ದೇಶದಲ್ಲಿ ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಒಟ್ಟು ಏಳು ಹಂತಗಳಲ್ಲಿ ಚುನಾವಣೆ ನಡೆಸುವುದಾಗಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಘೋಷಿಸಿದ್ದಾರೆ. ಜೂನ್ 4 ರಂದು ಚುನಾವಣಾ ಫಲಿತಾಂಶ ಬರಲಿದೆ.
ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಇವಿಎಂಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದ್ದು, ಪ್ರಶ್ನೆಗೆ ಕವಿತೆಯ ಮೂಲಕ ರಾಜೀವ್ ಉತ್ತರಿಸಿದ್ದಾರೆ.
“ಇವಿಎಂಗಳನ್ನು ಕೆಲವು ಪಕ್ಷಗಳು ದೂಷಿಸುತ್ತವೆ. ಆದರೆ, ಚುನಾವಣಾ ಫಲಿತಾಂಶಗಳು ಅವರ ಪರವಾಗಿ ಬಂದಾಗ, ತಮ್ಮ ಆರೋಪಗಳನ್ನು ಹಿಂತೆಗೆದುಕೊಂಡು, ಅದೇ ಇವಿಎಂಗಳಿಗೆ ಅಂಟಿಕೊಳ್ಳುತ್ತಾರೆ. ಇವಿಎಂ 100 ಶೇ. ಸುರಕ್ಷಿತವಿದೆ” ಎಂದು ಹೇಳುವ ಮೂಲಕ ಇವಿಎಂಗಳನ್ನು ದೂಷಿಸುವವರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
An ode to #EVMs
CEC Rajiv Kumar answers all questions raised on EVMs, watch out for his self composed shayari during the press conference on announcement of Election Schedule! #ChunavKaParv #DeshKaGarv #LokasabhaElection2024 #ElectionCommission #electiondate pic.twitter.com/9np3bPF7aL
— Election Commission of India (@ECISVEEP) March 16, 2024
ಇವಿಎಂ ಬಗ್ಗೆ ಇಂದಿನ ಪತ್ರಿಕಾಗೋಷ್ಠಿಯಲ್ಲಿ ಬರಲಿದೆ ಎಂಬುದು ನನಗೆ ಚೆನ್ನಾಗಿ ಅರಿವಿತ್ತು. ಹಾಗಾಗಿ, ನಿನ್ನೆ ರಾತ್ರಿ ನಾನೇ ಖುದ್ದಾಗಿ ಕವಿತೆಯೊಂದನ್ನು ಬರೆದಿದ್ದಾಗಿ ಹೇಳುತ್ತಾ, ಹಿಂದಿಯಲ್ಲಿ ಕವಿತೆ ಓದಿದ್ದು, ಇದು ಇವಿಎಂ ಹೀಗೆ ಹೇಳುತ್ತಿದೆ ಎಂದು ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಯು ಏಪ್ರಿಲ್ 19ರಿಂದ ಜೂನ್ 1ರವರೆಗೆ 7 ಹಂತಗಳಲ್ಲಿ ನಡೆಯಲಿದೆ, ಕರ್ನಾಟಕದಲ್ಲಿ 2 ಹಂತಗಳಲ್ಲಿ ನಡೆಯಲಿದ್ದು, ಏಪ್ರಿಲ್ 26ರಂದು ಮೊದಲ ಹಂತದ ಮತದಾನ, ಮೇ 7ರಂದು ಎರಡನೇ ಹಂತದ ಮತದಾನ ನಡೆಯಲಿದೆ.