್ಲ ಎಂದು ತಿಳಿಸಿದ್ದಾರೆ.
35-45 ವಯೋಮಾನದ ಶೇಕಡ 52.7 ಮಂದಿ ಹೌದು ಎಂದರೆ, ಶೇಕಡ 35.34ರಷ್ಟು ಜನರು ಇಲ್ಲ ಎಂದಿದ್ದಾರೆ. ಇನ್ನು ಶೇಕಡ 11.96ರಷ್ಟು ಜನರು ಗೊತ್ತಿಲ್ಲ ಅಥವಾ ಹೇಳುವುದಿಲ್ಲ ಎಂದಿದ್ದಾರೆ.
45-55 ವಯೋಮಾನದ ಶೇಕಡ 52.22 ಮಂದಿ ಹೌದು ಎಂದರೆ, ಶೇಕಡ 35.67ರಷ್ಟು ಜನರು ಇಲ್ಲ ಎಂದಿದ್ದಾರೆ. ಇನ್ನು ಶೇಕಡ 12.11ರಷ್ಟು ಜನರು ಹೇಳುವುದಿಲ್ಲ ಅಥವಾ ಗೊತ್ತಿಲ್ಲ ಎಂದು ಹೇಳಿದ್ದಾರೆ.
55-70 ವಯೋಮಾನದ ಶೇಕಡ 53.77 ಮಂದಿ ಹೌದು ಎಂದರೆ, ಶೇಕಡ 33.57ರಷ್ಟು ಜನರು ಇಲ್ಲ ಎಂದಿದ್ದಾರೆ. ಇನ್ನು ಶೇಕಡ 12.66ರಷ್ಟು ಜನರು ಗೊತ್ತಿಲ್ಲ ಅಥವಾ ಹೇಳುವುದಿಲ್ಲ ಎಂದಿದ್ದಾರೆ.
70-100 ವಯೋಮಾನದ ಶೇಕಡ 54.3 ಮಂದಿ ಹೌದು ಎಂದರೆ, ಶೇಕಡ 30.58ರಷ್ಟು ಜನರು ಇಲ್ಲ ಎಂದಿದ್ದಾರೆ. ಇನ್ನು ಶೇಕಡ 15.12ರಷ್ಟು ಜನರು ಹೇಳುವುದಿಲ್ಲ ಅಥವಾ ಗೊತ್ತಿಲ್ಲ ಎಂದು ಹೇಳಿದ್ದಾರೆ.
ವಯೋಮಾನದ ಆಧಾರದಲ್ಲಿ ನೋಡಿದರೆ ಬಹುತೇಕ ಎಲ್ಲ ವಯೋಮಾನದವರಲ್ಲೂ ಶೇಕಡ 50ಕ್ಕಿಂತ ಅಧಿಕ ಮಂದಿಗೆ ಗ್ಯಾರಂಟಿಯ ಪ್ರಯೋಜನವಾಗುತ್ತಿದೆ ಎಂದು ತಿಳಿದು ಬರುತ್ತದೆ.
ಉದ್ಯೋಗವಾರು ವಿವರ
ಗ್ಯಾರಂಟಿ ಯೋಜನೆಗಳನ್ನು ಬೆಂಬಲಿಸಿ ಕಾಂಗ್ರೆಸ್‌ಗೆ ಮತ ಹಾಕುವಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಿರುದ್ಯೋಗಿ- ಆದಾಯದ ಯಾವುದೇ ಮೂಲಗಳಿಲ್ಲದ ಜನರಲ್ಲಿ ಶೇಕಡ 54.23ರಷ್ಟು ಜನರು ಹೌದು, ಶೇಕಡ 30.92ರಷ್ಟು ಜನರು ಇಲ್ಲ, ಶೇಕಡ 14.85ರಷ್ಟು ಜನರು ಗೊತ್ತಿಲ್ಲ-ಹೇಳುವುದಿಲ್ಲ ಎಂದು ತಿಳಿಸಿದ್ದಾರೆ.
ಕೃಷಿ ಕೂಲಿ ಕಾರ್ಮಿಕ ಅಥವಾ ಇತರ ಕೂಲಿ ಕೆಲಸ ಮಾಡುವವರಲ್ಲಿ ಶೇಕಡ 58.69ರಷ್ಟು ಜನರು ಹೌದು, ಶೇಕಡ 29.7ರಷ್ಟು ಜನರು ಇಲ್ಲ, ಶೇಕಡ 11.62ರಷ್ಟು ಜನರು ಗೊತ್ತಿಲ್ಲ-ಹೇಳುವುದಿಲ್ಲ ಎಂದು ತಿಳಿಸಿದ್ದಾರೆ.
2 ಎಕರೆ ಅಥವಾ ಅದಕ್ಕಿಂತ ಕಡಿಮೆ ಜಮೀನು ಹೊಂದಿರುವ ರೈತರಲ್ಲಿ ಶೇಕಡ 50.02ರಷ್ಟು ಜನರು ಹೌದು, ಶೇಕಡ 35.94ರಷ್ಟು ಜನರು ಇಲ್ಲ, ಶೇಕಡ 14.04ರಷ್ಟು ಜನರು ಹೇಳುವುದಿಲ್ಲ ಅಥವಾ ಗೊತ್ತಿಲ್ಲ ಎಂದು ಹೇಳಿದ್ದಾರೆ.
2 ರಿಂದ 5 ಎಕರೆ ಜಮೀನು ಹೊಂದಿರುವ ರೈತರಲ್ಲಿ ಶೇಕಡ 49.94ರಷ್ಟು ಜನರು ಹೌದು, ಶೇಕಡ 37.71ರಷ್ಟು ಜನರು ಇಲ್ಲ, ಶೇಕಡ 12.35ರಷ್ಟು ಜನರು ಗೊತ್ತಿಲ್ಲ-ಹೇಳುವುದಿಲ್ಲ ಎಂದು ತಿಳಿಸಿದ್ದಾರೆ.
5 ರಿಂದ 10 ಎಕರೆ ಜಮೀನು ಹೊಂದಿರುವ ರೈತರಲ್ಲಿ ಶೇಕಡ 45.67ರಷ್ಟು ಜನರು ಹೌದು, ಶೇಕಡ 42.99ರಷ್ಟು ಜನರು ಇಲ್ಲ, ಶೇಕಡ 11.34ರಷ್ಟು ಜನರು ಗೊತ್ತಿಲ್ಲ-ಹೇಳುವುದಿಲ್ಲ ಎಂದು ತಿಳಿಸಿದ್ದಾರೆ.
10 ಅಥವಾ ಅದಕ್ಕಿಂತ ಹೆಚ್ಚು ಎಕರೆ ಜಮೀನು ಹೊಂದಿರುವ ರೈತರಲ್ಲಿ ಶೇಕಡ 45.87ರಷ್ಟು ಜನರು ಹೌದು, ಶೇಕಡ 40.98ರಷ್ಟು ಜನರು ಇಲ್ಲ, ಶೇಕಡ 13.15ರಷ್ಟು ಜನರು ಹೇಳುವುದಿಲ್ಲ ಅಥವಾ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಸಣ್ಣ ವ್ಯಾಪಾರ/ಸ್ವ ಉದ್ಯೋಗ (ಬೀದಿ ಬದಿ ವ್ಯಾಪಾರಿ, ಸಣ್ಣ ಪೆಟ್ಟಿ ಅಂಗಡಿ, ರಿಕ್ಷಾ ಚಾಲನೆ ಇತ್ಯಾದಿ ತಿಂಗಳ ಆದಾಯ 10 ಸಾವಿರ ಅಥವಾ ಅದಕ್ಕಿಂತ ಕಡಿಮೆ) ಮಾಡುವವರಲ್ಲಿ ಶೇಕಡ 55.88ರಷ್ಟು ಜನರು ಹೌದು, ಶೇಕಡ 32.28ರಷ್ಟು ಜನರು ಇಲ್ಲ, ಶೇಕಡ 11.84ರಷ್ಟು ಜನರು ಗೊತ್ತಿಲ್ಲ-ಹೇಳುವುದಿಲ್ಲ ಎಂದಿದ್ದಾರೆ.
ಮಧ್ಯಮ ಪ್ರಮಾಣದ ವ್ಯಾಪಾರ/ ಸ್ವ ಉದ್ಯೋಗ (ಅಂಗಡಿ, ಮೆಕ್ಯಾನಿಕ್ , ಆಟೊ ಚಾಲನೆ, ಊಬರ್, ಸ್ವಿಗಿ ಇತ್ಯಾದಿ 10 ರಿಂದ 25 ಸಾವಿರ ತಿಂಗಳ ಆದಾಯ) ಮಾಡುವವರಲ್ಲಿ ಶೇಕಡ 50.41ರಷ್ಟು ಜನರು ಹೌದು, ಶೇಕಡ 38.8ರಷ್ಟು ಜನರು ಇಲ್ಲ, ಶೇಕಡ 10.79ರಷ್ಟು ಜನರು ಗೊತ್ತಿಲ್ಲ-ಹೇಳುವುದಿಲ್ಲ ಎಂದಿದ್ದಾರೆ.
ದೊಡ್ಡ ವ್ಯಾಪಾರ/ ಸ್ವ ಉದ್ಯೋಗ ಹೊಂದಿರುವ ವೃತ್ತಿಪರರ ಪೈಕಿ (ದೊಡ್ಡ ಅಂಗಡಿ, ಡಾಕ್ಟರ್, ವಕೀಲ ಇತ್ಯಾದಿ, ತಿಂಗಳ ಆದಾಯ 25 ಸಾವಿರಕ್ಕೂ ಹೆಚ್ಚು) ಶೇಕಡ 48.28ರಷ್ಟು ಜನರು ಹೌದು, ಶೇಕಡ 42.85ರಷ್ಟು ಜನರು ಇಲ್ಲ, ಶೇಕಡ 8.87ರಷ್ಟು ಜನರು ಗೊತ್ತಿಲ್ಲ-ಹೇಳುವುದಿಲ್ಲ ಎಂದಿದ್ದಾರೆ.
ದೊಡ್ಡ ವ್ಯಾಪಾರ/ ಸ್ವ ಉದ್ಯೋಗ ಹೊಂದಿರುವ ವೃತ್ತಿಪರರ ಪೈಕಿ (ದೊಡ್ಡ ಅಂಗಡಿ, ಡಾಕ್ಟರ್, ವಕೀಲ ಇತ್ಯಾದಿ, ತಿಂಗಳ ಆದಾಯ 50 ಸಾವಿರಕ್ಕೂ ಹೆಚ್ಚು) ಶೇಕಡ 42.03ರಷ್ಟು ಜನರು ಹೌದು, ಶೇಕಡ 47.39ರಷ್ಟು ಜನರು ಇಲ್ಲ, ಶೇಕಡ 10.58ರಷ್ಟು ಜನರು ಹೇಳುವುದಿಲ್ಲ ಅಥವಾ ಗೊತ್ತಿಲ್ಲ ಎಂದು ಹೇಳಿದ್ದಾರೆ.
ದೊಡ್ಡ ವ್ಯಾಪಾರ/ ಸ್ವ ಉದ್ಯೋಗ ಹೊಂದಿರುವ ವೃತ್ತಿಪರರ ಪೈಕಿ (ದೊಡ್ಡ ಅಂಗಡಿ, ಡಾಕ್ಟರ್, ವಕೀಲ ಇತ್ಯಾದಿ, ತಿಂಗಳ ಆದಾಯ 1 ಲಕ್ಷಕ್ಕಿಂತ ಹೆಚ್ಚು) ಶೇಕಡ 43.72ರಷ್ಟು ಜನರು ಹೌದು, ಶೇಕಡ 46.51ರಷ್ಟು ಜನರು ಇಲ್ಲ, ಶೇಕಡ 9.77ರಷ್ಟು ಜನರು ಗೊತ್ತಿಲ್ಲ-ಹೇಳುವುದಿಲ್ಲ ಎಂದಿದ್ದಾರೆ.
ಪ್ರತಿ ತಿಂಗಳು ನಿಗದಿತ ಸಂಬಳವಿರುವ ಉದ್ಯೋಗ ಹೊಂದಿರುವವರಲ್ಲಿ (ಸರಕಾರಿ ಅಥವಾ ಖಾಸಗಿ, ಸಂಬಳ 10 ಸಾವಿರಕ್ಕಿಂತಲೂ ಕಡಿಮೆ) ಶೇಕಡ 49.59ರಷ್ಟು ಜನರು ಹೌದು, ಶೇಕಡ 36.65ರಷ್ಟು ಜನರು ಇಲ್ಲ, ಶೇಕಡ 13.76ರಷ್ಟು ಜನರು ಗೊತ್ತಿಲ್ಲ-ಹೇಳುವುದಿಲ್ಲ ಎಂದಿದ್ದಾರೆ.
ಪ್ರತಿ ತಿಂಗಳು ನಿಗದಿತ ಸಂಬಳವಿರುವ ಉದ್ಯೋಗ ಹೊಂದಿರುವವರಲ್ಲಿ (ಸರಕಾರಿ ಅಥವಾ ಖಾಸಗಿ, ಸಂಬಳ 10 ರಿಂದ 25 ಸಾವಿರ) ಶೇಕಡ 45.06ರಷ್ಟು ಜನರು ಹೌದು, ಶೇಕಡೆ 40.76ರಷ್ಟು ಜನರು ಇಲ್ಲ, ಶೇಕಡ 14.18ರಷ್ಟು ಜನರು ಹೇಳುವುದಿಲ್ಲ ಅಥವಾ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಪ್ರತಿ ತಿಂಗಳು ನಿಗದಿತ ಸಂಬಳವಿರುವ ಉದ್ಯೋಗ ಮಾಡುವವರು (ಸರಕಾರಿ ಅಥವಾ ಖಾಸಗಿ, ಸಂಬಳ 50 ಸಾವಿರಕ್ಕೂ ಹೆಚ್ಚು) ಶೇಕಡ 34.17ರಷ್ಟು ಜನರು ಹೌದು, ಶೇಕಡೆ 54.72ರಷ್ಟು ಜನರು ಇಲ್ಲ, ಶೇಕಡ 11.11ರಷ್ಟು ಜನರು ಗೊತ್ತಿಲ್ಲ-ಹೇಳುವುದಿಲ್ಲ ಎಂದಿದ್ದಾರೆ.
ಪ್ರತಿ ತಿಂಗಳು ನಿಗದಿತ ಸಂಬಳವಿರುವ ಉದ್ಯೋಗ ಮಾಡುವವರು (ಸರಕಾರಿ ಅಥವಾ ಖಾಸಗಿ, ಸಂಬಳ 1ಲಕ್ಷಕ್ಕೂ ಹೆಚ್ಚು) ಶೇಕಡ 35.64ರಷ್ಟು ಜನರು ಹೌದು, ಶೇಕಡ 54.46ರಷ್ಟು ಜನರು ಇಲ್ಲ, ಶೇಕಡ 9.9ರಷ್ಟು ಜನರು ಹೇಳುವುದಿಲ್ಲ ಅಥವಾ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಇತರೆ ಉದ್ಯೋಗ ಅಥವಾ ವ್ಯಾಪಾರ ಮಾಡುವವರ ಪೈಕಿ ಶೇಕಡ 35.64ರಷ್ಟು ಜನರು ಹೌದು, ಶೇಕಡ 54.46ರಷ್ಟು ಜನರು ಇಲ್ಲ, ಶೇಕಡ 9.9ರಷ್ಟು ಜನರು ಗೊತ್ತಿಲ್ಲ-ಹೇಳುವುದಿಲ್ಲ ಎಂದಿದ್ದಾರೆ.
ಆದಾಯದ ಆಧಾರದಲ್ಲಿ ನಾವು ನೋಡಿದಾಗ ಹೆಚ್ಚಾಗಿ ಕಡಿಮೆ, ಮಧ್ಯಮ ಆದಾಯ ಹೊಂದಿರುವವರು ಹೆಚ್ಚಾಗಿ ಗ್ಯಾರಂಟಿ ಲಾಭ ಪಡೆದು ಈಗ ಕಾಂಗ್ರೆಸ್‌ಗೆ ಮತ ಹಾಕುವ ಮನಸ್ಸು ಮಾಡಿದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿದುಬರುತ್ತದೆ.
ಶೈಕ್ಷಣಿಕ ವಿವರ
ಗ್ಯಾರಂಟಿ ಯೋಜನೆಗಳನ್ನು ಬೆಂಬಲಿಸಿ ಕಾಂಗ್ರೆಸ್‌ಗೆ ಮತ ಹಾಕುವಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅನಕ್ಷರಸ್ಥ-ಶಾಲೆಗೆ ಹೋಗದವರಲ್ಲಿ ಶೇಕಡ 60.29ರಷ್ಟು ಜನರು ಹೌದು, ಶೇಕಡ 26.29ರಷ್ಟು ಜನರು ಇಲ್ಲ, ಶೇಕಡ 13.42ರಷ್ಟು ಜನರು ಗೊತ್ತಿಲ್ಲ-ಹೇಳುವುದಿಲ್ಲ ಎಂದಿದ್ದಾರೆ.
7ನೇ ತರಗತಿಯ ತನಕ, ಆದರೆ 7ನೇ ತರಗತಿ ತೇರ್ಗಡೆಯಾಗದವರಲ್ಲಿ ಶೇಕಡ 54.91ರಷ್ಟು ಜನರು ಹೌದು, ಶೇಕಡ 33.11ರಷ್ಟು ಜನರು ಇಲ್ಲ, ಶೇಕಡ 11.98ರಷ್ಟು ಜನರು ಹೇಳುವುದಿಲ್ಲ ಅಥವಾ ಗೊತ್ತಿಲ್ಲ ಎಂದು ಹೇಳಿದ್ದಾರೆ.
7ನೇ ತರಗತಿ ಪಾಸ್ ಆಗಿದ್ದು, 10ನೇ ತರಗತಿ ಪಾಸ್ ಆಗದವರ ಪೈಕಿ ಶೇಕಡ 53.74ರಷ್ಟು ಜನರು ಹೌದು, ಶೇಕಡ 34.25ರಷ್ಟು ಜನರು ಇಲ್ಲ, ಶೇಕಡ 12.01ರಷ್ಟು ಜನರು ಗೊತ್ತಿಲ್ಲ-ಹೇಳುವುದಿಲ್ಲ ಎಂದಿದ್ದಾರೆ.
10ನೇ ತರಗತಿ ಪಾಸ್ ಆಗಿದೆ, ಆದರೆ ಪಿ.ಯು.ಸಿ ಪಾಸ್ ಆಗದವರ ಪೈಕಿ ಶೇಕಡ 50.73ರಷ್ಟು ಜನರು ಹೌದು, ಶೇಕಡ 37.3ರಷ್ಟು ಜನರು ಇಲ್ಲ, ಶೇಕಡ 11.97ರಷ್ಟು ಜನರು ಹೇಳುವುದಿಲ್ಲ ಅಥವಾ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಪಿ.ಯು.ಸಿ /ಐ.ಟಿ.ಐ/ಡಿಪ್ಲೋಮ ಆಗಿದೆ, ಆದರೆ ಪದವಿ ಕಾಲೇಜಿಗೆ ಹೋಗದವರ ಪೈಕಿ ಶೇಕಡ 47.23ರಷ್ಟು ಜನರು ಹೌದು, ಶೇಕಡ 40.61ರಷ್ಟು ಜನರು ಇಲ್ಲ, ಶೇಕಡ 12.16ರಷ್ಟು ಜನರು ಗೊತ್ತಿಲ್ಲ-ಹೇಳುವುದಿಲ್ಲ ಎಂದಿದ್ದಾರೆ.
ಪದವಿಧರೆ/ರ ಪೈಕಿ (ಬಿಎ, ಬಿಎಸ್ಸಿ, ಬಿಕಾಂ ಇತ್ಯಾದಿ) ಶೇಕಡ 40.95ರಷ್ಟು ಜನರು ಹೌದು, ಶೇಕಡ 47.16ರಷ್ಟು ಜನರು ಇಲ್ಲ, ಶೇಕಡ 11.88ರಷ್ಟು ಜನರು ಹೇಳುವುದಿಲ್ಲ ಅಥವಾ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಸ್ನಾತಕೋತ್ತರ ಪದವಿ ಪಡೆದವರಲ್ಲಿ (ಎಂಎ, ಎಂಎಸ್ಸಿ, ಎಂಕಾಂ ಇತ್ಯಾದಿ) ಶೇಕಡ 38.92ರಷ್ಟು ಜನರು ಹೌದು, ಶೇಕಡ 47.48ರಷ್ಟು ಜನರು ಇಲ್ಲ, ಶೇಕಡ 13.6ರಷ್ಟು ಜನರು ಗೊತ್ತಿಲ್ಲ-ಹೇಳುವುದಿಲ್ಲ ಎಂದಿದ್ದಾರೆ.
ವೃತ್ತಿಪರ ಪದವಿ ಮಾಡಿದವರಲ್ಲಿ (ಬಿಟೆಕ್, ಎಂಬಿಬಿಎಸ್, ಬಿಎಎಂಎಸ್, ಎಲ್ಎಲ್ ಬಿ, ಪಿಎಚ್‌ಡಿ) ಶೇಕಡ 34.62ರಷ್ಟು ಜನರು ಹೌದು, ಶೇಕಡ 48.46ರಷ್ಟು ಜನರು ಇಲ್ಲ, ಶೇಕಡ 16.92ರಷ್ಟು ಜನರು ಹೇಳುವುದಿಲ್ಲ ಅಥವಾ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಈದಿನ ಸಮೀಕ್ಷೆ ನೋಡಿದಾಗ ಕಡಿಮೆ ವಿದ್ಯಾಭ್ಯಾಸ ಇರುವವರು ಹೆಚ್ಚಾಗಿ ಗ್ಯಾರಂಟಿ ಲಾಭ ಪಡೆಯುತ್ತಿದ್ದು, ಇದರಿಂದಾಗಿ ಕಾಂಗ್ರೆಸ್‌ನತ್ತ ಒಲವು ತೋರಿದಂತೆ ಕಾಣುತ್ತದೆ. ಇನ್ನು ಎಂಎ, ಎಂಎಸ್ಸಿ, ಎಂಕಾಂ, ಬಿಟೆಕ್, ಎಂಬಿಬಿಎಸ್, ಬಿಎಎಂಎಸ್, ಎಲ್ಎಲ್ ಬಿ, ಪಿಎಚ್‌ಡಿ, ಇತ್ಯಾದಿ ಮಾಡಿದವರು ಗ್ಯಾರಂಟಿಯ ಬಗ್ಗೆ ಹೆಚ್ಚಿನ ಒಲವು ಹೊಂದಿಲ್ಲ ಎನಿಸುತ್ತದೆ.
ಕಾಂಗ್ರೆಸ್ ಕೈ ಹಿಡಿಯುತ್ತಾ ಗ್ಯಾರಂಟಿ?
ಕಾಂಗ್ರೆಸ್‌ನ ಪ್ರಮುಖ ಐದೂ ಗ್ಯಾರಂಟಿಗಳು ಪ್ರಮುಖವಾಗಿ ಮಹಿಳೆಯರನ್ನು ಕೇಂದ್ರೀಕರಿಸಿದೆ. ಹೆಚ್ಚಾಗಿ ಅತೀ ಕಡಿಮೆ ಓದಿದ ಮಹಿಳೆಯರು ಗ್ಯಾರಂಟಿ ಕಾರಣದಿಂದಾಗಿಯೇ ಕಾಂಗ್ರೆಸ್‌ಗೆ ಮತ ಹಾಕಲು ಮುಂದಾಗಿರುವುದು ಕಂಡು ಬರುತ್ತದೆ. ಅದರಲ್ಲೂ 55ರಿಂದ 57 ವಯಸ್ಸಿನ ಮಹಿಳೆಯರಲ್ಲಿ ಬರೋಬ್ಬರಿ ಶೇಕಡ 59.2ರಷ್ಟು ಮಂದಿ ಕಾಂಗ್ರೆಸ್‌ಗೆ ಗ್ಯಾರಂಟಿ ಕಾರಣದಿಂದಾಗಿ ಮತ ಹಾಕುವುದಾಗಿ ಹೇಳಿದ್ದಾರೆ. 45-55 ವಯೋಮಿತಿಯ ಶೇಕಡ 57.39ರಷ್ಟು ಮಂದಿ ಗ್ಯಾರಂಟಿಯ ಪರವಾಗಿ ಮತ ಹಾಕಲು ಮುಂದಾಗಿದ್ದಾರೆ. 25-35 ವಯೋಮಿತಿಯ ಶೇಕಡ 55.31ರಷ್ಟು ಮಂದಿ ಗ್ಯಾರಂಟಿಯ ಪರವಾಗಿ ಮತ ಚಲಾಯಿಸುವ ನಿರ್ಧಾರ ಮಾಡಿದ್ದಾರೆ.