ಚುನಾವಣಾ ಕರ್ತವ್ಯದ ಭಾಗವಾಗಿ, ತೆಲಂಗಾಣದ ಮಾಜಿ ಮುಖ್ಯಮಂತ್ರಿ ಮತ್ತು ಬಿಆರ್‌ಎಸ್ ಮುಖ್ಯಸ್ಥ ಕೆ ಚಂದ್ರಶೇಖರ್ ರಾವ್ ಅವರು ಹೈದರಾಬಾದ್‌ನಿಂದ 170 ಕಿ ಮೀ ದೂರದಲ್ಲಿರುವ ಸೂರ್ಯಪೇಟ್ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಪ್ರಯಾಣಿಸುತ್ತಿದ್ದ ವಾಹನವನ್ನು ಚುನಾವಣಾ ಅಧಿಕಾರಿಗಳು ಭಾನುವಾರ ಪರಿಶೀಲಿಸಿದರು.
ಮೇ 13ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ ತೆಲಂಗಾಣದಲ್ಲಿ ಮತದಾನ ನಡೆಯಲಿದ್ದು, ಇದಕ್ಕಾಗಿ ಪ್ರಸ್ತುತ ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಯಲ್ಲಿದೆ.
ಬಿಆರ್‌ಎಸ್ ಮೂಲಗಳ ಪ್ರಕಾರ, ಕೆ ಚಂದ್ರಶೇಖರ್ ರಾವ್ ಅವರು ಬರ ಪರಿಸ್ಥಿತಿಯನ್ನು ಎದುರಿಸುತ್ತಿರುವ ಕೃಷಿ ಕ್ಷೇತ್ರಗಳನ್ನು ಪರಿಶೀಲಿಸಲು ಪ್ರವಾಸದ ಭಾಗವಾಗಿ ಸೂರ್ಯಪೇಟೆಗೆ ತೆರಳುತ್ತಿದ್ದರು.
ಈ ಸುದ್ದಿ ಓದಿದ್ದೀರಾ? ಬಿಜೆಪಿ ಮೈತ್ರಿ ಬೆನ್ನಲ್ಲೇ ಆರ್‌ಎಲ್‌ಡಿಗೆ ಆಘಾತ; ಪಕ್ಷ ತೊರೆದ ರಾಷ್ಟ್ರೀಯ ಉಪಾಧ್ಯಕ್ಷ!
“ರೈತರು ಎದುರಿಸುತ್ತಿರುವ ಬರದಂತಹ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಆತ್ಮವಿಶ್ವಾಸವನ್ನು ತುಂಬಲು ಕೆಸಿಆರ್ ರೈತರೊಂದಿಗೆ ಸಂವಹನ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಪ್ರವಾಸವನ್ನು ಕೈಗೊಂಡಿದ್ದಾಗ ಜಿಲ್ಲೆಯ ಎಡುಲಪರ್ರೆ ತಾಂಡಾ ಚೆಕ್ ಪೋಸ್ಟ್‌ನಲ್ಲಿ ವಾಹನವನ್ನು ಪರಿಶೀಲಿಸಲಾಗಿದೆ” ಎಂದು ಬಿಆರ್‌ಎಸ್ ಮೂಲಗಳು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
