ನಿರಂತರವಾಗಿ ಕೇಂದ್ರ ಸರ್ಕಾರವನ್ನು ಟೀಕಿಸುತ್ತಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ, ರಾಜಕೀಯ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್ ಅವರು “ಚುನಾವಣಾ ಬಾಂಡ್ ದೇಶದ ಅತೀ ದೊಡ್ಡ ಹಗರಣವಲ್ಲ, ವಿಶ್ವದಲ್ಲೇ ಅತೀ ದೊಡ್ಡ ಹಗರಣ ಇದಾಗಿದೆ” ಎಂದು ಹೇಳಿದರು.
ಚುನಾವಣಾ ಬಾಂಡ್ ವಿಚಾರದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, “ಚುನಾವಣಾ ಬಾಂಡ್ ಅತೀ ಪ್ರಮುಖ ಚರ್ಚೆಯ ವಿಷಯವಾಗುತ್ತದೆ. ಇದು ಬಿಜೆಪಿ ಮತ್ತು ಇತರೆ ಪಕ್ಷ ಅಥವಾ ಬಿಜೆಪಿ ಮತ್ತು ಇತರೆ ಮೈತ್ರಿಕೂಟಗಳ ನಡುವೆ ನಡೆಯುವ ಸಮರವಲ್ಲ, ಚುನಾವಣಾ ಬಾಂಡ್ ವಿಚಾರವು ಬಿಜೆಪಿ ಮತ್ತು ಭಾರತದ ಜನರ ನಡುವಿನ ಹೋರಾಟಕ್ಕೆ ಕಾರಣವಾಗಲಿದೆ” ಎಂದು ಅಭಿಪ್ರಾಯಿಸಿದರು.
ಇದನ್ನು ಓದಿದ್ದೀರಾ? ಚುನಾವಣಾ ಬಾಂಡ್ ಹಗರಣ | ದೇಣಿಗೆ ನೀಡಿ – ಗುತ್ತಿಗೆ ಪಡಿ; ಬಿಜೆಪಿಯ ದಂಧೆ ಜಗಜ್ಜಾಹೀರು
“ಸದ್ಯ ಚುನಾವಣಾ ಬಾಂಡ್ ಬಗ್ಗೆ ಎಷ್ಟು ವೇಗವಾಗಿ ಚರ್ಚೆ, ಸುದ್ದಿಯಾಗುತ್ತಿದೆಯೋ ಅದಕ್ಕೂ ಅಧಿಕ ವೇಗವಾಗಿ ಸುದ್ದಿ ಮುಂದಿನ ದಿನಗಳಲ್ಲಿ ಆಗಬಹುದು. ಈ ಹಗರಣದ ಸುದ್ದಿಯು ಈಗಾಗಲೇ ಬಿಜೆಪಿ ಅಥವಾ ಕೇಂದ್ರ ಸರ್ಕಾರದ ಹತೋಟಿ ಮೀರಿ ಹೋಗುತ್ತಿದೆ” ಎಂದು ಹೇಳಿದರು.
“The Electoral Bond Scam is not just the biggest scam in India, it is the biggest scam in the world.”
– Nirmala Sitharaman’s Husband pic.twitter.com/qKo19quV8w
— Mahua Moitra Fans (@MahuaMoitraFans) March 27, 2024
“ಪ್ರಸ್ತುತ ಚುನಾವಣಾ ಬಾಂಡ್ ವಿಚಾರವು ಸಾಮಾನ್ಯ ಜನರಿಗೆ ಶೀಘ್ರವಾಗಿ ತಲುಪುತ್ತಿದೆ. ಇದು ದೇಶದಲ್ಲೇ ಅತೀ ದೊಡ್ಡ ಹಗರಣವಲ್ಲ ಬದಲಾಗಿ ವಿಶ್ವದಲ್ಲೇ ಅತೀ ದೊಡ್ಡ ಹಗರಣ ಎಂಬುದನ್ನು ಜನರು ನಿಧಾನವಾಗಿ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಈ ಚುನಾವಣಾ ಬಾಂಡ್ ವಿಚಾರದಿಂದಾಗಿ ಕೇಂದ್ರ ಸರ್ಕಾರವು ಮತದಾರರಿಂದ ಕಠಿಣ ಶಿಕ್ಷೆಗೆ ಒಳಗಾಗಲಿದೆ” ಎಂದು ಪರಕಾಲ ಪ್ರಭಾಕರ್ ಹೇಳಿದರು.
ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಚುನಾವಣಾ ಬಾಂಡ್ ಅನ್ನು ಸುಪ್ರೀಂ ಕೋರ್ಟ್ ಅಸಂವಿಧಾನಿಕ ಎಂದು ಕರೆದಿದೆ. ಹಾಗೆಯೇ ಈ ಬಾಂಡ್ನ ಎಲ್ಲ ಮಾಹಿತಿ ಬಹಿರಂಗಪಡಿಸಲು ಎಸ್ಬಿಐಗೆ ತಿಳಿಸಿದೆ. ಹೆಚ್ಚುವರಿ ಕಾಲಾವಕಾಶ ಕೋರಿದ್ದ ಎಸ್ಬಿಐ ಸುಪ್ರೀಂ ತರಾಟೆಯ ಬಳಿಕ ಬಾಂಡ್ ಮಾಹಿತಿ ಚುನಾವಣಾ ಆಯೋಗಕ್ಕೆ ನೀಡಿದ್ದು, ಆಯೋಗ ಮಾಹಿತಿ ಪ್ರಕಟಿಸಿದೆ. ಇಡಿ, ಸಿಬಿಐ, ಐಟಿ ದಾಳಿಗಳ ಬಳಿಕ ಬಿಜೆಪಿಗೆ ಕಾರ್ಪೊರೇಟ್ ಸಂಸ್ಥೆಗಳು ದೇಣಿಗೆ ನೀಡಿರುವುದು, ಸರ್ಕಾರಿ ಗುತ್ತಿಗೆ ಪಡೆದ ಸಂಸ್ಥೆಗಳು ಬಿಜೆಪಿ, ಇತರೆ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿರುವ ಮಾಹಿತಿ ಬಹಿರಂಗವಾಗಿದೆ.